ETV Bharat / state

ರೇವ್ ಪಾರ್ಟಿ ಪ್ರಕರಣದ ಆರೋಪಿಗೆ ಆಂಧ್ರ ರಾಜಕಾರಣಿಗಳ ನಂಟು..? - Bangalore Rave Party Case

Bangalore Rave Party Accused Links with YSRCP Leaders : ಬೆಂಗಳೂರು ರೇವ್ ಪಾರ್ಟಿ ಪ್ರಕರಣದಲ್ಲಿ ಎ-2 ಆಗಿರುವ ಅರುಣ್ ಕುಮಾರ್, ಸಿಎಂ ಜಗನ್ ಮತ್ತು ರಾಯಚೋಟಿ ಶಾಸಕ ಶ್ರೀಕಾಂತ್ ರೆಡ್ಡಿ ಜೊತೆಗಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಅವರು ಹೈದರಾಬಾದ್‌ನಲ್ಲಿ ತಂಗಿದ್ದಾಗ ವೈಎಸ್‌ಆರ್‌ಸಿಪಿಯ ಪ್ರಮುಖ ನಾಯಕರೊಂದಿಗೆ ಚಿತ್ರಗಳನ್ನು ತೆಗೆದುಕೊಂಡಿರುವಂತೆ ತೋರುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

YSRCP LEADERS  DRUG CASE  MLA CAR ISSUE  BENGALURU
ರೇವ್ ಪಾರ್ಟಿ ಪ್ರಕರಣದ ಆರೋಪಿಗೆ ಆಂಧ್ರ ರಾಜಕಾರಣಿಗಳ ನಂಟು (ಕೃಪೆ : ETV Bharat Karnataka)
author img

By ETV Bharat Karnataka Team

Published : May 25, 2024, 4:20 PM IST

ಬೆಂಗಳೂರು: ರಾಜ್ಯ ಹಾಗೂ ಎರಡು ತೆಲುಗು ರಾಜ್ಯಗಳಲ್ಲಿ ಸಂಚಲನ ಮೂಡಿಸಿದ್ದ ಬೆಂಗಳೂರು ರೇವ್ ಪಾರ್ಟಿ ಪ್ರಕರಣದಲ್ಲಿ ಅರೆಸ್ಟ್ ಆಗಿ, ರಿಮಾಂಡ್ ಆಗಿರುವ ಎ-2 ಅರುಣ್ ಕುಮಾರ್ ಅವರು ವೈಎಸ್‌ಆರ್‌ಸಿಪಿಯ ಪ್ರಮುಖ ನಾಯಕರ ಜೊತೆ ನಂಟು ಹೊಂದಿರುವುದು ಬೆಳಕಿಗೆ ಬಂದಿದೆ. ಚಿತ್ತೂರು ಜಿಲ್ಲೆಯ ತವಣಂಪಲ್ಲೆ ತಾಲೂಕಿನ ಮಾದವನೇರಿ ಮೂಲದ ಆರೋಪಿಗಳು ಡ್ರಗ್ಸ್ ದಂಧೆ ನಡೆಸುತ್ತಿದ್ದು, ಆಡಳಿತ ಪಕ್ಷದ ನಾಯಕರ ಸಂಪರ್ಕದಲ್ಲಿದ್ದಾರೆ ಎಂಬ ವದಂತಿ ಹಬ್ಬಿದೆ.

ಬೆಂಗಳೂರು ರೇವ್ ಪಾರ್ಟಿ ಪ್ರಕರಣದಲ್ಲಿ ಎ-2 ಆಗಿರುವ ಅರುಣ್ ಕುಮಾರ್, ಸಿಎಂ ಜಗನ್ ಮತ್ತು ರಾಯಚೋಟಿ ಶಾಸಕ ಶ್ರೀಕಾಂತ್ ರೆಡ್ಡಿ ಜೊತೆಗಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಅವರು ಹೈದರಾಬಾದ್‌ನಲ್ಲಿ ತಂಗಿದ್ದಾಗ ವೈಎಸ್‌ಆರ್‌ಸಿಪಿಯ ಪ್ರಮುಖ ನಾಯಕರೊಂದಿಗೆ ಚಿತ್ರಗಳನ್ನು ತೆಗೆದುಕೊಂಡಿರುವಂತೆ ತೋರುತ್ತಿದೆ ಎಂಬ ಮಾತುಗಳಿವೆ. ಬೆಂಗಳೂರು ರೇವ್ ಪಾರ್ಟಿಯಲ್ಲಿ ಸಚಿವ ಕಾಕಣಿ ಗೋವರ್ಧನ್ ರೆಡ್ಡಿ ಹೆಸರಿನಲ್ಲಿ ಎಂಎಲ್ಎ ಎಂಬ ಹೆಸರಿನ ವಾಹನವೊಂದು ಸಂಚಲನ ಮೂಡಿಸಿತ್ತು. ಈ ವಿಚಾರಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಸಚಿವರು ಈಗಾಗಲೇ ಸ್ಪಷ್ಟನೆ ಕೂಡಾ ನೀಡಿದ್ದಾರೆ. ಈ ಪ್ರಕರಣದಲ್ಲಿ ವಿಜಯವಾಡದ ನಿವಾಸಿ ಬುಕ್ಕಿ ಲಂಕಾಪಲ್ಲಿ ವಾಸು ಅವರನ್ನು ಪೊಲೀಸರು ಎ1 ಎಂದು ಸೇರಿಸಿದ್ದಾರೆ.

