ಶಿವಮೊಗ್ಗ: ಬಸವ ಜಯಂತಿ ನಿಮಿತ್ತ ಎಲ್ಲ ಕಡೆ ಬಸವೇಶ್ವರ ಪುತ್ಥಳಿ, ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಿ ಆಚರಿಸುವುದು ಸಾಮಾನ್ಯ. ಆದರೆ ಶಿವಮೊಗ್ಗ ಬೆಕ್ಕಿನ ಕಲ್ಮಠದ ಆವರಣದಲ್ಲಿ ಇಂದು ಬೆಳಗ್ಗೆ ಬೆಕ್ಕಿನ ಕಲ್ಮಠದ ಪೀಠಾಧಿಪತಿಗಳಾದ ಡಾ. ಮುರುಘರಾಜೇಂದ್ರ ಮಹಾಸ್ವಾಮಿಗಳು ಅಂಬಲಿ ಹಂಚುವ ಮೂಲಕ ಚಾಲನೆ ನೀಡಿದರು.
ಅಂಬಲಿಯ ಜೊತೆ ಕಡಲೇ ಕಾಳು ಉಸಳಿಯನ್ನು ಸಹ ನೀಡಲಾಯಿತು. ಬೇಸಿಗೆಯ ರಸ ಬಿಸಿಲಿಗೆ ರಾಗಿ ಅಂಬಲಿ ತುಂಬಾ ತಂಪಾಗಿರುತ್ತದೆ. ಇದರಿಂದ ರಾಗಿ ಅಂಬಲಿಯನ್ನು ಹಂಚಲಾಯಿತು. ಈ ಮೂಲಕ ಬಸವ ಜಯಂತಿಯನ್ನು ಅರ್ಥ ಪೂರ್ಣವಾಗಿ ಆಚರಿಸಲಾಯಿತು.
ಬಸವೇಶ್ವರ ಪುತ್ಥಳಿಗೆ ಪುಷ್ಪ ನಮನ: ನಗರದ ಗಾಂಧಿ ಪಾರ್ಕ್ ಮುಂಭಾಗದಲ್ಲಿ ಇರುವ ಬಸವೇಶ್ವರ ಪುತ್ಥಳಿಗೆ ನಗರದ ಎಲ್ಲಾ ಸ್ವಾಮಿಜಿಗಳು ಹಾಗೂ ಬಸವಣ್ಣನ ಅನುಯಾಯಿಗಳು ಪುಷ್ಪ ನಮನ ಸಲ್ಲಿಸಿದರು.
ಇದನ್ನೂ ಓದಿ: ಸೂರ್ಯ ಚಂದ್ರರಿರುವವರೆಗೂ ಬಸವಣ್ಣನವರ ವಚನಗಳು ಮನುಕುಲಕ್ಕೆ ದಾರಿದೀಪ: ವಿಜಯೇಂದ್ರ - Basaveshwar Jayanti 2024