ETV Bharat / state

ರಸ್ತೆ ಗುಂಡಿಗಳನ್ನು ತ್ವರಿತವಾಗಿ ಮುಚ್ಚಲು ಬಂತು ಇಕೋಫಿಕ್ಸ್​ ಮಿಶ್ರಣ: ಬೆಂಗಳೂರಿನಲ್ಲಿ ಪ್ರಾಯೋಗಿಕ ಚಾಲನೆ - ECOFIX MIXING TECHNOLOGY

ರಸ್ತೆಯಲ್ಲಿನ ಗುಂಡಿಗಳನ್ನು ತ್ವರಿತವಾಗಿ ಮುಚ್ಚುವ ಮೂಲಕ ಸ್ಟೀಲ್ ಸ್ಲ್ಯಾಗ್ ಆಧಾರಿತ ಇಕೋಫಿಕ್ಸ್​ ಮಿಶ್ರಣ ತಂತ್ರಜ್ಞಾನದ ಪ್ರಾಯೋಗಿಕ ಯೋಜನೆಗೆ ಬೆಂಗಳೂರಿನಲ್ಲಿ ಚಾಲನೆ ನೀಡಲಾಯಿತು.

BBMP launches pilot for Ecofix mix tech for pothole repairs during rainy season
ಇಕೋಫಿಕ್ಸ್​ ಮಿಶ್ರಣ ತಂತ್ರಜ್ಞಾನದ ಪ್ರಾಯೋಗಿಕ ಯೋಜನೆಗೆ ಚಾಲನೆ ನೀಡಿದ ಕ್ಷಣ (ETV Bharat)
author img

By ETV Bharat Karnataka Team

Published : Dec 12, 2024, 9:43 PM IST

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಮಳೆಗಾಲದ ವೇಳೆ ರಸ್ತೆ ಗುಂಡಿಗಳನ್ನು ತ್ವರಿತವಾಗಿ ಮುಚ್ಚುವ ಸಲುವಾಗಿ ಪ್ರಾಯೋಗಿಕವಾಗಿ 'ಇಕೋಫಿಕ್ಸ್​ ಮಿಶ್ರಣ' ಬಳಕೆ ಮಾಡಲಾಗಿದೆ ಎಂದು ಬಿಬಿಎಂಪಿಯ ಪ್ರಧಾನ ಅಭಿಯಂತರ ಡಾ.ಬಿ.ಎಸ್.ಪ್ರಹ್ಲಾದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬೆಂಗಳೂರು ನಗರದಲ್ಲಿ ರಸ್ತೆ ಗುಂಡಿಗಳ ಸಮಸ್ಯೆಯಿಂದಾಗಿ ಸಂಚಾರ ದಟ್ಟಣೆ ಉಂಟುಮಾಡುವುದರ ಜೊತೆಗೆ ರಸ್ತೆ ಅಪಘಾತಗಳಿಗೂ ಕೂಡಾ ಕಾರಣವಾಗುತ್ತದೆ. ಈ ಸವಾಲನ್ನು ಎದುರಿಸಲು ಭಾರತದ ಪ್ರಮುಖ ರಸ್ತೆ ಸಂಶೋಧನಾ ಸಂಸ್ಥೆ ಸಿಎಸ್‌ಆರ್‌ಐ-ಸಿಆರ್‌ಆರ್‌ಐ, ರಮುಕ ಗ್ಲೋಬಲ್ ಸರ್ವೀಸ್ ಹಾಗೂ ಪಾಲಿಕೆಯ ಸಹಯೋಗದೊಂದಿಗೆ ಬೆಂಗಳೂರು ಅಂಜಿನಿ ದೇವಾಲಯದ ಬಳಿಯ ಅವೆನ್ಯೂ ರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚುವ ಮೂಲಕ ಸ್ಟೀಲ್ ಸ್ಲ್ಯಾಗ್ ಆಧಾರಿತ ಇಕೋಫಿಕ್ಸ್​ ಮಿಶ್ರಣ ತಂತ್ರಜ್ಞಾನದ ಪ್ರಾಯೋಗಿಕ ಯೋಜನೆಗೆ ಚಾಲನೆ ನೀಡಲಾಗಿದೆ ಎಂದು ಪ್ರಹ್ಲಾದ್ ಹೇಳಿದರು.

ಭಾರತದ ಪ್ರಮುಖ ರಸ್ತೆ ಸಂಶೋಧನಾ ಸಂಸ್ಥೆಯಾದ ಸೆಂಟ್ರಲ್ ರೋಡ್ ರಿಸರ್ಚ್ ಇನ್ಸ್​ಟಿಟ್ಯೂಟ್​ ಮತ್ತು ಪಾಲಿಕೆ ಸಹಯೋಗದೊಂದಿಗೆ ಬೆಂಗಳೂರು ನಗರದ ರಸ್ತೆಯ ಗುಂಡಿಗಳನ್ನು ಸರಿಪಡಿಸಲು ಕೈಜೋಡಿಸಿದ್ದು, ನಗರದ ರಸ್ತೆಗಳು ಮಳೆಗಾಲದಲ್ಲಿ ಹಾಟ್ ಮಿಕ್ಸ್ ಪ್ಲಾಂಟ್ ಕಾರ್ಯನಿರ್ವಹಿಸಲು ಸಾಧ್ಯವಾಗದ ಸಂದರ್ಭದಲ್ಲಿ, ಪರಿಸರಸ್ನೇಹಿ ರೀತಿಯಲ್ಲಿ ಬಾಳಿಕೆ ಬರುವ ರಸ್ತೆ ದುರಸ್ತಿ ಮಾಡಲು ಇಕೋಫಿಕ್ಸ್​ ತಂತ್ರಜ್ಞಾನವು ನಗರದ ರಸ್ತೆಗಳಿಗೆ ವರದಾನವಾಗಲಿದೆ ಎಂದು ಅವರು ವಿವರಿಸಿದರು.

