ETV Bharat / state

ಬೆಳಗಾವಿಯಲ್ಲಿ ಬಿಜೆಪಿ ಶಾಸಕಾಂಗ ಸಭೆ: ಯತ್ನಾಳ್​, ರಮೇಶ್​ ಜಾರಕಿಹೊಳಿ ಗೈರು - REBEL MLAS ABSENT CLP MEETING

ಬೆಳಗಾವಿಯಲ್ಲಿ ಬಿಜೆಪಿ ಶಾಸಕಾಂಗ ಸಭೆ ನಡೆದಿದ್ದು, ಸಭೆಯಲ್ಲಿ ಪ್ರತಿಪಕ್ಷ ನಾಯಕ ಆರ್.ಅಶೋಕ್ ಮಾತನಾಡಿ, ಯಾರೇ ಬಂದು ಏನೇ ಸಮಸ್ಯೆ ಇದ್ದರೂ ನಮ್ಮೊಂದಿಗೆ ಮುಕ್ತವಾಗಿ ಮಾತನಾಡಬಹುದು ಎಂದು ಹೇಳಿದ್ದಾರೆ.

REBEL MLAS ABSENT CLP MEETING
ಬೆಳಗಾವಿಯಲ್ಲಿ ನಡೆದ ಬಿಜೆಪಿ ಪಕ್ಷದ ಶಾಸಕಾಂಗ ಸಭೆ (ETV Bharat)
author img

By ETV Bharat Karnataka Team

Published : Dec 10, 2024, 6:42 AM IST

ಬೆಳಗಾವಿ: ಮೊದಲ ದಿನ‌ದ ಚಳಿಗಾಲ ಅಧಿವೇಶನ ಮುಗಿಯುತ್ತಿದ್ದಂತೆ ಬೆಳಗಾವಿ ನಗರದ ಖಾಸಗಿ ಹೋಟೆಲ್​ನಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಯಿತು. ಆದ್ರೆ ರೆಬಲ್ ಶಾಸಕರು ಸಭೆಯಲ್ಲಿ ಗೈರಾಗಿದ್ದು ಎದ್ದು ಕಾಣಿಸಿತು.

ರಾಜ್ಯ ಸಹ ಉಸ್ತುವಾರಿ ಸುಧಾಕರ ರೆಡ್ಡಿ, ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್. ಅಶೋಕ್, ವಿಧಾನಪರಿಷತ್ತಿನ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹಾಗೂ ಶಾಸಕರು, ವಿಧಾನಪರಿಷತ್ ಸದಸ್ಯರು ಶಾಸಕಾಂಗ ಸಭೆಯಲ್ಲಿ ಭಾಗವಹಿಸಿದ್ದರು. ಪಕ್ಷ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ವಿರುದ್ಧ ಸಮರ ಸಾರಿರುವ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ, ರಮೇಶ್​ ಜಾರಕಿಹೊಳಿ ಸಭೆಯಲ್ಲಿ ಗೈರಾಗಿದ್ದರು.

Basanagouda Patil Yatnal, Ramesh Jarkiholi absent from BJP legislative party meeting held in Belagavi
ಬೆಳಗಾವಿ ನಗರದ ಖಾಸಗಿ ಹೋಟೆಲ್​ನಲ್ಲಿ ನಡೆದ ಬಿಜೆಪಿ ಪಕ್ಷದ ಶಾಸಕಾಂಗ ಸಭೆ (ETV Bharat)

