ETV Bharat / state

"ಜಿಂದಾಲ್​ ಕಂಪನಿಗೆ ಅತ್ಯಂತ ಕಡಿಮೆ ಬೆಲೆಯಲ್ಲಿ ಭೂಮಿ, ರಾಜ್ಯ ಸರ್ಕಾರದ್ದು ಹಗರಣಗಳ ಮೇಲೆ ಹಗರಣ" : ಅರವಿಂದ್ ಬೆಲ್ಲದ್​ - allegations on state govt - ALLEGATIONS ON STATE GOVT

ವಿವಿಧ ಇಲಾಖೆಗಳಲ್ಲಿ ರಾಜ್ಯ ಸರ್ಕಾರ ಹಗರಣಗಳ ಮೇಲೆ ಹಗರಣವನ್ನು ಮಾಡುತ್ತಿದೆ. ಮುಖ್ಯಮಂತ್ರಿಗಳು ಬಹಳ ಬೇಗನೆ ಮನೆಗೆ ಹೋಗುವ ಸಂದರ್ಭ ಬಂದಂತಿದೆ ಎಂದು ವಿಧಾನಸಭೆ ಉಪನಾಯಕ ಅರವಿಂದ್ ಬೆಲ್ಲದ್ ವ್ಯಂಗ್ಯವಾಡಿದ್ದಾರೆ.

ವಿಧಾನಸಭೆ ಉಪನಾಯಕ ಅರವಿಂದ್ ಬೆಲ್ಲದ್
ವಿಧಾನಸಭೆ ಉಪನಾಯಕ ಅರವಿಂದ್ ಬೆಲ್ಲದ್ (ETV Bharat)
author img

By ETV Bharat Karnataka Team

Published : Aug 25, 2024, 9:57 AM IST

ಬೆಂಗಳೂರು: "ಕಳೆದ 15 ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರದ ಅನೇಕ‌ ಹಗರಣಗಳು ಹೊರಗೆ ಬರುತ್ತಿವೆ. ಅತ್ಯಂತ ಭ್ರಷ್ಟ ಸರ್ಕಾರ ಅನ್ನುವ ಕಿರೀಟ ಕಾಂಗ್ರೆಸ್ ಸರ್ಕಾರಕ್ಕೆ ಬಂದಿದೆ" ಎಂದು ವಿಧಾನಸಭೆ ಉಪನಾಯಕ ಅರವಿಂದ್ ಬೆಲ್ಲದ್ ಕಿಡಿಕಾರಿದ್ದಾರೆ.

ನಗರದಲ್ಲಿ ಶನಿವಾರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, "ಮುಡಾ ಹಗರಣ, ವಾಲ್ಮೀಕಿ ನಿಗಮದ ಹಗರಣ, ಅಲ್ಪಸಂಖ್ಯಾತರ ನಿಗಮದ ಹಗರಣ, ಕಾರ್ಮಿಕರ ಇಲಾಖೆಯಲ್ಲೂ ಹಗರಣ, ವಕ್ಫ್ ಹಗರಣ, ಪ್ರವಾಸೋದ್ಯಮ ಇಲಾಖೆಗಳ ಹಗರಣ ನಡೆದಿದೆ. ಹಗರಣಗಳ ಮೇಲೆ ಹಗರಣವನ್ನು ರಾಜ್ಯದ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ" ಎಂದು ಟೀಕಿಸಿದರು.

"ಕರ್ನಾಟಕದಲ್ಲಿ 2023ರಲ್ಲಿ ಕಾಂಗ್ರೆಸ್​​ ಸರ್ಕಾರ ಅತ್ಯಂತ ದೊಡ್ಡ ಜನಾದೇಶ ಪಡೆದು ಆಡಳಿತಕ್ಕೆ ಬಂದ ಬಳಿಕ ಕಳೆದ 15 ತಿಂಗಳಲ್ಲಿ ಒಂದಾದ ಮೇಲೆ ಒಂದರಂತೆ ಹಗರಣಗಳು ಹೊರಕ್ಕೆ ಬರುತ್ತಿದೆ. ಸಿದ್ದರಾಮಯ್ಯನವರ ಸರ್ಕಾರ ಕೇವಲ 15 ತಿಂಗಳಲ್ಲಿ ಅತ್ಯಂತ ಭ್ರಷ್ಟ ಎಂದು ಜನರಿಂದ ಬಿಂಬಿತವಾಗಿದೆ" ಎಂದು ಆರೋಪಿಸಿದರು.

