ಬೆಂಗಳೂರು: ಡಿಸಿಎಂ ವಿಶೇಷ ಕರ್ತವ್ಯಾಧಿಕಾರಿಯ ಹೆಸರು ಮತ್ತು ಲೆಟರ್‌ಹೆಡ್ ದುರ್ಬಳಕೆ ಮಾಡಿಕೊಂಡು ಭೂಮಿ ಕನ್ವರ್ಷನ್ ಮಾಡಿಸಲು ಯತ್ನಿಸಿರುವ ಘಟನೆ ಬೆಳಕಿಗೆ ಬಂದಿದೆ. ಉಪಮುಖ್ಯಮಂತ್ರಿಯ ವಿಶೇಷ ಕರ್ತವ್ಯಾಧಿಕಾರಿ ಶಿವಶಂಕರ್ ಎಸ್. ಅವರು ನೀಡಿರುವ ದೂರಿನನ್ವಯ ವಿಧಾನಸೌಧ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಆಗಸ್ಟ್ 8ರಿಂದ 27ರ ನಡುವೆ ವಿಶೇಷ ಕರ್ತವ್ಯಾಧಿಕಾರಿಯ ಹೆಸರು ಮತ್ತು ಲೆಟರ್‌ಹೆಡ್ ಬಳಸಿಕೊಂಡಿರುವ ಅಪರಿಚಿತ ಆಸಾಮಿಗಳು, ಮೈಸೂರಿನ ಕೆಸರೆ ಗ್ರಾಮದಲ್ಲಿರುವ 5 ಎಕರೆ 22 ಗುಂಟೆ ವ್ಯವಸಾಯದ ಭೂಮಿಯನ್ನು ವಸತಿ ಉದ್ದೇಶಕ್ಕಾಗಿ ಅನುಮೋದಿಸುವಂತೆ ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಆ ಕಡತಕ್ಕೆ ಸಂಬಂಧಪಟ್ಟ ಜಮೀನಿನ ಮಾಲೀಕ ರಾಮಕೃಷ್ಣ ಅವರನ್ನು ವಿಚಾರಣೆ ನಡೆಸುವಂತೆ ಅವರು ಮನವಿ ಮಾಡಿದ್ದಾರೆ. ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಭಿನ್ನ ನಾಯಕರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ರಾಜ್ಯ ಬಿಜೆಪಿ ಉಸ್ತುವಾರಿಗೆ ದೂರು