ETV Bharat / state

ಈ ರೀತಿಯಲ್ಲಿ ಸೋಲ್ತೆವೆ ಅಂತ ಅಂದುಕೊಂಡಿರಲಿಲ್ಲ; ಶಾಸಕ ಜನಾರ್ದನರೆಡ್ಡಿ - ASSEMBLY ELECTION 2024

ಶಾಸಕ ಜನಾರ್ದನ ರೆಡ್ಡಿ ಅವರು ಸಂಡೂರು ಕ್ಷೇತ್ರದ ಉಪ ಚುನಾವಣೆ ಕುರಿತು ಮಾತನಾಡಿದ್ದಾರೆ. ಈ ರೀತಿಯಲ್ಲಿ ಸೋಲ್ತೆವೆ ಅಂತ ಅಂದುಕೊಂಡಿರಲಿಲ್ಲ ಎಂದಿದ್ದಾರೆ.

former-minister-janardhana-reddy
ಶಾಸಕ ಜನಾರ್ದನರೆಡ್ಡಿ (ETV Bharat)
author img

By ETV Bharat Karnataka Team

Published : Nov 23, 2024, 2:12 PM IST

ಬಳ್ಳಾರಿ: ಸಂಡೂರು ಉಪಚುನಾವಣೆಯ ಫಲಿತಾಂಶದ ಸೋಲನ್ನು ಒಪ್ಪಿಕೊಳ್ಳುತ್ತೇವೆ. ಈ ರೀತಿಯಲ್ಲಿ ಸೋಲ್ತೆವೆ ಅಂತ ಅಂದುಕೊಂಡಿರಲಿಲ್ಲ ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದ್ದಾರೆ.

ಫಲಿತಾಂಶ ಹೊರಬಿದ್ದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 9 ಸಾವಿರ ಮತಗಳ ಅಂತರದಿಂದ ಕಾಂಗ್ರೆಸ್​ ಅಭ್ಯರ್ಥಿಗೆ ಗೆಲುವಾಗಿದೆ. ಸಿಎಂ ಸಿದ್ದರಾಮಯ್ಯ ಪಂಚಾಯತ್ ಲೆವೆಲ್‌ನಲ್ಲಿ ಪ್ರಚಾರ ಮಾಡಿದ್ದಾರೆ. 100 ಕೋಟಿಗೂ ಹೆಚ್ಚು ಹಣ ಖರ್ಚು ಮಾಡಿದ್ದಾರೆ. ಹಣ, ಅಧಿಕಾರ ದುರುಪಯೋಗ ಮಾಡಿಕೊಂಡು ಚುನಾವಣೆ ಗೆದ್ದಿದ್ದಾರೆ. ಸಂಡೂರಲ್ಲಿ ಅನೇಕ ಪೊಲೀಸರ ದುರ್ಬಳಕೆ ಚುನಾವಣೆಯಲ್ಲಿ ಆಗಿದೆ ಎಂದು ಆರೋಪಿಸಿದ್ದಾರೆ.

ಜನಾರ್ದನರೆಡ್ಡಿ (ETV Bharat)

2028 ರಲ್ಲಿ ಬಂಗಾರು ಹನುಮಂತು ಗೆಲ್ಲಲಿದ್ದಾರೆ ಎಂದ ಅವರು, ನಮ್ಮ ಗೆಲುವಿಗೆ ಇನ್ನೂ 5 ಸಾವಿರ ಮತಗಳು ಬೇಕಿತ್ತು. ಸಿಎಂ ಸಿದ್ದರಾಮಯ್ಯ ಅವರು ಬಂದು ಕ್ಯಾಂಪೇನ್ ಮಾಡಿದ್ದಾರೆ. ಹಣದ ಹೊಳೆ ಹರಿಸಿದ್ದಾರೆ, ಅಧಿಕಾರ ದುರುಪಯೋಗ ಆಗಿದೆ ಎಂದು ಹೇಳಿದ್ದಾರೆ.

