ETV Bharat / state

ವ್ಯಕ್ತಿ ಹತ್ಯೆಮಾಡಿ ಮೃತದೇಹ ತುಂಡು ತುಂಡಾಗಿ ಕತ್ತರಿಸಿದ್ದ ಹಂತಕ: 3 ಚೀಲಗಳಲ್ಲಿ ತುಂಬಿ ಮೋರಿಗೆ ಎಸೆದಿದ್ದ ಆರೋಪಿ ಬಂಧನ - murder case - MURDER CASE

ವ್ಯಕ್ತಿಯೊಬ್ಬನನ್ನ ಹತ್ಯೆ ಮಾಡಿ ಮೃತದೇಹ ಕತ್ತರಿಸಿ ಮೋರಿಗೆ ಎಸೆದಿದ್ದ ಆರೋಪಿಯನ್ನು ಸಂಪಿಗೆಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ.

MURDER CASE  Bengaluru  Sampigehalli Police
ವ್ಯಕ್ತಿಯೊಬ್ಬನನ್ನ ಹತ್ಯೆಗೈದು ಮೃತದೇಹ ಕತ್ತರಿಸಿ ಮೋರಿಗೆ ಎಸೆದಿದ್ದ ಆರೋಪಿಯ ಬಂಧನ (ETVBharat)
author img

By ETV Bharat Karnataka Team

Published : Jun 8, 2024, 1:28 PM IST

Updated : Jun 8, 2024, 1:52 PM IST

ಬೆಂಗಳೂರು: ವ್ಯಕ್ತಿಯೊಬ್ಬನನ್ನ ಬರ್ಬರವಾಗಿ ಹತ್ಯೆ ಮಾಡಿ ಮೃತದೇಹವನ್ನು ಕತ್ತರಿಸಿ ಮೋರಿಗೆ ಎಸೆದಿರುವ ಘಟನೆ ರಾಮಮೂರ್ತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕೆ.ವಿ ಶ್ರೀನಾಥ್ (34) ಕೊಲೆಯಾದ ದುರ್ದೈವಿ. ಆರೋಪಿ ಮಾಧವ ರಾವ್ ಎಂಬಾತನನ್ನು ಸಂಪಿಗೆಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಘಟನೆಯ ಹಿನ್ನೆಲೆ: ಹಣಕಾಸು ಕಂಪನಿಯೊಂದರ ಬಸವೇಶ್ವರ ನಗರದ ಶಾಖೆಯಲ್ಲಿ ಡೆವಲಪ್ಮೆಂಟ್ ಆಫೀಸರ್ ಆಗಿದ್ದ ಶ್ರೀನಾಥ್, ಸಂಪಿಗೆಹಳ್ಳಿ ಠಾಣಾ ವ್ಯಾಪ್ತಿಯ ಥಣಿಸಂದ್ರದ ಅಂಜನಾದ್ರಿ ಲೇಔಟ್​ನಲ್ಲಿ ವಾಸವಿದ್ದರು. ಮೇ 28ರಂದು ಬೆಳಗ್ಗೆ ಮನೆಯಿಂದ ಹೋಗಿದ್ದ ಶ್ರೀನಾಥ್ ಮನೆಗೆ ಮರಳಿರಲಿಲ್ಲ. ಪತಿ ನಾಪತ್ತೆಯಾಗಿದ್ದಾರೆ ಎಂದು ಮೇ 29 ರಂದು ಅವರ ಪತ್ನಿ ಸಂಪಿಗೆಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ತನಿಖೆ ಕೈಗೊಂಡಾಗ ಶ್ರೀನಾಥ್ ಮೇ 28ರಂದು ಕೆ.ಆರ್. ಪುರಂನ ವಿಜಿನಾಪುರದಲ್ಲಿರುವ ಮಾಧವರಾವ್ ಎಂಬಾತನ ಮನೆಗೆ ಹೋಗಿರುವುದು ಪತ್ತೆಯಾಗಿತ್ತು. ಆದರೆ, ವಾಪಸಾಗಿರುವುದರ ಯಾವುದೇ ಕುರುಹು ಪತ್ತೆಯಾಗಿರಲಿಲ್ಲ. ಮತ್ತೊಂದೆಡೆ ಮಾಧವ್ ರಾವ್ ಸಹ ನಾಪತ್ತೆಯಾಗಿದ್ದ. ಇತ್ತ ಮಾಧವ್ ರಾವ್ ಮನೆಯ ಒಳಗಡೆ ಪರಿಶೀಲನೆ ಮಾಡಿದಾಗ ರಕ್ತದ ಕಲೆಗಳು ಪತ್ತೆಯಾಗಿದ್ದವು. ತನಿಖೆ ಚುರುಕುಗೊಳಿಸಿದ ಪೊಲೀಸರು ಆಂಧ್ರ ಪ್ರದೇಶದಲ್ಲಿ ತಲೆಮರೆಸಿಕೊಂಡಿದ್ದ ಮಾಧವ ರಾವ್ ನನ್ನ ವಶಕ್ಕೆ ಪಡೆದು ಕರೆತಂದು ವಿಚಾರಿಸಿದಾಗ ಆತ ಭೀಕರ ಕೊಲೆಯ ವಿಚಾರವನ್ನು ಬಾಯ್ಬಿಟ್ಟಿದ್ದಾನೆ‌.

