ETV Bharat / state

ವಕ್ಫ್ ಆಸ್ತಿ ರಾಷ್ಟ್ರೀಕರಣಗೊಳಿಸುವಂತೆ ಕೋರಿ ಬಸನಗೌಡ ಯತ್ನಾಳ್ ಪ್ರಧಾನಿ ಮೋದಿಗೆ ಪತ್ರ - YATNAL LETTER TO PM MODI

ದಿನದಿಂದ ದಿನಕ್ಕೆ ವಕ್ಫ್​ ಆಸ್ತಿ ವಿಚಾರ ಚರ್ಚೆಗೆ ಗ್ರಾಸವಾಗುತ್ತಿದೆ. ಈಗ ವಕ್ಫ್ ಆಸ್ತಿ ರಾಷ್ಟ್ರೀಕರಣಗೊಳಿಸುವಂತೆ ಕೋರಿ ಬಸನಗೌಡ ಪಾಟೀಲ್​ ಯತ್ನಾಳ್ ಅವರು ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ.

BASANAGOWDA YATNAL  PM MODI  WAQF PROPERTY  BENGALURU
ಬಸನಗೌಡ ಯತ್ನಾಳ್ (ETV Bharat)
author img

By ETV Bharat Karnataka Team

Published : Nov 1, 2024, 11:48 AM IST

ಬೆಂಗಳೂರು: ವಕ್ಫ್ ಆಸ್ತಿಗಳನ್ನು ರಾಷ್ಟ್ರೀಕರಣಗೊಳಿಸುವಂತೆ ಕೋರಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ. ಕರ್ನಾಟಕದಲ್ಲಿ ವಕ್ಫ್ ಮಂಡಳಿ, ರೈತರು, ಮಠ, ದೇವಸ್ಥಾನದ ಭೂಮಿಯನ್ನು ತನ್ನದೆಂದು ಹೇಳಿ ನೋಟೀಸ್ ಕಳುಹಿಸುತ್ತಿದೆ. ಇದು ಸಂವಿಧಾನದಲ್ಲಿನ ಸಮಾನತೆಯ ತತ್ವಕ್ಕೆ ವಿರುದ್ಧವಾಗಿದೆ. ಪ್ರಸಕ್ತ ಇರುವ ವಕ್ಫ್ ಕಾಯ್ದೆಯಿಂದಾಗಿ ಖಾಸಗಿ ಭೂಮಿ, ಕೃಷಿ ಭೂಮಿ, ಐತಿಹಾಸಿಕ ಸ್ಥಳ, ಹಾಗೂ ಸ್ವಾತಂತ್ರ್ಯ ಪೂರ್ವದ ಆಸ್ತಿಗಳನ್ನು ಕಾನೂನುಬಾಹಿರವಾಗಿ ಒತ್ತುವರಿ ಮಾಡಲಾಗುತ್ತಿದೆ. ಹೀಗಾಗಿ ವಕ್ಫ್ ಆಸ್ತಿಯನ್ನು ರಾಷ್ಟ್ರೀಕರಣಗೊಳಿಸುವಂತೆ ತಮ್ಮಲ್ಲಿ ಕೋರುತ್ತೇನೆ ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.

ದೇಶದ ನಾಗರಿಕ ಹಕ್ಕನ್ನು ರಕ್ಷಿಸಲು ತಕ್ಷಣ ಮಧ್ಯಪ್ರವೇಶ ಮಾಡುವಂತೆ ಕೋರಿಕೆ: ವಕ್ಫ್ ಆಸ್ತಿಗಳನ್ನು ರಾಷ್ಟ್ರೀಕರಣಗೊಳಿಸಿದರೆ ಪಾರದರ್ಶಕತೆ ಜೊತೆಗೆ ಅರ್ಹ ಭೂ ಮಾಲೀಕರ ಹಕ್ಕನ್ನೂ ಕಾಪಾಡುತ್ತದೆ. ವಕ್ಫ್ ಆಸ್ತಿಗಳನ್ನು ಸಾರ್ವಜನಿಕ ಬಳಕೆಗೆ ಬಳಸಲು ಅನುಕೂಲವಾಗಲಿದೆ. ಯಾವುದೇ ಜಾತಿ, ಧರ್ಮಾತೀತವಾಗಿ ವಕ್ಫ್ ಆಸ್ತಿಗಳನ್ನು ಶಾಲೆ, ಕಾಲೇಜು, ಆಸ್ಪತ್ರೆ, ಸಂಶೋಧನಾ ಕೇಂದ್ರ ಮುಂತಾದವುಗಳನ್ನು ನಿರ್ಮಿಸಲು ಸಹಕಾರಿಯಾಗಲಿದೆ. ಹೀಗಾಗಿ ದೇಶದ ನಾಗರಿಕ ಹಕ್ಕನ್ನು ರಕ್ಷಿಸಲು ತಾವೂ ಕೂಡಲೇ ವಕ್ಫ್ ಆಸ್ತಿಗಳ ನಿರ್ವಹಣೆಗೆ ನೀತಿ ರೂಪಿಸುವಂತೆ ಕೋಡುತ್ತೇನೆ ಎಂದು ಮನವಿ ಮಾಡಿದ್ದಾರೆ.