ಶಾಸಕಾಂಗ ಸಭೆ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಆರ್. ಅಶೋಕ್​, ಶಾಸಕರ ಅಭಿಪ್ರಾಯ ಕೇಳಿದ್ದೇವೆ. ಹೆಚ್ಚಿನ ಶಾಸಕರು ಅನುದಾನ ತಾರತಮ್ಯ ಕುರಿತು ಮಾತಾಡಿದ್ದಾರೆ. ಕಾಂಗ್ರೆಸ್ ಶಾಸಕರಿಗೆ ಅನುದಾನ ಕೊಡುತ್ತಿಲ್ಲ. ಅದೇ ರೀತಿ ನಮಗೂ ಕೊಡುತ್ತಿಲ್ಲ. ಅನುದಾನ ನೀಡದೇ ಇರುವುದರಿಂದ ರಸ್ತೆಗಳು ಹಾಳಾಗಿವೆ. ಆಸ್ಪತ್ರೆಗಳಲ್ಲಿ ಔಷಧಿಗಳಿಲ್ಲ‌‌. ಕುಡಿಯುವ ನೀರಿನ ಸಮಸ್ಯೆಯಿದೆ. ಪ್ರವಾಹ ಆಗಿದ್ದು, ಪರಿಹಾರದ ಹಣ ಬಿಡುಗಡೆ ಮಾಡಿಲ್ಲ‌. ಈ ಬಗ್ಗೆ ಹೆಚ್ಚು ಚರ್ಚೆಗೆ ತೆಗೆದುಕೊಳ್ಳಬೇಕೆಂದು ಮಾತುಕತೆ ಆಗಿದೆ ಎಂದರು.

ಅದೇ ರೀತಿ ಬಾಣಂತಿಯರು ಮತ್ತು ಮಕ್ಕಳ ಸಾವಿನ ಬಗ್ಗೆಯೂ ಚರ್ಚೆ ಮಾಡಬೇಕು‌. ಅಲ್ಲದೇ ಮಲೆನಾಡು ಪ್ರದೇಶದ ವಿಚಾರಗಳು ಇಲ್ಲಿ ಚರ್ಚೆಗೆ ಬರುವುದಿಲ್ಲ‌. ಬೆಳಗಾವಿಗೆ ಬಂದ ನಂತರ ಉತ್ತರಕರ್ನಾಟಕ ಎನ್ನುತ್ತಾರೆ. ನಮ್ಮ ಪಾಡು ಏನು ಎಂದು ಆ ಭಾಗದ ಶಾಸಕರು ಅಭಿಪ್ರಾಯ ಪಟ್ಟರು. ಅಲ್ಲದೇ ರಾಜ್ಯದಲ್ಲಿ ಯಥೇಚ್ಚವಾಗಿ ಭ್ರಷ್ಟಾಚಾರ ನಡೆಯುತ್ತಿದೆ. ದುಡ್ಡು ಕೊಡದೇ ಯಾವುದೇ ಕೆಲಸ ಆಗುತ್ತಿಲ್ಲ. ಗುತ್ತಿಗೆದಾರರು ಲಂಚ ಕೊಟ್ಟು ಅನುದಾನ ತರುತ್ತಾರೆ. ಶಾಸಕರಿಗೆ ಗೌರವ ಸಿಗುತ್ತಿಲ್ಲ. ಈ ವಿಚಾರಗಳ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆ ಆಗಬೇಕು ಎಂದಿದ್ದಾರೆ ಎಂದು ತಿಳಿಸಿದರು.

ಕೃಷ್ಣಾ ಮೇಲ್ದಂಡೆ ಯೋಜನೆಗೆ ಅನುದಾನ ಕೊಡುತ್ತಿಲ್ಲ. ಕೆಲಸವೇ ಪ್ರಾರಂಭ ಆಗುತ್ತಿಲ್ಲ. ಹಾಗಾಗಿ, ಸರಿಯಾಗಿ ನೀರಿನ ಶೇಖರಣೆ ಮಾಡಲು ಸಾಧ್ಯವಾಗುತ್ತಿಲ್ಲ. ವಿಶೇಷವಾಗಿ ಉತ್ತರಕರ್ನಾಟಕ ಭಾಗದ ನೀರಾವರಿ ಯೋಜನೆ, ಅಭಿವೃದ್ಧಿ ಕೆಲಸಗಳಿಗೆ ಹೆಚ್ಚಿನ ಒತ್ತು ನೀಡಲು ಚರ್ಚೆಯಾಗಿದೆ.

