ETV Bharat / state

ಚಾಮರಾಜನಗರ: ಜೈಲಿನಿಂದ ಹೊರಬಂದು ಮತ್ತೆ 12 ಕಡೆ ಕಳವು ಮಾಡಿದ್ದ ಖದೀಮ ಅರೆಸ್ಟ್​ - thief arrested

author img

By ETV Bharat Karnataka Team

Published : Aug 27, 2024, 7:47 PM IST

Updated : Aug 27, 2024, 9:09 PM IST

ಸರಗಳ್ಳತನ, ಬೈಕ್ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಕಳ್ಳನನ್ನು ಚಾಮರಾಜನಗರ ಪೊಲೀಸರು ಬಂಧಿಸಿ, 72 ಚಿನ್ನದ ಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತ ಆರೋಪಿ
ಬಂಧಿತ ಆರೋಪಿ (ETV Bharat)
ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಡಾ.ಬಿ.ಟಿ. ಕವಿತಾ (ETV Bharat)

ಚಾಮರಾಜನಗರ: ಜೈಲಿನಿಂದ ಹೊರಬಂದರೂ ಬುದ್ಧಿ ಕಲಿಯದೇ 12 ಕಳವು ಪ್ರಕರಣಗಳಲ್ಲಿ ಭಾಗಿದ್ದ ಅಂತರ್​ ಜಿಲ್ಲಾ ಕಳ್ಳನನ್ನು ಚಾಮರಾಜನಗರ ಪೊಲೀಸರು ಬಂಧಿಸಿದ್ದಾರೆ. ಚಾಮರಾಜನಗರ ತಾಲೂಕಿನ ಮೇಗಲಹುಂಡಿ ಗ್ರಾಮದ ಸುರೇಶ್ ಬಂಧಿತ.

ಸುರೇಶ್ ಬೇರೆ ಬೇರೆ ಕಳವು ಪ್ರಕರಣಗಳಲ್ಲಿ ಜೈಲುಪಾಲಾಗಿ ಬಂದ ಕೆಲವೇ ತಿಂಗಳುಗಳಲ್ಲಿ 12 ಕಡೆ ಕಳವು ಮಾಡಿ ಈಗ ಮತ್ತೆ ಪೊಲೀಸ್​ ಅತಿಥಿಯಾಗಿದ್ದಾನೆ. ಬೈಕ್​ನಲ್ಲೇ ದಿನದ ಬಹುತೇಕ ಸಮಯ ಕಳೆಯುವ ಈತ, ಅಗತ್ಯ ವಸ್ತುಗಳನ್ನು ಬೈಕ್​ನಲ್ಲೇ ಇಟ್ಟುಕೊಂಡಿರುತ್ತಿದ್ದ. ವಿಳಾಸ, ನೀರು ಕೇಳುವ ನೆಪ, ಜಮೀನು ಖರೀದಿ ಹೀಗೆ ಒಂಟಿ ಮಹಿಳೆಯರನ್ನು ಮಾತನಾಡಿಸಿ ನಂತರ ಚಾಕು ತೋರಿಸಿ ಹೆದರಿಸಿ ಸರ ಎಗರಿಸಿ ಪರಾರಿಯಾಗುತ್ತಿದ್ದ.

ಇದೇ ರೀತಿ ಕಳೆದ ಆ.23 ರಂದು ಚಾಮರಾಜನಗರ ತಾಲೂಕಿನ ಕಣ್ಣೇಗಾಲ ಗ್ರಾಮದ ಮಂಜುಳಾ ಎಂಬವರು ಬಹಿರ್ದೆಸೆಗೆ ತೆರಳಿ ಹಿಂತಿರುಗುವಾಗ ಅಡ್ಡಹಾಕಿದ ಈತ, ಕುತ್ತಿಗೆಗೆ ಚಾಕು ಇಟ್ಟು ಬೆದರಿಸಿ ನಾಲ್ಕು ಗ್ರಾಂ ಚಿನ್ನದ ಸರ ಎಗರಿಸಿ ಪರಾರಿಯಾಗಿದ್ದ. ಬಳಿಕ, ಅಂದೇ ಚಾಮರಾಜನಗರ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲೂ ಕಳವು ಪ್ರಕರಣದಲ್ಲಿ ಭಾಗಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರು ಇಂದು ಮುಂಜಾನೆ ಮನೆ ಹಿಂಭಾಗದಲ್ಲಿ ಅಡಗಿದ್ದ ಸರಗಳ್ಳ ಸುರೇಶ್​ನನ್ನು ಗಾಳಿಯಲ್ಲಿ ಗುಂಡು ಹಾರಿಸಿ, ಹೊರ ಬರುವಂತೆ ಮಾಡಿ ಬಂಧಿಸಿದ್ದಾರೆ. ಬಂಧಿತ ಸುರೇಶ್​ನನ್ನು ವಿಚಾರಣೆಗೆ ಒಳಪಡಿಸಿದಾಗ ಸರಗಳ್ಳತನ, ಹುಂಡಿಗೆ ಕನ್ನ, ಬೈಕ್ ಕಳವು ಪ್ರಕರಣಗಳು ಬೆಳಕಿಗೆ ಬಂದಿವೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಡಾ.ಬಿ.ಟಿ. ಕವಿತಾ ಮಾತನಾಡಿ, "ಕಣ್ಣೇಗಾಲ ಗ್ರಾಮದ ಮಂಜುಳ ಎಂಬವರು) ಸಂತೇಮರಹಳ್ಳಿ ಪೊಲೀಸ್ ಠಾಣೆಯಲ್ಲಿ ದರೋಡೆ ಪ್ರಕರಣ ದಾಖಲು ಮಾಡಿದ್ದರು. ಈ ಸಂಬಂಧ ವಿಶೇಷ ತನಿಖಾ ತಂಡವನ್ನು ರಚಿಸಲಾಗಿತ್ತು. ಸೋಮವಾರ ಸುರೇಶ್​ ಅಲಿಯಾಸ್​ ಸೂರಪ್ಪನನ್ನು ಮೇಗಲಹುಂಡಿ ಗ್ರಾಮದಲ್ಲಿ ಬಂಧಿಸಿ, ಆತನಿಂದ ಕಬ್ಬಿಣದ ರಾಡು, ಚಾಕು, 72 ಚಿನ್ನದ ಗುಂಡುಗಳು ಹಾಗೂ ಒಂದು ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ" ಎಂದು ತಿಳಿಸಿದರು.

ಸುರೇಶ್​ನನ್ನು ಬಂಧಿಸಿದ ಪೊಲೀಸ್ ತಂಡಕ್ಕೆ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಡಾ. ಬಿ.ಟಿ‌.ಕವಿತಾ 25 ಸಾವಿರ ರೂ. ನಗದು ಬಹುಮಾನ ಘೋಷಿಸಿ, ಪ್ರಶಂಸೆ ಪತ್ರ ನೀಡಿದ್ದಾರೆ.

ಇದನ್ನೂ ಓದಿ: ದರ್ಶನ್ ಮತ್ತು ಸಹಚರರು ರಾಜ್ಯದ ವಿವಿಧ ಜೈಲುಗಳಿಗೆ ಸ್ಥಳಾಂತರ; ದಾಸ ಬಳ್ಳಾರಿ ಜೈಲಿಗೆ - DARSHAN JAIL SHIFT

Last Updated : Aug 27, 2024, 9:09 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.