ಬೆಂಗಳೂರು: ವಿಧಾನಸಭಾ ಕ್ಷೇತ್ರದಿಂದ ವಿಧಾನಪರಿಷತ್ತಿಗೆ ನಡೆದ ಉಪ ಚುನಾವಣೆಯಲ್ಲಿ ಚುನಾಯಿತರಾಗಿರುವ ಬಸನಗೌಡ ಬಾದರ್ಲಿ ಅವರು ಇಂದು ಪ್ರಮಾಣ ವಚನ ಸ್ವೀಕರಿಸಿದರು. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸರಳ ಸಮಾರಂಭದಲ್ಲಿ ವಿಧಾನಪರಿಷತ್ನ ಸಭಾಪತಿ ಬಸವರಾಜ ಹೊರಟ್ಟಿ ಅವರು ಪ್ರಮಾಣ ವಚನ ಬೋಧಿಸಿದರು.
![Basanagowda Badarli Taking Oath As Parishad Member](https://etvbharatimages.akamaized.net/etvbharat/prod-images/11-07-2024/kn-bng-02-oath-taking-ceremony-script-7208083_11072024133341_1107f_1720685021_581.jpg)
ಈ ಸಂದರ್ಭದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್, ಆಹಾರ ಸಚಿವ ಕೆ.ಎಚ್.ಮುನಿಯಪ್ಪ, ಸಣ್ಣ ನೀರಾವರಿ ಸಚಿವ ಬೋಸರಾಜು ವಿಧಾನ ಪರಿಷತ್ ನ ಮುಖ್ಯ ಸಚೇತಕ ಸಲೀಂ ಅಹ್ಮದ್ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.
![Basanagowda Badarli Taking Oath As Parishad Member](https://etvbharatimages.akamaized.net/etvbharat/prod-images/11-07-2024/kn-bng-02-oath-taking-ceremony-script-7208083_11072024133341_1107f_1720685021_455.jpg)
ಫ್ಲೆಕ್ಸ್ ಹಾಕಿಸಿದ್ದಕ್ಕೆ ಡಿಸಿಎಂ ಗರಂ: ಬಸನಗೌಡ ಬಾದರ್ಲಿ ಅವರು ಇಂದು ಪ್ರಮಾಣ ವಚನ ಸ್ವೀಕಾರ ಸಮಾರಂಭದ ಹಿನ್ನೆಲೆಯಲ್ಲಿ ವಿಧಾನಸೌಧದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಭಾವಚಿತ್ರವಿರುವ ಶುಭ ಕೋರುವ ಫ್ಲೆಕ್ಸ್ ಹಾಕಿಸಿದ್ದಕ್ಕೆ ಶಿವಕುಮಾರ್ ಗರಂ ಆದರು.
![Basanagowda Badarli Taking Oath As Parishad Member](https://etvbharatimages.akamaized.net/etvbharat/prod-images/11-07-2024/kn-bng-02-oath-taking-ceremony-script-7208083_11072024133341_1107f_1720685021_702.jpg)
ವಿಧಾನಸೌಧದಕ್ಕೆ ಆಗಮಿಸಿದ ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷ ಮೊಹಮ್ಮದ್ ನಲಪಾಡ್ ಅವರನ್ನು ತರಾಟೆಗೆ ತೆಗೆದುಕೊಂಡ ಡಿಕೆಶಿ, ಯಾರು ಫ್ಲೆಕ್ಸ್ ಹಾಕಿಸಿದ್ದು, ಕೇಸ್ ಹಾಕಿಸುತ್ತೇನೆ ಎಂದು ಗದರಿದರು. ಅಗ ನಲಪಾಡ್, ನಾನು ಫ್ಲೆಕ್ಸ್ ಹಾಕಿಸಿಲ್ಲ ಎಂದು ಸಮಜಾಯಿಷಿ ನೀಡಿದರು.
ಇದನ್ನೂ ಓದಿ: ವಾಲ್ಮೀಕಿ ನಿಗಮದ ಹಗರಣ: ಇಡಿ ದಾಳಿ ಅವಶ್ಯಕತೆ ಇರಲಿಲ್ಲ- ಡಿಸಿಎಂ ಡಿ.ಕೆ.ಶಿವಕುಮಾರ್ - DCM D K Shivakumar