ಸಭೆಗೆ ಉಸ್ತುವಾರಿ ಸುಧಾಕರ ರೆಡ್ಡಿ ಅವರು ಕೂಡ ಬಂದಿದ್ದರು. ರಾಜ್ಯಾಧ್ಯಕ್ಷ ವಿಜಯೇಂದ್ರ ಕೂಡ ಇದ್ದರು. ನಾನು ಇಲ್ಲಿಯೇ ಇರುತ್ತೇನೆ. ಯಾರೇ ಬಂದು ಏನೇ ಸಮಸ್ಯೆ ಇದ್ದರೂ ಮುಕ್ತವಾಗಿ ನನ್ನ ಜೊತೆಗೆ ಮಾತಾಡಬಹುದು. ಯಾವುದೇ ಭಿನ್ನಾಭಿಪ್ರಾಯ ಇನ್ಮುಂದೆ ಇರಬಾರದು. ನಾವೆಲ್ಲಾ ಒಟ್ಟಿಗೆ ಹೋಗೋಣ ಎಂಬ ಮಾತು ಹೇಳಿದ್ದಾರೆ. ಇದಕ್ಕೆ ಎಲ್ಲರೂ ಸಹಮತ ವ್ಯಕ್ತಪಡಿಸಿದ್ದಾರೆ. ಕೇಂದ್ರದಿಂದ ಬಂದ ನಾಯಕರು ಅದಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ. ಸಭೆಯಲ್ಲಿ ಎಲ್ಲರೂ‌ ಸಂತೋಷದಿಂದ ಭಾಗಿಯಾಗಿದ್ದರು. ಮುಂದೆ ನಾವೆಲ್ಲಾ ಒಟ್ಟಾಗಿ ಕಾಂಗ್ರೆಸ್ ದುರಾಡಳಿತ, ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತೇವೆ. ಉತ್ತರಕರ್ನಾಟಕದ ಚರ್ಚೆ ಇರುವುದರಿಂದ ನಿಲುವಳಿ ಸೂಚನೆಗೆ ಐದು ದಿನ‌ ಚರ್ಚೆಗೆ ಸಿಗಬಹುದು. ಆ ವೇಳೆ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಕೆಲಸ ಮಾಡೋಣ ಎಂದು ಹೇಳಿದ್ದಾರೆ ಎಂದು ಅಶೋಕ್ ಹೇಳಿದರು‌.

ಯತ್ನಾಳ್​, ರಮೇಶ್​ ಜಾರಕಿಹೊಳಿ ಅವರು ಫೋನ್‌ ಮಾಡಿ ಸಭೆಗೆ ಬರಲು ಆಗುವುದಿಲ್ಲ ಎಂದಿದ್ದಾರೆ. ವಿಧಾನಸಭೆ ಅಧಿವೇಶನದಲ್ಲೂ ಹೇಳಿದ್ದಾರೆ‌. ಮುಂದಿನ‌ ಸಭೆಗೆ ಬರುತ್ತೇವೆ ಅಂತಾ ತಿಳಿಸಿದ್ದಾರೆ. ಯಾರಿಗಾದರೂ ಏನಾದರೂ ಸಮಸ್ಯೆ ಇದ್ದರೆ ದಯವಿಟ್ಟು ಮುಕ್ತವಾಗಿ ಬಂದು ಮಾತಾಡುವಂತೆ ನಮ್ಮ ಅಧ್ಯಕ್ಷರು ಹೇಳಿದ್ದಾರೆ‌. ಹಾಗಾಗಿ, ಎಲ್ಲ ಅಸಮಾಧಾನ ಮುಕ್ತಾಯವಾಗಿದೆ. ಇವತ್ತು ಅಸೆಂಬ್ಲಿಯಲ್ಲಿ ನಾವು ಎಲ್ಲಾ ಒಟ್ಟಾಗಿದ್ದೆವು. ಪಂಚಮಸಾಲಿ ಹೋರಾಟಕ್ಕೆ ತಡೆ ಮಾಡಿದ್ದಕ್ಕೆ ನಾವೆಲ್ಲಾ ಧರಣಿ ಮಾಡಿದ್ದರಿಂದ ನಮಗೆ ಗೆಲುವಾಗಿದೆ. ಪ್ರತಿಭಟನೆಗೆ ಅನುಮತಿ ಸಿಕ್ಕಿದೆ ಎಂದರು.

