ಬೆಂಗಳೂರು: ಎಂಎಲ್‌ಸಿ ಚುನಾವಣೆ ಮತ್ತು ಲೋಕಸಭಾ ಚುನಾವಣಾ ಮತ ಎಣಿಕೆ ಇರುವ ಹಿನ್ನೆಲೆಯಲ್ಲಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಇಂದಿನಿಂದ 5 ದಿನಗಳ ಕಾಲ ಮದ್ಯ ಮಾರಾಟಕ್ಕೆ ನಿಷೇಧವಿರಲಿದೆ. ಇಂದು ಸಂಜೆ 4 ಗಂಟೆಯಿಂದಲೇ ಮದ್ಯದಂಗಡಿ, ಬಾರ್ಗಳು ಬಂದ್ ಆಗಲಿವೆ.
ಜೂನ್ 3 ರಂದು ಶಿಕ್ಷಕರು ಹಾಗೂ ಪದವೀಧರ ಕ್ಷೇತ್ರಗಳ ವಿಧಾನಪರಿಷತ್ ಚುನಾವಣೆ ನಡೆಯುತ್ತಿರುವುದರಿಂದ ಆಯಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ 48 ಗಂಟೆಗಳಿಗೂ ಮುನ್ನ ಮದ್ಯ ಮಾರಾಟ ನಿಷೇಧಿಸಲಾಗಿದೆ. ಜೂನ್ 4ರಂದು ಲೋಕಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ಇರುವುದರಿಂದ ಜೂನ್ 3ರ ಮಧ್ಯರಾತ್ರಿಯಿಂದ 4ರ ಮಧ್ಯರಾತ್ರಿಯವರೆಗೂ ನಿಷೇಧವಿರಲಿದೆ.
ಇನ್ನು ಜೂನ್ 6ರಂದು ಶಿಕ್ಷಕರು ಹಾಗೂ ಪದವೀಧರ ಕ್ಷೇತ್ರಗಳ ಚುನಾವಣೆಯ ಮತ ಎಣಿಕೆ ಕಾರ್ಯ ಇರುವುದರಿಂದ ಪುನಃ ನಿಷೇಧ ಮುಂದುವರೆಯಲಿದೆ. ಈ ನಡುವೆ ಜೂನ್ 5ರಂದು ಸಾಮಾನ್ಯವಾಗಿ ಮದ್ಯ ಮಾರಾಟವಿರಲಿದೆ.
ಇದನ್ನೂ ಓದಿ: ಜೂನ್ 1ರಿಂದ 6ರ ರವರೆಗೆ ಮದ್ಯ ಮಾರಾಟ ಬಂದ್ - Ban On Alcohol Sale