ETV Bharat / state

ಬೆಂಗಳೂರು: ಗೆಳತಿಯ ಭೇಟಿಗೆ ಬಂದು ಸಿಸಿಬಿ ಕೈಗೆ ಸಿಕ್ಕಿಬಿದ್ದ ನಕ್ಸಲೈಟ್ - Naxalite Arrested

ಹರಿಯಾಣದ ಅನಿರುದ್ಧ​ ರಾಜನ್ ಎಂಬ ನಕ್ಸಲೈಟ್​ ತನ್ನ ಸ್ನೇಹಿತೆಯನ್ನು ನೋಡಲು ಬೆಂಗಳೂರಿಗೆ ಬರುತ್ತಿರುವ ಬಗ್ಗೆ ಮಾಹಿತಿ ಪಡೆದಿದ್ದ ಸಿಸಿಬಿ ಭಯೋತ್ಪಾದಕ‌ ನಿಗ್ರಹದಳದ ಅಧಿಕಾರಿಗಳು ಆತನನ್ನು ಬಂಧಿಸಿದ್ದಾರೆ.

Central Crime Branch
ಕೇಂದ್ರ ಅಪರಾಧ ವಿಭಾಗ (ETV Bharat)
author img

By ETV Bharat Karnataka Team

Published : Sep 6, 2024, 12:31 PM IST

Updated : Sep 6, 2024, 12:46 PM IST

ಬೆಂಗಳೂರು: ನಿಷೇಧಿತ ಸಿಪಿಐ ಮಾವೋವಾದಿಗಳ‌ ಪರ ಕೆಲಸ ಮಾಡುತ್ತಿದ್ದ ಆರೋಪ‌ದ ಮೇರೆಗೆ ನಕ್ಸಲೈಟ್ ಓರ್ವನನ್ನು ಬೆಂಗಳೂರು ನಗರ ಪೊಲೀಸರು ಬಂಧಿಸಿದ್ದಾರೆ. ಹರಿಯಾಣದ ಅನಿರುದ್ಧ ರಾಜನ್ ಬಂಧಿತ‌ ನಕ್ಸಲೈಟ್. ನಗರದ‌ ಉಪ್ಪಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸ್ನೇಹಿತೆಯನ್ನು ನೋಡಲು ಬರುವ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಭಯೋತ್ಪಾದಕ‌ ನಿಗ್ರಹದಳದ (ಎಟಿಸಿ) ಅಧಿಕಾರಿಗಳು ಆತನನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ.

"ಸಿಪಿಐ ಮಾವೋವಾದಿಗಳ‌ ಪರವಾಗಿ ಕೆಲಸ ಮಾಡುತ್ತಿದ್ದ ಅನಿರುದ್ಧ ನಿಷೇಧಿತ ಬರಹಗಳನ್ನು ಪ್ರಚುರಪಡಿಸುತ್ತಿದ್ದ. ಇದುವರೆಗೂ ಯಾವ ಪೊಲೀಸರಿಗೂ ಸಿಕ್ಕಿಬಿದ್ದಿರಲಿಲ್ಲ.‌ ಗೆಳತಿಯನ್ನು ನೋಡಲು ಮೂರರಿಂದ ನಾಲ್ಕು ದಿನಗಳ ಹಿಂದೆ ಬೆಂಗಳೂರಿಗೆ ಬಂದಿದ್ದ ಅನಿರುದ್ಧ ನಿಷೇಧಿತ ಸಂಘಟನೆ ಪರ ಕೆಲಸ ಮಾಡುತ್ತಿದ್ದ. ಹಣ ಸಂಗ್ರಹ ಹಾಗೂ ಗುಪ್ತ ಸಭೆ ನಡೆಸುತ್ತಿದ್ದ. ಗುರುವಾರ ಬೆಳಗ್ಗೆ ಮೆಜೆಸ್ಟಿಕ್‌ನಿಂದ ಚೆನ್ಮೈಗೆ ಹೋಗಲು ಬಸ್ ನಿಲ್ದಾಣ ಬಳಿ ಕಾಯುತ್ತಿದ್ದಾಗ ಆತನನ್ನು ಬಂಧಿಸಲಾಯಿತು" ಎಂದು ಅಧಿಕಾರಿಗಳು ತಿಳಿಸಿದರು.

"ವಿಕಾಸ್ ಘಾಡ್ಗೆ ಎಂಬ ಹೆಸರಿನಲ್ಲಿ ನಕಲಿ ಆಧಾರ್ ಕಾರ್ಡ್ ಮಾಡಿಕೊಂಡಿದ್ದ ಆರೋಪಿಯಿಂದ ಸದ್ಯ 2 ಬ್ಯಾಗ್​ಗಳು, ಪೆನ್​ಡ್ರೈವ್​ಗಳು, ಟ್ಯಾಬ್ ವಶಕ್ಕೆ ಪಡೆಯಲಾಗಿದೆ. ಕಾನೂನುಬಾಹಿರ ಚಟುವಟಿಕೆ ತಡೆ ಕಾಯ್ದೆಯಡಿ (ಯುಎಪಿಎ) ಪ್ರಕರಣ ದಾಖಲಿಸಲಾಗಿದೆ. ಆರೋಪಿಯನ್ನು ಕಸ್ಟಡಿಗೆ ಪಡೆದು ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ" ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಭುವನೇಶ್ವರಿ ಜ್ಯುವೆಲರ್ಸ್ ಅಂಗಡಿ ಕಳ್ಳತನ ಪ್ರಕರಣ: ಐವರು ಅಂತರರಾಜ್ಯ ಕಳ್ಳರ ಬಂಧನ, 77 ಲಕ್ಷ ರೂ. ಮೌಲ್ಯದ ವಸ್ತುಗಳು ಜಪ್ತಿ - jewellery shop stolen

Last Updated : Sep 6, 2024, 12:46 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.