BBMP launches pilot for Ecofix mix tech for pothole repairs during rainy season
ಇಕೋಫಿಕ್ಸ್​ ಮಿಶ್ರಣದಿಂದ ಮುಚ್ಚಲಾದ ಗುಂಡಿ (ETV Bharat)

ಇಕೋಫಿಕ್ಸ್​ ಉಕ್ಕಿನ ಕೈಗಾರಿಕೆಗಳ ಕೈಗಾರಿಕಾ ತ್ಯಾಜ್ಯವನ್ನು ಅಂದರೆ ಕಬ್ಬಿಣ ಮತ್ತು ಉಕ್ಕಿನ ಸ್ಕ್ಯಾಗ್ ಬಳಸಿ ಅಭಿವೃದ್ಧಿಪಡಿಸಲಾಗಿದೆ ಮತ್ತು ಯಾವುದೇ ನಿರ್ಜಲೀಕರಣದ ಅಗತ್ಯವಿಲ್ಲದೇ ನೀರು ತುಂಬಿದ ಗುಂಡಿಯನ್ನು ಸರಿಪಡಿಸಬಹುದಾಗಿದೆ. ರಸ್ತೆ ಗುಂಡಿಗಳನ್ನು ಮುಚ್ಚಬೇಕಾದರೆ ಗುಂಡಿಗಳನ್ನು ನೀರು ತೆರವು ಮಾಡುವ ಹಾಗು ಸ್ವಚ್ಛ ಮಾಡುವ ಮತ್ತು ಟ್ಯಾಕ್ ಕೋಟ್ ಅನ್ನು ಅನ್ವಯಿಸುವ ಅಗತ್ಯವಿರುತ್ತದೆ. ಆದರೆ, ಇಕೋಫಿಕ್ಸ್​ ಮಿಶ್ರಣಕ್ಕೆ ಯಾವುದೇ ಟ್ಯಾಕ್ ಕೋಟ್ ಅಗತ್ಯವಿಲ್ಲದೇ ನೀರು ತುಂಬಿದ ಸ್ಥಿತಿಯಲ್ಲಿಯೂ ಗುಂಡಿ ದುರಸ್ತಿಪಡಿಸಬಹುದಾಗಿದೆ. ದುರಸ್ತಿಯಾದ ಕೂಡಲೆ ರಸ್ತೆ ಸಂಚಾರಕ್ಕೆ ಅವಕಾಶ ನೀಡಬಹುದಾಗಿದೆ. ಸಂಸ್ಕರಿತ ಕಬ್ಬಿಣ ಮತ್ತು ಉಕ್ಕಿನ ಸ್ಲ್ಯಾಗ್ ಮತ್ತು ವಿಶೇಷವಾಗಿ ಕಸ್ಟಮೈಸ್ ಮಾಡಿದ ಬೈಂಡರ್‌ ಅನ್ನು ಬಳಸಿಕೊಂಡು ಇಕೋಫಿಕ್ಸ್​ ಮಿಶ್ರಣವನ್ನು ತಯಾರಿಸಲಾಗಿರುವುದರಿಂದ ಬಾಳಿಕೆ ಮತ್ತು ದೀರ್ಘಾಯುಷ್ಯದ ವಿಷಯದಲ್ಲಿ ದುರಸ್ತಿ ಮಾಡಿದ ಮೇಲ್ಮೈ ಸಾಮಾನ್ಯ ರಸ್ತೆಗಿಂತ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಎಂದರು.

ಇಕೋಫಿಕ್ಸ್​ ಮಿಶ್ರಣದ ತಂತ್ರಜ್ಞಾನವು ಗುಜರಾತ್, ಜಾರ್ಖಂಡ್, ಮಹಾರಾಷ್ಟ್ರ ಮತ್ತು ಅರುಣಾಚಲ ಪ್ರದೇಶ ಹಾಗೂ ದೇಶದ ವಿವಿಧ ರಾಜ್ಯಗಳಲ್ಲಿಗಳಲ್ಲಿಯೂ ಜಾರಿಗೊಳಿಸಲಾಗಿದ್ದು, ಬಾಳಿಕೆ ಮತ್ತು ಕಾರ್ಯಕ್ಷಮತೆಯ ವಿಷಯದಲ್ಲಿ ಈಗಾಗಲೇ ಉತ್ತಮವಾಗಿ ಪರೀಕ್ಷಿಸಲ್ಪಟ್ಟಿದೆ ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಪಾಟ್ ಹೋಲ್ ಮಿಕ್ಸ್ ಆವಿಷ್ಕಾರ: ರಸ್ತೆಗಳ ಗುಂಡಿ ಮುಚ್ಚಲು ಬಂತು ಮತ್ತೊಂದು ನಾವೀನ್ಯ ಕಾಯಕಲ್ಪ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.