ಬೆಂಗಳೂರು: ಕರ್ತವ್ಯನಿರತ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದ ಆರು ಜನ ಆರೋಪಿಗಳನ್ನು ಮೈಸೂರು ರೈಲ್ವೆ ಠಾಣಾ ಪೊಲೀಸರು ಬಂಧಿಸಿದ್ದಾರೆ. ಮೊಹಮ್ಮದ್ ಇರ್ಫಾನ್ (19), ದರ್ಶನ್ (21), ಫೈಸಲ್ ಖಾನ್ (22), ಮೊಹಮ್ಮದ್ ಇಮ್ರಾನ್ (20) ಮೋಹಿನ್ ಪಾಶಾ (21) ಹಾಗೂ ಮುನಿರಾಜು (24) ಬಂಧಿತ ಆರೋಪಿಗಳು.
ಫೆಬ್ರುವರಿ 26ರಂದು ಗೋಲ್ ಗುಂಬಜ್ ರೈಲಿನ ಶೌಚಾಲಯದ ಬಳಿ ಸಿಗರೇಟ್ ಸೇದುತ್ತಾ ನಿಂತಿದ್ದ ಆರೋಪಿಗಳು, ಫುಟ್ ಬೋರ್ಡ್ನಲ್ಲಿ ಕುಳಿತು ಅಸಭ್ಯವಾಗಿ ಮಾತನಾಡುತ್ತ ಪ್ರಯಾಣಿಕರಿಗೆ ಮುಜುಗರ ಉಂಟು ಮಾಡುತ್ತಿದ್ದರು. ಈ ವೇಳೆ ಸ್ಥಳದಲ್ಲಿದ್ದ ರೈಲ್ವೆ ಪೊಲೀಸ್ ಕಾನ್ಸ್‌ಟೇಬಲ್ ಸತೀಶ್ ಚಂದ್ರ ಅವರು ಆರೋಪಿಗಳನ್ನು ಪ್ರಶ್ನಿಸಿದಾಗ ಚಾಕುವಿನಿಂದ ಅವರ ಬೆನ್ನಿನ ಭಾಗಕ್ಕೆ ತಿವಿದಿದ್ದರು. ಗಾಯಗೊಂಡು ಮೈಯಿಂದ ರಕ್ತ ಸುರಿಯುತ್ತಿದ್ದರೂ ಸಹ ಇಬ್ಬರು ಆರೋಪಿಗಳನ್ನು ಕಾನ್ಸ್‌ಟೇಬಲ್ ಸತೀಶ್ ಚಂದ್ರ ವಶಕ್ಕೆ ಪಡೆದಿದ್ದರು. ಬಳಿಕ ಹಿರಿಯ ಅಧಿಕಾರಿಗಳಿಗೆ ವಿಚಾರ ಮುಟ್ಟಿಸಿದ್ದರು. ತಕ್ಷಣ ಕಾರ್ಯ ಪ್ರವೃತ್ತರಾದ ಮೈಸೂರು ರೈಲ್ವೆ ಪೊಲೀಸರು ಪರಾರಿಯಾಗಿದ್ದ ಆರೋಪಿಗಳನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: ಶಿರಸಿ: ಸೀರೆ ವಿಚಾರಕ್ಕೆ ಬಟ್ಟೆ ಅಂಗಡಿ ಕೆಲಸದವರ ಮೇಲೆ ಹಲ್ಲೆ, ಪ್ರಕರಣ ದಾಖಲು