ETV Bharat / state

ಬಿ.ವೈ.ರಾಘವೇಂದ್ರಗೆ ಮೋದಿ ಸಂಪುಟದಲ್ಲಿ ಸಿಗದ ಸ್ಥಾನ: ಯಡಿಯೂರಪ್ಪ ಏನಂದ್ರು? - B S Yediyurappa

author img

By ETV Bharat Karnataka Team

Published : Jun 10, 2024, 3:52 PM IST

ಬಿ.ವೈ.ರಾಘವೇಂದ್ರ ಅವರಿಗೆ ಮೋದಿ ಸಂಪುಟದಲ್ಲಿ ಸ್ಥಾನ ಸಿಗದ ಕುರಿತು ಬಿ.ಎಸ್.ಯಡಿಯೂರಪ್ಪ ಪ್ರತಿಕ್ರಿಯಿಸಿದ್ದಾರೆ.

B S Yediyurappa
ಬಿ.ಎಸ್.ಯಡಿಯೂರಪ್ಪ (ETV Bharat)

ಬೆಂಗಳೂರು: ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ 4ನೇ ಬಾರಿಗೆ ಆಯ್ಕೆಯಾಗಿರುವ ಬಿ.ವೈ.ರಾಘವೇಂದ್ರಗೆ ಕೇಂದ್ರ ಸಂಪುಟದಲ್ಲಿ ಸ್ಥಾನ ಸಿಗುವ ನಿರೀಕ್ಷೆ ಹುಸಿಯಾದರೂ, ಅವಕಾಶಕ್ಕಾಗಿ ಕಾದು ನೋಡುವ ನಿಲುವಿಗೆ ಪಕ್ಷದ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ ಬಂದಿದ್ದು, ಮುಂದೆ ಅವಕಾಶಗಳಿವೆ ಎಂಬ ಹೇಳಿಕೆ ನೀಡಿದ್ದಾರೆ. ಪುತ್ರನಿಗೆ ಭವಿಷ್ಯದ ಅವಕಾಶದ ಅಪೇಕ್ಷೆಯನ್ನು ಅವರು ವ್ಯಕ್ತಪಡಿಸಿದ್ದಾರೆ.

ನವದೆಹಲಿಯಲ್ಲಿ ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಮೊಗ್ಗ ಪ್ರತಿನಿಧಿಸುತ್ತಿರುವ ತಮ್ಮ ಪುತ್ರ ಬಿ.ವೈ.ರಾಘವೇಂದ್ರಗೆ ಮೋದಿ ಅವರ ಸಂಪುಟದಲ್ಲಿ ಅವಕಾಶ ಸಿಕ್ಕಿಲ್ಲ. ಮುಂದೆ ಅವಕಾಶಗಳಿವೆ, ಕಾದು ನೋಡೋಣ. ಈಗ ಸಿಗದಿರುವುದಕ್ಕೆ ಬೇಸರವಿಲ್ಲ ಎಂದರು.

ಕರ್ನಾಟಕಕ್ಕೆ ಮೋದಿ ಸಂಪುಟದಲ್ಲಿ ಐದು ಸ್ಥಾನ ಸಿಕ್ಕಿದೆ. ಎಲ್ಲರನ್ನು ಬಳಸಿಕೊಂಡು ರಾಜ್ಯದ ಅಭಿವೃದ್ಧಿಗೆ ಗಮನ ಕೊಡಬೇಕು ಎಂದು ಸೂಚಿಸಿದ್ದೇನೆ. ಎಲ್ಲರೂ ಬಂದು ಭೇಟಿಯಾಗಿದ್ದಾರೆ. ಎಲ್ಲರ ಜೊತೆ ಮಾತನಾಡಿದ್ದೇನೆ. ನಮ್ಮ ರಾಜ್ಯಕ್ಕೆ ಹೆಚ್ಚಿನ ಅವಕಾಶ ಸಿಕ್ಕಿದೆ. ಇದರ ಉಪಯೋಗ ರಾಜ್ಯಕ್ಕಾಗಲಿದೆ. ಈ ಅವಕಾಶವನ್ನು ಬಳಸಿಕೊಂಡು ರಾಜ್ಯದ ಅಭಿವೃದ್ಧಿಗೆ ಗಮನ ಕೊಡಬೇಕು ಎಂದಿದ್ದೇನೆ ಎಂದು ತಿಳಿಸಿದರು.

