ETV Bharat / state

ಬೆಳಗಾವಿ ಮಕ್ಕಳ ಮಾರಾಟ ಪ್ರಕರಣದಲ್ಲಿ ರಕ್ಷಿಸಲ್ಪಟ್ಟಿದ್ದ ಕಂದಮ್ಮ ಸಾವು - Child Trafficking Case - CHILD TRAFFICKING CASE

ಬೆಳಗಾವಿ ಮಕ್ಕಳ ಮಾರಾಟ ಜಾಲ ಪ್ರಕರಣದಲ್ಲಿ ರಕ್ಷಿಸಲ್ಪಟ್ಟಿದ್ದ 30 ದಿನದ ಹೆಣ್ಣು ಮಗು ಸಾವನ್ನಪ್ಪಿದೆ.

ಮಗುವಿನ ಅಂತ್ಯ ಸಂಸ್ಕಾರ
ಮಗುವಿನ ಅಂತ್ಯ ಸಂಸ್ಕಾರ (ETV Bharat)
author img

By ETV Bharat Karnataka Team

Published : Jun 22, 2024, 8:59 PM IST

ಬೆಳಗಾವಿ: ಬೆಳಗಾವಿಯಲ್ಲಿ ಮಕ್ಕಳ ಮಾರಾಟ ಪ್ರಕರಣದಲ್ಲಿ ರಕ್ಷಣೆಯಾಗಿದ್ದ ಮಗು ಮೊನ್ನೆ ತಡರಾತ್ರಿ ಬೆಳಗಾವಿಯ ಜಿಲ್ಲಾಸ್ಪತ್ರೆಯಲ್ಲಿ ಸಾವನ್ನಪ್ಪಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

30 ದಿನದ ಹೆಣ್ಣು ಮಗುವನ್ನು ಕೇವಲ 60 ಸಾವಿರಕ್ಕೆ ನಕಲಿ ವೈದ್ಯ ಅಬ್ದುಲ್ ಗಫಾರ್ ಲಾಡಖಾನ್ ಎಂಬವರು ನರ್ಸ್ ಮಹಾದೇವಿ ಎಂಬ ಮಹಿಳೆಗೆ ಮಾರಾಟ ಮಾಡಿದ್ದರು. ಮಗು ಪಡೆದು ಬೆಳಗಾವಿಗೆ ಬಂದು ಮಾರಾಟ ಮಾಡುವಾಗ ಮಹಾದೇವಿ ಸಿಕ್ಕಿ ಬಿದ್ದಿದ್ದರು. ಈ ವೇಳೆ ಮಗುವನ್ನು ರಕ್ಷಿಸಿ, ಜಿಲ್ಲಾಸ್ಪತ್ರೆಯ ಚಿಕ್ಕ ಮಕ್ಕಳ ನಿಗಾ ಘಟಕದಲ್ಲಿ ಆರೈಕೆಗೆ ಇರಿಸಲಾಗಿತ್ತು. ಬೆಳವಣಿಗೆ ಕುಂಠಿತ ಹಾಗೂ ತೂಕ ಹೆಚ್ಚಳವಾಗದೆ ಅನಾರೋಗ್ಯದಿಂದ ಮಗು ಸಾವನ್ನಪ್ಪಿದೆ.

ಸಂಪ್ರದಾಯದಂತೆ ಪೊಲೀಸರು ಹಾಗೂ ಮಗುವಿನ ತಂದೆ ತಾಯಿ ಸಮ್ಮುಖದಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಗಿದೆ. ಸದಾಶಿವ ನಗರದ ರುಧ್ರಭೂಮಿಯಲ್ಲಿ ಅಂತ್ಯಕ್ರಿಯೆ ಮಾಡಲಾಗಿದೆ. ಮಗುವಿನ ಅಂತ್ಯ ಸಂಸ್ಕಾರವನ್ನು ಮಾಳಮಾರುತಿ ಪೊಲೀಸರು ನೆರವೇರಿಸಿದ್ದಾರೆ.