"ಮುಡಾ ಹಗರಣದಲ್ಲಿ ಮುಖ್ಯಮಂತ್ರಿಗಳ ಮನೆ ಬಾಗಿಲಿಗೆ ಹಗರಣದ ತನಿಖೆ ಬಂದಿದೆ. ಮುಖ್ಯಮಂತ್ರಿಗಳ ಬಗ್ಗೆ ಇಡೀ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ. ಮುಖ್ಯಮಂತ್ರಿಗಳು ಬಹಳ ಬೇಗನೆ ಮನೆಗೆ ಹೋಗುವ ಸಂದರ್ಭ ಬಂದಂತಿದೆ. ಸಿದ್ದರಾಮಯ್ಯನವರಿಗೆ ಕುರ್ಚಿ ಹೋಗುವ ಬಗ್ಗೆ ತಿಳಿದಿದೆ. ಈ ಸಂದರ್ಭದಲ್ಲಿ ಅವರು ಮತ್ತೊಂದು ದೊಡ್ಡ ಹಗರಣವನ್ನು ತಮ್ಮ ಮೇಲೆ ಎಳೆದುಕೊಂಡಿದ್ದಾರೆ. ಜಿಂದಾಲ್ ಕಂಪೆನಿಗೆ ಅತ್ಯಂತ ಕಡಿಮೆ ಬೆಲೆಯಲ್ಲಿ ಭೂಮಿ ಕೊಡುವ ಹಗರಣ ಇದಾಗಿದೆ" ಎಂದು ದೂರಿದರು.

"ಜಿಂದಾಲ್ ಕಂಪೆನಿಯ ಈ ಭೂಮಿ 1970-71ರಲ್ಲಿ ಕೇಂದ್ರ ಸರ್ಕಾರ ತೆಗೆದುಕೊಂಡ ಭೂಮಿ. ಆಗ ವಿಜಯನಗರ ಸ್ಟೀಲ್ ಲಿಮಿಟೆಡ್ ಕಂಪೆನಿಗೆ ಕೇಂದ್ರ ಸರ್ಕಾರದಿಂದ ಸ್ಟೀಲ್​ ಕಂಪನಿ ಮಾಡುವ ಉದ್ದೇಶದಿಂದ ಈ ಭೂಮಿ ತೆಗೆದುಕೊಳ್ಳಲಾಗಿತ್ತು. ದೇಶದಲ್ಲಿ ಖಾಸಗೀಕರಣದ ಸಂದರ್ಭದಲ್ಲಿ ಈ ಭೂಮಿಯನ್ನು ಕೇಂದ್ರ ಸರ್ಕಾರವು ಕರ್ನಾಟಕ ಸರ್ಕಾರಕ್ಕೆ ಕೊಟ್ಟಿತ್ತು. ಕರ್ನಾಟಕ ಸರ್ಕಾರಕ್ಕೆ ಅತ್ಯಂತ ಕಡಿಮೆ ದರದಲ್ಲಿ ಅಂದರೆ 13 ಕೋಟಿ ಮೊತ್ತಕ್ಕೆ 9,600 ಎಕರೆ ಭೂಮಿಯನ್ನು ಕೇಂದ್ರ ಸರ್ಕಾರ ಕೊಟ್ಟಿತ್ತು. ಕರ್ನಾಟಕ ಸರ್ಕಾರವು ಬಳಿಕ ಜೆಎಸ್‍ಡಬ್ಲ್ಯೂ ಸ್ಟೀಲ್ ಸಂಸ್ಥೆಗೆ ಸ್ಟೀಲ್ ಪ್ಲಾಂಟ್ ಮಾಡಲು 2006ರಲ್ಲಿ 2 ಸಾವಿರ ಎಕರೆ, 2007ರಲ್ಲಿ ಸುಮಾರು 1700 ಎಕರೆ ಭೂಮಿಯನ್ನು ಕೊಟ್ಟಿತ್ತು" ಎಂದು ತಿಳಿಸಿದರು.