ಪ್ರಾತಿನಿಧ್ಯಕ್ಕಿಂತ ಸಮುದಾಯಗಳ ಹಿತ ಮುಖ್ಯ-ಸಿ.ಟಿ.ರವಿ: ಮೋದಿ ಸಚಿವ ಸಂಪುಟದಲ್ಲಿ ದಲಿತ ಹಾಗೂ ಒಬಿಸಿ ಸಮುದಾಯವನ್ನು ಕಡೆಗಣಿಸಲಾಗಿದೆ ಎನ್ನುವುದು ಸರಿಯಲ್ಲ. ಆ ಸಮುದಾಯಕ್ಕೆ ಸೇರಿದ ವ್ಯಕ್ತಿ ಪ್ರಾತಿನಿಧ್ಯಕ್ಕೆ ಮಹತ್ವ ಕೊಡುವುದಕ್ಕಿಂತ ಆ ಸಮುದಾಯದ ಉದ್ಧಾರಕ್ಕೆ ಮೋದಿ ಮಹತ್ವ ಕೊಡಲಿದ್ದಾರೆ ಎಂದು ಮಾಜಿ ಸಚಿವ ಸಿ.ಟಿ.ರವಿ ಹೇಳಿದರು.

ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ದಲಿತ, ಒಬಿಸಿಗೆ ಹೆಚ್ಚಿನ ಸ್ಥಾನ ಸಿಕ್ಕಿದೆ. ಆದರೆ ಇದು ರಾಷ್ಟ್ರೀಯ ಮಟ್ಟದ ಸಂಪುಟ, ಕರ್ನಾಟಕದ ಸಂಪುಟ ಅಲ್ಲ. ಹಾಗಾಗಿ ಮುಂದಿನ ದಿನಗಳಲ್ಲಿ ಎಲ್ಲಿ ಏನು ಕೊರತೆ ಇದೆಯೋ ಎನ್ನುವುದನ್ನು ನೋಡಿ ಆ ಕೊರತೆ ತುಂಬುವ ಕೆಲಸವನ್ನು ಮಾಡಲಾಗುತ್ತದೆ. ವ್ಯಕ್ತಿ ಪ್ರಾತಿನಿಧ್ಯಕ್ಕೆ ಮಹತ್ವ ಕೊಡಬೇಕೋ, ಇಲ್ಲ ಆ ಸಮುದಾಯದ ಉದ್ದಾರಕ್ಕೆ ಮಹತ್ವ ಕೊಡಬೇಕೋ? ಮೋದಿ ಆ ಸಮುದಾಯದ ಉದ್ದಾರಕ್ಕೆ ಮಹತ್ವ ಕೊಟ್ಟು ಕೆಲಸ ಮಾಡಲಿದ್ದಾರೆ ಎಂದರು.

ರಾಜ್ಯದ ಇಬ್ಬರು ಮಾಜಿ ಮುಖ್ಯಮಂತ್ರಿಗಳಿಗೆ ಕೇಂದ್ರದ ಸಂಪುಟದಲ್ಲಿ ಅವಕಾಶ ಸಿಗದೆ ನಿರಾಶರಾಗಿರುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿ, ಮಾಜಿ ಮುಖ್ಯಮಂತ್ರಿಗಳ ಬೇಸರಕ್ಕೆ ನಾನು ಏನೂ ಮಾತನಾಡಲು ಬಯಸಲ್ಲ. ಆದರೆ ದೇಶದ ಜನರಿಗೆ, ಕಾರ್ಯಕರ್ತರಿಗೆ ಮೋದಿ ಮತ್ತೊಮ್ಮೆ ಪ್ರಧಾನಿಯಾಗಿರುವುದು ಖುಷಿಯಾಗಿದೆ. ಮೋದಿ ಸಂಪುಟದಲ್ಲಿ ಅವಕಾಶ ಸಿಗಲಿಲ್ಲ ಎನ್ನುವ ಮಾಜಿ ಸಿಎಂಗಳ ಬೇಸರದ ಬಗ್ಗೆ ಕಾಮೆಂಟ್ ಮಾಡಲ್ಲ. ಆದರೆ ರಾಜ್ಯ, ದೇಶದ ಜನ ಖುಷಿಯಾಗಿದ್ದಾರೆ. ರಾಜಕಾರಣದ ಉದ್ದೇಶ ನಾನು ಖುಷಿಯಾಗಿರುವುದಲ್ಲ, ಜನ ಖುಷಿಯಾಗಿರುವಂತೆ ನೋಡಿಕೊಳ್ಳುವುದು ರಾಜಕಾರಣ. ಅದು ಈಗ ಆಗಿದೆ ಎಂದು ಹೇಳಿದರು.

ಇದನ್ನೂ ಓದಿ: ಮೋದಿ 3.0 ಸರ್ಕಾರದಲ್ಲಿ ರಾಜ್ಯದ ಐವರಿಗೆ ಅವಕಾಶ: ಯಾರಿಗೆ ಸಂಪುಟ ದರ್ಜೆ ಸ್ಥಾನ? - MODI CABINET

ETV Bharat Logo

Copyright © 2024 Ushodaya Enterprises Pvt. Ltd., All Rights Reserved.