ಪ್ರಕರಣದಲ್ಲಿನ ಇಬ್ಬರು ಆರೋಪಿಗಳು ಪ್ರೇಮಿಗಳಅಗಿದ್ದು ಮದುವೆಗೂ ಮುನ್ನವೇ ದೈಹಿಕ‌ ಸಂಪರ್ಕ ಹೊಂದಿದ್ದರಿಂದ ಆ ಮಗು ಜನಿಸಿತ್ತು. 7 ತಿಂಗಳ ಹಸುಳೆಯನ್ನು 20 ಸಾವಿರ ರೂ. ಪಡೆದು ನಕಲಿ ವೈದ್ಯ ಆಪರೇಷನ್ ಮಾಡಿದ್ದರು. ಕೆಲ ಕಾಲ ತಮ್ಮ ಬಳಿ ಇಟ್ಟುಕೊಂಡು ಪೋಷಿಸಿ ನಂತರ ಮಗುವನ್ನು ಮಾರಾಟ ಮಾಡಿದ್ದರು. ಆದರೆ, ನಕಲಿ ವೈದ್ಯ ಹಾಗೂ ಮಾರಾಟ ಜಾಲದ ಹಣದಾಸೆಗೆ ಕಂದಮ್ಮ ಬಲಿಯಾಗಿದೆ. ಮಾಳಮಾರುತಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: ಬೆಳಗಾವಿ: ಮಕ್ಕಳ ಮಾರಾಟ ಜಾಲದ ಐವರ ಬಂಧನ; ಪ್ಲಾನ್​ ಮಾಡಿ ಖೆಡ್ಡಾಕ್ಕೆ ಬೀಳಿಸಿದ ಅಧಿಕಾರಿಗಳು - Child Trafficking Network

ಬಿಮ್ಸ್ ಚಿಕ್ಕಮಕ್ಕಳ ವಿಭಾಗದ ಮುಖ್ಯಸ್ಥ ಡಾ. ಶೈಲೇಶ ಪಾಟೀಲ ಮಾಧ್ಯಮಗಳ ಜೊತೆಗೆ ಮಾತನಾಡಿ, ಮಗು ಎಂಟು ತಿಂಗಳಿಗೆ ಜನಿಸಿತ್ತು. ತೂಕ 1 ಕೆಜಿ 200 ಗ್ರಾಂ ಮಾತ್ರ ಇತ್ತು. ಉಸಿರಾಟದ ತೊಂದರೆಯಿತ್ತು. ಮಗು ಜನ್ಮತಃ ಸೆಪ್ಟಿಸಿನಿಯಾ ಎಂಬ ಕಾಯಿಲೆಯಿಂದ ಬಳಲುತ್ತಿತ್ತು. ನಾವು ಸಾಕಷ್ಟು ಪ್ರಯತ್ನ ಮಾಡಿದೆವು. ಆದರೂ ಮಗುವನ್ನು ಉಳಿಸಿಕೊಳ್ಳಲು ಆಗಲಿಲ್ಲ ಎಂದು ಹೇಳಿದರು.

ರಕ್ಷಣಾ ಘಟಕದ ದೂರು ಆಧರಿಸಿ ಈಗಾಗಲೇ ಐವರನ್ನು ಬಂಧಿಸಲಾಗಿದೆ. ಬೈಲಹೊಂಗಲ ತಾಲೂಕಿನ ನೇಗಿನಹಾಳದ ಮಹಾದೇವಿ ಜೈನರ, ಕಿತ್ತೂರಿನ ಅಬ್ದುಲ್‌ಗಫಾರ್‌ ಲಾಡಖಾನ್‌, ಬೈಲಹೊಂಗಲ ತಾಲೂಕಿನ ತುರಕರ ಶೀಗಿಹಳ್ಳಿಯ ಚಂದನ ಸುಬೇದಾರ, ಬೈಲಹೊಂಗಲ ತಾಲೂಕಿನ ಸಂಪಗಾವಿಯ ಪವಿತ್ರಾ ಮಡಿವಾಳರ, ಧಾರವಾಡ ತಾಲೂಕಿನ ಹೊಸಟ್ಟಿಯ ಪ್ರವೀಣ ಮಡಿವಾಳರ ಬಂಧಿತ ಆರೋಪಿಗಳು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು, ಪೊಲೀಸರ ಜೊತೆ ಸೇರಿ ಪ್ರಕರಣ ಭೇದಿಸಿದ್ದರು.

ಇದನ್ನೂ ಓದಿ: ದರ್ಶನ್‌ಗೆ ನ್ಯಾಯಾಂಗ ಬಂಧನ: ಪರಪ್ಪನ ಅಗ್ರಹಾರದ ಸುತ್ತಮುತ್ತ ಸಾರ್ವಜನಿಕರಿಗೆ ನಿಷೇಧ! - Renukaswamy Murder Case

ETV Bharat Logo

Copyright © 2025 Ushodaya Enterprises Pvt. Ltd., All Rights Reserved.