ETV Bharat / state

ಬೆಂಗಳೂರು ಹೊರವಲಯದಲ್ಲಿ ಎಟಿಎಂ ಕಳ್ಳರ ಗ್ಯಾಂಗ್ ಸಕ್ರಿಯ; ಒಂದೇ ದಿನ ಎರಡು ಕಡೆ ಕೈಚಳಕ - ATM Thieves Gang

ಬೆಂಗಳೂರು ನಗರದ ಹೊರವಲಯದಲ್ಲಿ ಎಟಿಎಂ ಕಳ್ಳರ ಗ್ಯಾಂಗ್ ಸಕ್ರಿಯವಾಗಿದ್ದು, ಒಂದೇ ದಿನ ಎರಡು ಕಡೆ ಕೈಚಳಕ ಪ್ರದರ್ಶಿಸಿದ್ದಾರೆ.

author img

By ETV Bharat Karnataka Team

Published : Jul 8, 2024, 11:32 AM IST

BENGALURU CITY OUTSKIRTS  CCTV FOOTAGE  BENGALURU  POLICE INVESTIGATION
ಒಂದೇ ದಿನ ಎರಡು ಕಡೆ ಕಳ್ಳರ ಕೈಚಳಕ (ETV Bharat)
ಒಂದೇ ದಿನ ಎರಡು ಎಟಿಎಂಗಳಿಗೆ ಕಳ್ಳರ ಕನ್ನ (ETV Bharat)

ಬೆಂಗಳೂರು: ಬೆಳ್ಳಂದೂರಿನ ಎಟಿಎಂವೊಂದರಲ್ಲಿ ಜುಲೈ 6ರಂದು ಕಳ್ಳತನ ನಡೆದಿದೆ. ಬೆಡ್‌ಶೀಟ್​ ಸುತ್ತಿಕೊಂಡು ಬಂದಿರುವ ಆರೋಪಿಗಳು 16.56 ಲಕ್ಷ ರೂಪಾಯಿ ದೋಚಿದ್ದಾರೆ. ನಗರದ ಹೊರವಲಯದ ಹೊಸೂರು ವ್ಯಾಪ್ತಿಯಲ್ಲೂ ಇದೇ ರೀತಿಯ ಘಟನೆ ವರದಿಯಾಗಿದೆ.

ಕಳ್ಳರು ಮೊದಲು ಎಟಿಎಂ ಯಂತ್ರವಿರುವ ಕೊಠಡಿಯ ಸಿಸಿಟಿವಿ ಕ್ಯಾಮೆರಾಗಳಿಗೆ ಕಪ್ಪು ಸ್ಪ್ರೇ ಹೊಡೆದಿದ್ದಾರೆ. ನಂತರ ಗ್ಯಾಸ್ ಕಟರ್ ಬಳಸಿ ಕ್ಯಾಶ್ ಬಾಕ್ಸ್ ಕತ್ತರಿಸಿ‌ ಹಣ ದೋಚಿದ್ದಾರೆ.

ಸರ್ಜಾಪುರ ರಸ್ತೆಯ ದೊಡ್ಡ ಕನ್ನಹಳ್ಳಿಯ ಖಾಸಗಿ ಬ್ಯಾಂಕ್‌ನ ಎಟಿಎಂನಲ್ಲಿ 16.56 ಲಕ್ಷ ರೂ. ದೋಚಲಾಗಿದ್ದು, ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿ ಬೆಡ್‌ಶೀಟ್ ಸುತ್ತಿಕೊಂಡು ಎಟಿಎಂ ಕೊಠಡಿಯೊಳಗೆ ಬಂದಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆರೋಪಿಗಳು ಅನ್ಯರಾಜ್ಯದಿಂದ ಬಂದು ಕೃತ್ಯ ಎಸಗುತ್ತಿರುವುದರ ಕುರಿತು ಮಾಹಿತಿ ಲಭ್ಯವಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಕಾರವಾರ: ಯುವಕರ ದೇಶಸೇವೆಯ ಕನಸು ನನಸಾಗಿಸಲು ಉಚಿತ ಸೇನಾ ತರಬೇತಿ - Free Army Training

ETV Bharat Logo

Copyright © 2024 Ushodaya Enterprises Pvt. Ltd., All Rights Reserved.