ಹತ್ಯೆಯಾದ ಶ್ರೀನಾಥ್ ಹಾಗೂ ಮಾಧವ್ ರಾವ್​ಗೆ ಎರಡು ವರ್ಷಗಳಿಂದ ಪರಿಚಯವಿತ್ತು. ಶ್ರೀನಾಥ್ ಬಳಿ ಮಾಧವ ರಾವ್ 5 ಲಕ್ಷ ರೂಪಾಯಿ ಚೀಟಿ ಹಾಕಿದ್ದ. ಆದರೆ, ಇತ್ತೀಚಿಗೆ ಚೀಟಿ ಹಣದ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆ ನಡೆಯುತ್ತಿತ್ತು. ಚೀಟಿ ಹಣ ವಾಪಸ್ ಕೊಡುವಂತೆ ಮಾಧವ ರಾವ್ ಒತ್ತಾಯಿಸುತ್ತಿದ್ದ ಎನ್ನಲಾಗಿದೆ.

ತುಂಡು ತುಂಡಾಗಿ ಕತ್ತರಿಸಿ ಮೂರು ಬ್ಯಾಗ್​​ಗೆ ತುಂಬಿದ್ದ ಆರೋಪಿ; ಹಣದ ವಿಚಾರ ಮಾತನಾಡಲು ಮೇ 28ರಂದು ಬೆಳಗ್ಗೆ ಮಾಧವ ರಾವ್ ಮನೆಗೆ ಶ್ರೀನಾಥ್ ತೆರಳಿದ್ದ. ಈ ವೇಳೆ ಮನೆಯಲ್ಲಿ ಇಬ್ಬರ ನಡುವೆ ಗಲಾಟೆಯಾಗಿತ್ತು. ಮಾಧವ್ ರಾವ್ ಜಾಕ್ ರಾಡ್​​ನಿಂದ ಶ್ರೀನಾಥ್ ತಲೆಗೆ ಹೊಡೆದು ಹತ್ಯೆ ಮಾಡಿದ್ದ. ಬಳಿಕ ಆತನ ಮೃತದೇಹವನ್ನು ಮಚ್ಚಿನಿಂದ ತುಂಡು ತುಂಡಾಗಿ ಕತ್ತರಿಸಿ ಮೂರು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿದ್ದ. ನಂತರ ಮನೆಯನ್ನ ಶುಚಿಗೊಳಿಸಿ ಮೊದಲಿಗೆ ಒಂದು ಬ್ಯಾಗ್, ನಂತರ ಎರಡು ಬ್ಯಾಗ್​​ಗಳಲ್ಲಿ ಮೃತದೇಹದ ತುಂಡುಗಳನ್ನು ಕೊಂಡೊಯ್ದು ಬೆಳತ್ತೂರು ಬಳಿಯ ಮೋರಿಯಲ್ಲಿ ಎಸೆದಿದ್ದ. ನಂತರ ಮೊಬೈಲ್ ಆಫ್ ಮಾಡಿಕೊಂಡು ಆಂಧ್ರ ಪ್ರದೇಶಕ್ಕೆ ಪರಾರಿಯಾಗಿದ್ದ.

ಕೃತ್ಯ ನಡೆದ ಸ್ಥಳ ರಾಮಮೂರ್ತಿ ನಗರ ಠಾಣಾ ವ್ಯಾಪ್ತಿಗೆ ಬರುವುದರಿಂದ ಪ್ರಕರಣವನ್ನ ವರ್ಗಾಯಿಸಲಾಗಿದೆ. ಆರೋಪಿ ಎಸೆದಿರುವ ಮೃತದೇಹದ ತುಂಡುಗಳ ಪತ್ತೆಗೆ ಪೊಲೀಸರು ಹುಡುಕಾಟ ಮುಂದುವರೆಸಿರುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: ರಾಹುಲ್ ಗಾಂಧಿ ಸೂಚನೆಗೆ ಬದ್ಧ, ಹಾಗೆಯೇ ನಡೆದುಕೊಳ್ಳುತ್ತೇವೆ: ಗೃಹ ಸಚಿವ ಪರಮೇಶ್ವರ್ - Home Minister Parameshwar

Last Updated : Jun 8, 2024, 1:52 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.