ಬೆಂಗಳೂರು: ವಿಶ್ವ ಶ್ರವಣ ದಿನಾಚರಣೆ ಪ್ರಯುಕ್ತ ನಗರದ ಜೆ ಪಿ ನಗರದ ನೂತನ ಎರಡನೇ ಹಂತದ ನಾಯಕ್ಸ್ ಸ್ಪೀಚ್ ಅಂಡ್ ಹಿಯರಿಂಗ್ ಕ್ಲಿನಿಕ್ ಉದ್ಘಾಟನೆ ಹಾಗೂ ಶ್ರವಣ ಉಚಿತ ತಪಾಸಣೆ ಶಿಬಿರ ಭಾನುವಾರ ನಡೆಯಿತು.
ಕರ್ನಾಟಕ ಲೋಕಸೇವಾ ಆಯೋಗದ ಮಾಜಿ ಸದಸ್ಯೆ ಹಾಗೂ ದಿವ್ಯಾಂಗ ಅಸೋಸಿಯೇಷನ್ ಸದಸ್ಯೆ ಡಾ ಮಂಗಳ ಶ್ರೀಧರ, ಶ್ರವಣ ತಜ್ಞ ಪುರುಷೋತ್ತಮ, ವಾಲ್ಮೀಕಿ ನಾಯಕ ಮಹಾಸಭಾ ಅಧ್ಯಕ್ಷ ಸಿರಿಗೆರೆ ತಿಪ್ಪೇಶ್, ನಾಯಕ್ಸ್ ಸ್ಪೀಚ್ ಎಂಡ್ ಹಿಯರಿಂಗ್ ಕ್ಲಿನಿಕ್ ಮುಖ್ಯಸ್ಥ ಎಂ.ಎಸ್.ಜೆ ನಾಯಕ ಹಾಗೂ ಎನ್ರಿಚ್ ರಿಹ್ಯಾಬಿಲಿಟೇಷನ್ ಟ್ರಸ್ಟ್ ಮುಖ್ಯಸ್ಥ ಮೋಹನ್ ಕುಮಾರ್ ಅವರು ಶ್ರವಣ ಉಚಿತ ತಪಾಸಣೆ ಶಿಬಿರದಲ್ಲಿ ಭಾಗವಹಿಸಿದ್ದರು.
ಈ ವೇಳೆ ಶ್ರವಣ ತಜ್ಞ ಪುರುಷೋತ್ತಮ ಮಾತನಾಡಿ, ಶ್ರವಣ ದೋಷದ ನಿವಾರಣೆ ಹಾಗೂ ಜಾಗೃತಿಗಾಗಿ ವಿಶ್ವ ಆರೋಗ್ಯ ಸಂಸ್ಥೆಯೂ ಪ್ರತಿವರ್ಷ ಮಾರ್ಚ್ 3ರಂದು ವಿಶ್ವ ಶ್ರವಣ ದಿನ ಆಚರಿಸುತ್ತಿದೆ. ಮಕ್ಕಳ ಶ್ರವಣ ಸಹಿತ ಕಿವಿ ಸಮಸ್ಯೆಯನ್ನು ಆರಂಭದ ಎರಡು ವರ್ಷಗಳಲ್ಲಿ ಪತ್ತೆ ಹಚ್ಚಿದರೆ, ಮಗು ಮಾತು ಕಲಿಯಲು ಹಾಗೂ ಆರೋಗ್ಯಕರ ಬೆಳವಣಿಗೆಗೆ ಸಹಕಾರಿ ಆಗುತ್ತದೆ ಎಂದು ತಿಳಿಸಿದರು.
ಕೆಪಿಎಸ್ಸಿ ಮಾಜಿ ಸದಸ್ಯೆ ಡಾ ಮಂಗಳ ಶ್ರೀಧರ ಮಾತನಾಡಿ, ಕಿವಿ ಸಮಸ್ಯೆ ಬಗ್ಗೆ ಈಗಲೂ ಅರಿವಿನ ಕೊರತೆ ಇದೆ. ಈ ಕುರಿತು ವ್ಯಾಪಕ ಪ್ರಚಾರದ ಅಗತ್ಯವಿದೆ. ಎಲ್ಲ ಅಂಗಗಳಂತೆ ಕಿವಿ ಸಹಿತ ಮಹತ್ವದ ಅಂಗವಾಗಿದೆ. ಬಹಳಷ್ಟು ಜನ ಕಿವಿಯ ಬಗ್ಗೆ ಹೆಚ್ಚು ಕಾಳಜಿ ವಹಿಸುವುದಿಲ್ಲ. ಪಾಲಕರು ತಮ್ಮ ಮಕ್ಕಳ ಕಿವಿ ಸಮಸ್ಯೆ ಬಗ್ಗೆ ಜಾಗೃತಿ ವಹಿಸಬೇಕು ಎಂದು ಹೇಳಿದರು.
ನಾಯಕ್ಸ್ ಸ್ಪೀಚ್ ಎಂಡ್ ಹಿಯರಿಂಗ್ ಕ್ಲಿನಿಕ್ ಮುಖ್ಯಸ್ಥ ಎಂ ಎಸ್ ಜೆ ನಾಯಕ್ ಮಾತನಾಡಿ, ನಾಯಕ್ಸ್ ಸ್ಪೀಚ್ ಅಂಡ್ ಹಿಯರಿಂಗ್ ಕ್ಲಿನಿಕ್ ಹಾಗೂ ಎನ್ರಿಚ್ ರಿಹ್ಯಾಬಿಲಿಟೇಷನ್ ಸೆಂಟರ್ನಲ್ಲಿ ಪ್ರತಿ ಮಂಗಳವಾರ ಮಕ್ಕಳಿಗೆ ಉಚಿತ ತಪಾಸಣಾ ಶಿಬಿರ ಹಮ್ಮಿಕೊಳ್ಳುತ್ತಿದೆ ಎಂದು ಹೇಳಿದರು.
ಇದನ್ನೂ ಓದಿ:ನಮ್ಮ ಶಿಕ್ಷಣ ಸಂಸ್ಥೆಗಳು ವಿಶ್ವ ದರ್ಜೆಯ ಕೌಶಲ್ಯ ಜ್ಞಾನ ಒದಗಿಸಬೇಕು: ಥಾವರ್ ಚಂದ್ ಗೆಹ್ಲೋಟ್