ETV Bharat / state

ಲೈಂಗಿಕ ದೌರ್ಜನ್ಯ ಪ್ರಕರಣ: ಪ್ರಜ್ವಲ್ ರೇವಣ್ಣ ವಿರುದ್ಧ ಅರೆಸ್ಟ್ ವಾರಂಟ್​​ ಹೊರಡಿಸಿದ ನ್ಯಾಯಾಲಯ - Prajwal revanna Arrest warrant

ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ವಿರುದ್ಧ ಕೋರ್ಟ್ ಬಂಧನ ವಾರಂಟ್​​ ಹೊರಡಿಸಿದೆ.

ಪ್ರಜ್ವಲ್ ರೇವಣ್ಣ
ಪ್ರಜ್ವಲ್ ರೇವಣ್ಣ (ETV Bharat)
author img

By ETV Bharat Karnataka Team

Published : May 18, 2024, 8:25 PM IST

Updated : May 18, 2024, 10:04 PM IST

ಬೆಂಗಳೂರು: ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣ ಸಂಬಂಧ ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ 42ನೇ ಎಸಿಎಂಎಂ ನ್ಯಾಯಾಲಯ ಬಂಧನದ ವಾರಂಟ್​​ ಹೊರಡಿಸಿದೆ.

ಪ್ರಕರಣ ದಾಖಲಾದ ಬಳಿಕ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಪ್ರಜ್ವಲ್ ರೇವಣ್ಣ ವಿರುದ್ಧ ಬ್ಲ್ಯೂ ಕಾರ್ನರ್ ಹೊರಡಿಸಿದ್ದರೂ ಪತ್ತೆಯಾಗಿರಲಿಲ್ಲ. ರೆಡ್ ಕಾರ್ನರ್ ನೋಟಿಸ್ ನೀಡಲು ಕಾನೂನು ಪ್ರಕ್ರಿಯೆ ಅಡ್ಡಿಯಾಗಿತ್ತು. ಈವರೆಗೂ ಕೈಗೊಂಡ ಕಾ‌ನೂನು ಕ್ರಮಗಳ ಬಗ್ಗೆ ಕೋರ್ಟ್​ಗೆ ಎಸ್ಐಟಿ ಮನವರಿಕೆ ಮಾಡಿತ್ತು.‌ ಹೊರಡಿಸಲಾದ ಲುಕ್ ಔಟ್ ನೋಟಿಸ್ ಹಾಗೂ ಬ್ಲ್ಯೂ ಕಾರ್ನರ್ ನೋಟಿಸ್​ಗಳ ಬಗ್ಗೆ ತಿಳಿಸಿ ಪ್ರಸ್ತಕ ಚಾರ್ಜ್‌ಶೀಟ್ ಸಲ್ಲಿಕೆ ಅವಶ್ಯಕತೆ ಇಲ್ಲ ಎಂದು ಎಸ್ಐಟಿ ವಿಸ್ತಾರವಾಗಿ ತಿಳಿಸಿತ್ತು. ಇದನ್ನ ಮನಗಂಡ ನ್ಯಾಯಾಲಯವು ಪ್ರಜ್ವಲ್ ವಿರುದ್ಧ ಅರೆಸ್ಟ್ ವಾರಂಟ್​ ಅದೇಶ ಹೊರಡಿಸಿದೆ.

ಆದೇಶ ಹೊರಡಿಸಿದ್ದರಿಂದ ಏಕಾಏಕಿ ರೆಡ್ ಕಾರ್ನರ್ ನೊಟೀಸ್ ಹೊರಡಿಸಲು ಸಾಧ್ಯವಿಲ್ಲ. ಈ ನೊಟೀಸ್ ಜಾರಿ ಮಾಡಬೇಕಾದರೆ ಆರೋಪಿ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಲೇಬೇಕಿದೆ. ಎಸ್ಐಟಿಗೆ ರೇವಣ್ಣ ವಿರುದ್ಧ ಕಾನೂನಿನ‌ ಅಸ್ತ್ರವಾಗಿದೆ ಹೊರತು ವಿದೇಶದಲ್ಲಿರುವಾಗಲೇ ಬಂಧನಕ್ಕೆ ಅವಕಾಶವಿಲ್ಲ.. ದೇಶದ ಗಡಿಯೊಳಗೆ ಬಂದಾಗವಷ್ಟೇ ಪ್ರಜ್ವಲ್‌ ನನ್ನ ಬಂಧಿಸಬಹುದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಪ್ರಜ್ವಲ್ ಸಂಸದರಾಗಿದ್ದಾಗಲೇ ನನ್ನ ಸಂಪರ್ಕಕ್ಕೆ ಸಿಗುತ್ತಿರಲಿಲ್ಲ- ಹೆಚ್​ಡಿಕೆ: ನಮ್ಮ ಸಂಪರ್ಕಕ್ಕೂ ಬಂದಿಲ್ಲ, ಕುಟುಂಬದವರಿಗೂ ಮಾಹಿತಿ ಇಲ್ಲ- ಜಿಟಿಡಿ - GT Deve Gowda on Prajwal Revanna

ಲೈಂಗಿಕ ದೌರ್ಜನ್ಯ ಆರೋಪದಡಿ ಹೊಳೆನರಸೀಪುರ‌ ಪೊಲೀಸ್ ಠಾಣೆ ಸೇರಿ ಮೂರು ಠಾಣೆಗಳಲ್ಲಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಮೂರು ಪ್ರತ್ಯೇಕ ದೂರುಗಳು ದಾಖಲಾಗಿವೆ. ವಿಶೇಷ ತನಿಖಾ ತಂಡ (ಎಸ್​ಐಟಿ) ಪ್ರಕರಣದ ತನಿಖೆ ಕೈಗೊಂಡಿದೆ. ಈಗಾಗಲೇ ಸಂತ್ರಸ್ತೆಯ ವಿಚಾರಣೆಯನ್ನು ನಡೆಸಿರುವ ಎಸ್​ಐಟಿ, ಸ್ಥಳ ಮಹಜರು ಕಾರ್ಯವನ್ನು ಕೂಡ ಮುಗಿಸಿದೆ. ಸದ್ಯ ವಿದೇಶದಲ್ಲಿರುವ ಪ್ರಜ್ವಲ್ ರೇವಣ್ಣಗಾಗಿ ಎಸ್​ಐಟಿ ತಂಡ ಕಾಯುತ್ತಿದೆ.

Last Updated : May 18, 2024, 10:04 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.