ಈ ಸೋಲು ನಮಗೆ ಸೋಲೇ ಅಲ್ಲ: ವಾಲ್ಮೀಕಿ ಹಗರಣ, ಮುಡಾ ಹಗರಣ ಇವೆಲ್ಲವೂ ಇವತ್ತು ಕೆಲಸ ಮಾಡಿದೆ. ತುಕಾರಾಂ ಅವರಿಗೆ ಎಂಪಿ ಚುನಾವಣೆಯಲ್ಲಿ ಲೀಡ್ ಎಷ್ಟಿತ್ತು, ಈಗ ಎಷ್ಟಿದೆ ನೋಡಿ? ಎಂದ ರೆಡ್ಡಿ, 83 ಸಾವಿರ ಮತಗಳು ನಮಗೆ ಬಂದಿವೆ. ಮೊದಲ ಬಾರಿ‌ ಸಂಡೂರು ಮತದಾರರು ಬಿಜೆಪಿ ಪರ ವಾಲಿದ್ದಾರೆ. ಈ ಸೋಲು ನಮಗೆ ಸೋಲೇ ಅಲ್ಲ. 30-40 ಸಾವಿರ ಮತಗಳ ಅಂತರದಿಂದ ನಾವು ಸೋತಿಲ್ಲ ಎಂದು ಹೇಳಿದ ಜನಾರ್ದನ ರೆಡ್ಡಿ, ರಾಜ್ಯದಲ್ಲಿ ಮೂರು ಕಡೆ ಕಾಂಗ್ರೆಸ್ ಬಂದಿದೆ. ಎಲ್ಲ ಕಡೆಗಳಲ್ಲೂ ಅಧಿಕಾರ ದುರುಪಯೋಗ ಆಗಿದೆ. ಆಡಳಿತ ಪಕ್ಷ ಇರೋ ಸಮಯದಲ್ಲಿ ಸಹಜವಾಗಿ ಆ ಪಕ್ಷ ಗೆಲ್ತದೆ. ಇಲ್ಲೂ ಅದೇ ಆಗಿದೆ ಎಂದು ಜನಾರ್ದನ್​ ರೆಡ್ಡಿ ಹೇಳಿದರು.

ಮಾಜಿ ಸಿಎಂಗಳ ಮಕ್ಕಳಿಗೆ ಸೋಲು; ಉಪಚುನಾವಣೆ ನಡೆದ ಚನ್ನಪಟ್ಟಣದಲ್ಲಿ ಸಿ ಪಿ ಯೋಗೇಶ್ವರ್​ ವಿರುದ್ಧ ಜೆಡಿಎಸ್​ ಯುವ ಘಟಕದ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ ಅವರ ಮಗ ನಿಖಿಲ್​ ಕುಮಾರಸ್ವಾಮಿ ಸೋಲುಂಡಿದ್ದಾರೆ. ಇದು ಅವರಿಗೆ ಹ್ಯಾಟ್ರಿಕ್​ ಸೋಲಾಗಿದೆ. ಮತ್ತೊಂದೆಡೆ ಶಿಗ್ಗಾಂವಿ ಕ್ಷೇತ್ರದಲ್ಲಿ ಮಾಜಿ ಸಿಎಂ, ಹಾಲಿ ಹಾವೇರಿ ಕ್ಷೇತ್ರದ ಸಂಸದ ಬಸವರಾಜ ಬೊಮ್ಮಾಯಿ ಅವರ ಪುತ್ರ ಭರತ್​ ಬೊಮ್ಮಾಯಿ ಮೊದಲ ಬಾರಿಗೆ ಚುನಾವಣಾ ಅಖಾಡಕ್ಕಿಳಿದಿದ್ದು, ಅವರು ಕೂಡ ಸೋಲಿನ ರುಚಿ ಕಂಡಿದ್ದಾರೆ.

ಇದನ್ನೂ ಓದಿ : ಸಂಡೂರು ಬೈ ಎಲೆಕ್ಷನ್​ : ಕಾಂಗ್ರೆಸ್​ ಅಭ್ಯರ್ಥಿಗೆ ಬಹುತೇಕ ಗೆಲುವು, ಸೋಲಿನ ಹೊಣೆ ಹೊರುತ್ತೇನೆಂದ ಬಿಜೆಪಿ ಅಭ್ಯರ್ಥಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.