"ಲೀಸ್ ಕಮ್ ಸೇಲ್ ಡೀಡ್"​ನ್ನು ಖಾಯಂ ಮಾಡುವ ವೇಳೆ ಆಗಿನ ಕಾಂಗ್ರೆಸ್ ಸರಕಾರವು ಪ್ರತಿ ಎಕರೆಗೆ 1.20 ಲಕ್ಷ ರೂಪಾಯಿಗೆ ಭೂಮಿ ನೋಂದಣಿ ಮಾಡುವ ನಿರ್ಧಾರ ತೆಗೆದುಕೊಂಡಾಗ ಬಿಜೆಪಿ ಸದಸ್ಯರು ಅದರ ವಿರುದ್ಧ ರಾಜ್ಯಾದ್ಯಂತ ಹೋರಾಟ ಮಾಡಿದ್ದೆವು. ಆಗ ನಿರ್ಧಾರ ಬಾಕಿ ಆಗಿತ್ತು. ನಮ್ಮ ಸರ್ಕಾರ ಬಂದಾಗಲೂ ಕಡಿಮೆ ಬೆಲೆಗೆ ಖನಿಜಯುಕ್ತ ಈ ಭೂಮಿ ಕೊಡುವ ನಿರ್ಧಾರ ಬೇಡ ಎಂದಿದ್ದೆವು".

"ಆಗ ಪಿಐಎಲ್​ ಕೂಡ ಹಾಕಿದ್ದರು. ದರ ಹೆಚ್ಚಳ ಮಾಡುವುದಾಗಿ ಯಡಿಯೂರಪ್ಪ ಅವರ ಸರ್ಕಾರವೂ ಪರೋಕ್ಷವಾಗಿ ಕೋರ್ಟ್​ಗೆ ತಿಳಿಸಿತ್ತು. ನಂತರ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯನವರ ಸರ್ಕಾರವು ಮನೆಗೆ ಹೋಗುವ ಗ್ಯಾರಂಟಿ ಇರುವ ಕಾರಣಕ್ಕೆ ಯಾವುದೇ ರೀತಿ ಹಿಂದೆ ಮುಂದೆ ನೋಡದೆ ಖನಿಜಭರಿತ ಜಾಗ ಇರುವ ಸಂಡೂರಿನಲ್ಲಿ ಸುಮಾರು 3,667 ಎಕರೆಯ ಪೈಕಿ 2 ಸಾವಿರ ಎಕರೆಯನ್ನು 1.20 ಲಕ್ಷಕ್ಕೆ ಹಾಗೂ 1,667 ಎಕರೆಯನ್ನು 1.50 ಲಕ್ಷಕ್ಕೆ ಕೊಡುವ ನಿರ್ಧಾರವನ್ನು ಮೊನ್ನೆ ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಂಡಿದ್ದಾರೆ".

"ಅದರಲ್ಲಿ ಸುಮಾರು 954 ಎಕರೆ ಜಾಗ ಕೆಪಿಸಿಎಲ್​ ಕಂಪನಿಗೆ ಸೇರಿದೆ. ಕೆಪಿಸಿಎಲ್​ ಅಷ್ಟೇ ಜಾಗ ಕೊಡಲು ಕೋರಿದೆ. ಈಗ ಕೆಪಿಸಿಎಲ್​ಗೆ ಅಷ್ಟು ಜಾಗ ಕೊಡುವ ಕೆಲಸವನ್ನು ಕರ್ನಾಟಕ ಸರ್ಕಾರ ಆರಂಭಿಸಿಲ್ಲ. ಜೆಎಸ್‍ಡಬ್ಲ್ಯೂ ಕಂಪೆನಿ ಜೊತೆ ಏನು ಒಳ ಒಪ್ಪಂದ ಆಗಿದೆ?. ಸರ್ಕಾರದ ಕೋಟ್ಯಂತರ ರೂ. ಗಳ ಆಸ್ತಿಯನ್ನು ಕೇವಲ 20 ಕೋಟಿಗೆ ಜೆಎಸ್‍ಡಬ್ಲ್ಯೂ ಕಂಪನಿಗೆ ಕೊಡುತ್ತಿದ್ದಾರೆ. ಇದರ ಹಿಂದೆ ಬಹಳ ದೊಡ್ಡ ಗೋಲ್‍ಮಾಲ್ ಇದೆ ಎಂದು ಅರವಿಂದ್ ಬೆಲ್ಲದ್​ ಆರೋಪಿಸಿದರು.

ಇದನ್ನೂ ಓದಿ: ಅರ್ಕಾವತಿ ಡಿನೋಟಿಫಿಕೇಷನ್ ಪ್ರಕರಣ: ಕೆಂಪಣ್ಣ ವರದಿ ಬಹಿರಂಗಕ್ಕೆ ಸಿ.ಟಿ.ರವಿ ಒತ್ತಾಯ - c t ravi

ETV Bharat Logo

Copyright © 2024 Ushodaya Enterprises Pvt. Ltd., All Rights Reserved.