ಎ2 ಅರುಣ್ ಕುಮಾರ್ ಮತ್ತು ಆಡಳಿತ ಪಕ್ಷದೊಂದಿಗೆ ಅವರ ಸಂಪರ್ಕಗಳು ಸಂಚಲನ ಮೂಡಿಸಿವೆ. ವಿಜಯವಾಡ 1 ಟೌನ್​ ನಿವಾಸಿ ಡಿ.ನಾಗಬಾಬು ಅವರನ್ನು ಎಫ್‌ಐಆರ್‌ನಲ್ಲಿ ಎ-3 ಎಂದು ಸೇರಿಸಲಾಗಿತ್ತು. ಈ ಮೂವರಲ್ಲಿ ಅರುಣ್ ಕುಮಾರ್ ವೈಎಸ್​ಆರ್​ಸಿಪಿ ಜೊತೆ ಸಂಪರ್ಕ ಹೊಂದಿದ್ದಾರೆ ಎಂದು ಅವರ ಆಪ್ತರು ಹೇಳಿದ್ದಾರೆ. ರೇವ್ ಪಾರ್ಟಿಯಲ್ಲಿ ಹಲವು ಡ್ರಗ್ಸ್ ಬಳಕೆ ಮಾಡಿರುವ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದು, ಪಾರ್ಟಿಯಲ್ಲಿ ಹಲವು ಅಪಾಯಕಾರಿ ಡ್ರಗ್ಸ್ ಬಳಸಿರುವುದು ಪತ್ತೆಯಾಗಿದೆ. ಪೊಲೀಸ್ ತನಿಖೆ ಮುಂದುವರೆದಿದೆ. ಈ ಬೆಂಗಳೂರು ರೇವ್ ಪಾರ್ಟಿಯಲ್ಲಿ ಹಲವು ಟಾಲಿವುಡ್ ನಟರು ಭಾಗವಹಿಸಿದ್ದು ಎಲ್ಲೆಡೆ ಸಂಚಲನ ಮೂಡಿಸಿತ್ತು. ಮತ್ತೊಂದೆಡೆ ಮದ್ದು ಪರೀಕ್ಷೆಯಲ್ಲಿ 86 ಮಂದಿ ಪಾಸಿಟಿವ್ ಬಂದಿದ್ದು ಮತ್ತಷ್ಟು ರೋಚಕತೆ ಮೂಡಿಸಿದೆ.

ಹೈದರಾಬಾದ್ ಮತ್ತು ಬೆಂಗಳೂರಿನಲ್ಲಿ ವ್ಯಾಪಾರ ಮಾಡುವ ಅರುಣ್ ಕುಮಾರ್ ಅವರನ್ನು ವೈಎಸ್​ಆರ್​ಸಿಪಿ ನಾಯಕರು ಆಗಾಗ ಭೇಟಿಯಾಗುತ್ತಾರೆ. ಈಗಾಗಲೇ ಈ ಪ್ರಕರಣದಲ್ಲಿ ಲಂಕಾಪಲ್ಲಿ ವಾಸು ಹಾಗೂ ಅರುಣ್ ಕುಮಾರ್ ಅವರನ್ನು ಬೆಂಗಳೂರು ಪೊಲೀಸರು ಇದೇ ತಿಂಗಳ 21 ರಂದು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ನಂತರ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಿದ್ದರು.

ಓದಿ: ಬಿಟ್ ಕಾಯಿನ್ ಹಗರಣದ ಆರೋಪಿಗಳ ವಿರುದ್ಧ ಕೋಕಾ ಕಾಯ್ದೆ - BITCOIN CASE

ETV Bharat Logo

Copyright © 2024 Ushodaya Enterprises Pvt. Ltd., All Rights Reserved.