ಬಳ್ಳಾರಿ: 10ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆ, ಜಿಂದಾಲ್ನ ವಿದ್ಯಾನಗರದಲ್ಲಿರುವ ಟೌನ್ ಶಿಪ್ನಲ್ಲಿ ಕಾರ್ಯಕ್ರಮ ಜರುಗಿತು. ಈವೆಂಟ್ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ನಟಿ ಶ್ರೀಲೀಲಾ ವೇದಿಕೆ ಹಂಚಿಕೊಂಡರು. ಸಿಎಂಗೆ ಸಚಿವ ಸಂತೋಷ್ ಲಾಡ್, ಸಂಸದ ತುಕಾರಾಂ ಸೇರಿದಂತೆ ಹಲವು ನಾಯಕರು ಸಾಥ್ ನೀಡಿದರು.
ಕಾರ್ಯಕ್ರಮದ ಬಳಿಕ ಮಾತನಾಡಿದ ನಟಿ ಶ್ರೀಲೀಲಾ, ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಭಾಗಿ ಆಗಿದ್ದು ಬಹಳಾನೇ ಸಂತೋಷ ಕೊಟ್ಟಿದೆ. ಸೂರ್ಯ ನಮಸ್ಕಾರ, ಪ್ರಾಣಾಯಾಮ ಮನುಷ್ಯನಿಗೆ ಬಹಳ ಮುಖ್ಯ. ನಾನು ಮನೆಯಲ್ಲಿ ಯೋಗ ಮಾಡುತ್ತೇನೆ. ಬಳ್ಳಾರಿಗೆ ಬಂದಿದ್ದು ನನ್ನ ಮನೆಗೆ ಬಂದ ಅನುಭವ ಕೊಟ್ಟಿದೆ. ಸಿಎಂ ಸಿದ್ದರಾಮಯ್ಯ ಅವರ ಜೊತೆಗೆ ವೇದಿಕೆ ಹಂಚಿಕೊಂಡಿದ್ದು ನನ್ನ ಅದೃಷ್ಟ. ಯಾವೆಲ್ಲಾ ಸಿನಿಮಾ ಮಾಡುತ್ತಿದ್ದೀರೆಂದು ನನ್ನಲ್ಲಿ ಕೇಳಿದ್ರು. ದೊಡ್ಡವರ ಜೊತೆ ವೇದಿಕೆ ಹಂಚಿಕೊಂಡಾಗ ಜವಾಬ್ದಾರಿ ಮತ್ತಷ್ಟು ಹೆಚ್ಚುತ್ತದೆ ಎಂದು ತಿಳಿಸಿದರು.
ಇದನ್ನೂ ಓದಿ: ಅಶ್ವಿನಿ ದತ್ ಪಾದ ಸ್ಪರ್ಶಿಸಿದ ಅಮಿತಾಭ್: ಬಚ್ಚನ್ ಬಗ್ಗೆ ನಿರ್ಮಾಪಕರು ಹೇಳಿದ್ದೇನು? - Aswini Dutt
ಇದೇ ವೇಳೆ, ನಟ ದರ್ಶನ್ ವಿರುದ್ಧದ ಆರೋಪಗಳ ಬಗ್ಗೆ ನಟಿಗೆ ಪ್ರಶ್ನೆಗಳು ಎದುರಾದವು. ಪ್ರತಿಕ್ರಿಯೆ ನೀಡಲು ನಟಿ ಹಿಂದೇಟು ಹಾಕಿದರು. ಯೋಗಾ ಡೇ ಬಗ್ಗೆ ಮಾತ್ರ ಪ್ರಶ್ನೆ ಕೇಳಿ ಎಂದು ವಚನಾನಂದ ಸ್ವಾಮೀಜಿ ತಿಳಿಸಿದರು.
ಇದನ್ನೂ ಓದಿ: ಶಿವಮೊಗ್ಗದಲ್ಲಿ ಯೋಗ ದಿನದ ಸಡಗರ: ತುಮಕೂರಿನಲ್ಲಿ ಸಚಿವ ಸೋಮಣ್ಣರಿಂದ ಯೋಗಾಸನ - Yoga Day 2024