ವಕ್ಫ್ ಕಾನೂನಿನಂತೆ ಹಿಂದೂ, ಜೈನ್, ಸಿಖ್ ಮುಂತಾದ ಸಮುದಾಯಗಳಲ್ಲಿ ಕಾನೂನು ಇಲ್ಲ. ವಕ್ಫ್ ಕಾನೂನು ಜಾತ್ಯತೀತತೆ, ಏಕತೆ, ಸಮಗ್ರತೆಗೆ ವಿರುದ್ಧವಾಗಿದೆ. ಯಾವುದೇ ಆಸ್ತಿಯನ್ನು ದಾನ ಮಾಡಿದರೆ ಅದು ವಕ್ಫ್ ಆಸ್ತಿಯಾಗುತ್ತದೆ. ಸಂವಿಧಾನದಲ್ಲಿ ವಕ್ಫ್ ಎಂಬ ಪದವನ್ನು ಎಲ್ಲೂ ಬಳಸಿಲ್ಲ. ಅಲ್ಪಸಂಖ್ಯಾತರನ್ನು ಓಲೈಸಲು ಕಾಂಗ್ರೆಸ್ ಇದೊಂದು ಅಸ್ತ್ರವಾಗಿದೆ. ವಕ್ಫ್ ಕಾನೂನು ದೇಶದ ಪ್ರಜಾಪ್ರಭುತ್ವದ ಮೇಲಿನ ದಾಳಿಯಾಗಿದೆ. ವಿಜಯಪುರ ಜಿಲ್ಲೆಯಲ್ಲಿ ಸಿಂಧಗಿಯ ವಿರಕ್ತ ಮಠಕ್ಕೆ 12-13ನೇ ಶತಮಾನದಲ್ಲಿ ರಾಣಿ ಅಬ್ಬಕ್ಕ ಆಸ್ತಿ ದಾನ ಮಾಡಿದ್ದರು. ವಕ್ಫ್ ಅಸ್ತಿತ್ವಕ್ಕೆ ಬಂದಿದ್ದು, 19ನೇ ಶತಮಾನದಲ್ಲಿ. ಆದರೆ, ವಕ್ಫ್ ಮಂಡಳಿ ಈಗ ಆ ಆಸ್ತಿ ತನ್ನದೆಂದು ಹೇಳುತ್ತಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

BASANAGOWDA YATNAL  PM MODI  WAQF PROPERTY  BENGALURU
ಬಸನಗೌಡ ಯತ್ನಾಳ್ ಪ್ರಧಾನಿ ಮೋದಿಗೆ ಪತ್ರ (ETV Bharat)

ಕೇಂದ್ರ ಸರ್ಕಾರ ವಕ್ಫ್ ಕಾಯ್ದೆಗೆ ತಿದ್ದುಪಡಿ ತರುವ ಮಸೂದೆ ಸಂಬಂಧ ಜಂಟಿ ಸದನ ಸಮಿತಿ ರಚಿಸಿದ ಬಳಿಕ ವಕ್ಫ್ ಮಂಡಳಿ ನೋಟೀಸ್ ಕಳುಹಿಸುವುದು, ಆರ್​ಟಿಸಿಯಲ್ಲಿ ಹೆಸರು ಬದಲಾಯಿಸುವ ಘಟನೆಗಳು ಹೆಚ್ಚಾಗಿವೆ. ಹೀಗಾಗಿ ವಕ್ಫ್ ಆಸ್ತಿಯ ರಾಷ್ಟ್ರೀಕರಣದಿಂದ ಭೂಮಿಯ ಸಮಾನ ಹಂಚಿಕೆಯಾಗಲಿದೆ ಮತ್ತು ಪಟ್ಟಬದ್ರ ಹಿತಾಸಕ್ತಿಗಳ ಬಳಿ ಭೂಮಿ ಕ್ರೋಢೀಕರಣವಾಗುವುದು ನಿಯಂತ್ರಣವಾಗುತ್ತದೆ. ಹೀಗಾಗಿ ಎಲ್ಲಾ ವಕ್ಫ್ ಆಸ್ತಿಗಳನ್ನು ರಾಷ್ಟ್ರೀಕರಣಗೊಳಿಸುವಂತೆ ಕೋರುತ್ತೇನೆ ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.

ಓದಿ: ಅಂದು - ಇಂದು ಬೆಳಗಾವಿ ಕನ್ನಡ ರಾಜ್ಯೋತ್ಸವ: ಹೋರಾಟಗಾರರು, ಸಾಹಿತಿಗಳು ಹೇಳೋದೇನು?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.