ನೀವು ಪಂಚಮಸಾಲಿ ಹೋರಾಟದಲ್ಲಿ ಪಾಲ್ಗೊಳ್ಳುತ್ತಿರಾ ಎಂಬ ಮಾಧ್ಯಮಗಳ ಪ್ರಶ್ನೆಗೆ, ಕೂಡಲಸಂಗಮ ಸ್ವಾಮೀಜಿ ಮತ್ತು ಉಪನಾಯಕ ಅರವಿಂದ ಬೆಲ್ಲದ ಹೋರಾಟಕ್ಕೆ ನನಗೂ ಆಹ್ವಾನಿಸಿದ್ದಾರೆ‌. ಹಾಗಾಗಿ, ಮಂಗಳವಾರ ಸದನದಲ್ಲಿ ವಕ್ಫ್ ಬೋರ್ಡ್ ಬಗ್ಗೆ ಚರ್ಚೆಯಿದೆ. ಅದಾದ ಬಳಿಕ ನಾನು ಕೂಡ ಅವರ ಹೋರಾಟದಲ್ಲಿ ಭಾಗಿಯಾಗುತ್ತೇನೆ. ನಾವೆಲ್ಲರೂ ಒಟ್ಟಾಗಿ ಹೋಗುತ್ತೇವೆ ಎಂದು ತಿಳಿಸಿದರು.

ನಮ್ಮ ಸರ್ಕಾರದ ಅವಧಿಯಲ್ಲಿ ಯಾವುದೇ ಹೋರಾಟಕ್ಕೂ ನಾವು ತಡೆಯೊಡ್ಡಿಲ್ಲ. ಅದರಲ್ಲೂ ಪಂಚಮಸಾಲಿ ಹೋರಾಟಕ್ಕೆ ತಡೆದಿಲ್ಲ‌. ಆದರೆ, ಈ ಸರ್ಕಾರ ಟ್ರ್ಯಾಕ್ಟರ್, ಬಸ್ ನಲ್ಲಿ ಬರಬಾರದು. 15 ಕಿ.ಮೀ. ದೂರದಿಂದ ನಡೆದುಕೊಂಡು ಬರಬೇಕು. ಪಂಚಮಸಾಲಿ ಹೋರಾಟಕ್ಕೆ ಸರ್ಕಾರ ಭಯಬಿದ್ದಿದೆ. ಹಾಗಾಗಿ, ಅದಕ್ಕೋಸ್ಕರ ಹೋರಾಟವನ್ನು ತಡೆಯಲು ಪ್ರಯತ್ನಿಸುತ್ತಿದ್ದಾರೆ. ಇದೊಂದು ರೀತಿ ತುಘಲಕ್ ಆಡಳಿತವಾಗಿದ್ದು, ಮಂಗಳವಾರ ಏನಾದರೂ ಹೋರಾಟ ತಡೆದು, ಅನಾಹುತ ಸಂಭವಿಸಿದರೆ ಅದಕ್ಕೆ ಸರ್ಕಾರವೇ ನೇರ ಕಾರಣ ಎಂದು ಆರ್‌.ಅಶೋಕ್​ ಎಚ್ಚರಿಸಿದರು.

ಇದನ್ನೂ ಓದಿ: ಅಶೋಕ್, ಅಶ್ವತ್ಥ ನಾರಾಯಣ, ಯತ್ನಾಳ್ ನೀವೂ ಶೂದ್ರರೇ: ಜಾತಿ ವ್ಯವಸ್ಥೆ ಬಗ್ಗೆ ಸದನದಲ್ಲಿ ಸಿಎಂ ಪಾಠ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.