ETV Bharat / state

ರಾಜ್ಯ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ನಾಟಕಕಾರ ಪೂಜಾರ್ ಚಂದ್ರಪ್ಪ ನಿಧನ - DRAMA ARTIST DEATH

15 ದಿನಗಳ ಹಿಂದೆ ತಮ್ಮ ಸ್ನೇಹಿತರಿಗೆ, ಕಾಲ ಸನ್ನಿಹಿತವಾಗಿದೆ ಎಂದು ಚಂದ್ರಪ್ಪ ಅವರು ಪತ್ರ ಬರೆದಿದ್ದರು.

Pujar Chandrappa
ಪೂಜಾರ್ ಚಂದ್ರಪ್ಪ (ETV Bharat)
author img

By ETV Bharat Karnataka Team

Published : Oct 9, 2024, 9:35 AM IST

ವಿಜಯನಗರ: ಪ್ರಖ್ಯಾತ ನಾಟಕಕಾರ, ರಾಜ್ಯ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪೂಜಾರ್ ಚಂದ್ರಪ್ಪ(76) ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ. ಹರಪನಹಳ್ಳಿ ತಾಲೂಕಿನ ಅರಸಿಕೇರೆ ಗ್ರಾಮದ ನಿವಾಸಿಯಾಗಿರುವ ಇವರು, ರಾಜ್ಯದ ನಾನಾ ಕಡೆ 267 ನಾಟಕಗಳ ಪ್ರದರ್ಶನ ನೀಡಿದ್ದರು.

ಜಗಜ್ಯೋತಿ ಬಸವೇಶ್ವರ, ದುರ್ಗದ ದೊರೆ ಸೇರಿದಂತೆ 50ಕ್ಕೂ ಹೆಚ್ಚು ನಾಟಕಗಳಲ್ಲಿ ಮುಖ್ಯ ಪಾತ್ರಗಳಲ್ಲಿ ನಟನೆ ಮಾಡಿದ್ದರು. ಹಲವು ನಾಟಕಗಳನ್ನು ನಿರ್ದೇಶನ ಮಾಡಿ, ಸಂಗೀತ ಸಂಯೋಜನೆಯನ್ನೂ ಮಾಡಿದ್ದರು. ರಾಜಕೀಯಕ್ಕೂ ಕಾಲಿಟ್ಟಿದ್ದ ಚಂದ್ರಪ್ಪ ತಾಲೂಕು ಪಂಚಾಯಿತಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು.

ಪತ್ರ ಬರೆದು 15 ದಿನಕ್ಕೆ ಸಾವು ಕಂಡ ನಾಟಕಕಾರ: ಸಾವಿಗೂ 15 ದಿನ ಮುನ್ನ ಕಾಲ ಸನ್ನಿಹಿತವಾಗಿದೆ ಎಂದು ಚಂದ್ರಪ್ಪ ಸ್ನೇಹಿತರಿಗೆ ಪತ್ರ ಬರೆದಿದ್ದರು. ಅದಾದ 15 ದಿನಗಳಿಗೆ ಚಂದ್ರಪ್ಪ ಹೃದಯಾಘಾತದಿಂದ ಸಾವನ್ನಪ್ಪಿದರು.

ಇದನ್ನೂ ಓದಿ: ಬೈಂದೂರು ಬಿಜೆಪಿ ಮಾಜಿ ಶಾಸಕ ಲಕ್ಷ್ಮೀನಾರಾಯಣ ನಿಧನ - K Lakshminarayan Passes Away

ETV Bharat Logo

Copyright © 2024 Ushodaya Enterprises Pvt. Ltd., All Rights Reserved.