ದೇವನಹಳ್ಳಿ: ವಾಟ್ಸ್‌ಆ್ಯಪ್ ಕಾಲ್ ಮೂಲಕ ಡೈಮಂಡ್ ವ್ಯಾಪಾರ ಕುದುರಿಸಿ 10 ಕೋಟಿ ಮೌಲ್ಯದ ಡೈಮಂಡ್ಗಳನ್ನು 3 ಕೋಟಿಗೆ ಕೊಡುವುದಾಗಿ ಹೇಳಿ, ನಕಲಿ ಡೈಮಂಡ್ ಮಾರಾಟಕ್ಕೆ ಯತ್ನಿಸಿದ್ದ ನಾಲ್ವರು ಆರೋಪಿಗಳನ್ನು ಕೆಂಪೇಗೌಡ ಅಂತಾರಾಷ್ಚ್ರೀಯ ವಿಮಾನ ನಿಲ್ದಾಣ ಪೊಲೀಸರು ಬಂಧಿಸಿದ್ದಾರೆ.
ಲಕ್ಷ್ಮೀನಾರಾಯಣ ಎಂಬವರಿಗೆ ನಕಲಿ ಡೈಮಂಡ್ ಹರಳುಗಳನ್ನು ಮಾರಾಟ ಮಾಡಿ 3 ಕೋಟಿ ಹಣ ಲಪಟಾಯಿಸಲು ಯತ್ನಿಸಿದ ರವಿ, ನವೀನ್ ಕುಮಾರ್, ಗೂರ್ ಅಹಮದ್, ಅಬ್ಧುಲ್ ದಸ್ತಗಿರ್ ಬಂಧಿತರು. ಮಾರ್ಚ್ 14ರಂದು ಆರೋಪಿ ರವಿ, ಲಕ್ಷ್ಮೀನಾರಾಯಣ ಎಂಬವರಿಗೆ ವಾಟ್ಸ್‌ಆ್ಯಪ್ ಕಾಲ್ ಮಾಡಿ ಡೈಮಂಡ್ ವ್ಯವಹಾರದ ಮಾತನಾಡಲು ಏರ್ಪೋರ್ಟ್ನ ತಾಜ್ ಹೋಟೆಲ್ಗೆ ಬನ್ನಿ ಎಂದಿದ್ದ. ಅದರಂತೆ ಲಕ್ಷ್ಮೀನಾರಾಯಣ ಸ್ನೇಹಿತರನ್ನು ಕರೆದುಕೊಂಡು ಹೋಟೆಲ್ಗೆ ಹೋಗಿದ್ದರು. ಅವರ ಮುಂದೆ ಎರಡು ಬಾಕ್ಸ್ಗಳಲ್ಲಿದ್ದ ಡೈಮಂಡ್ ಹರಳುಗಳನ್ನು ತೆಗೆದು, ಮಷಿನ್ನಲ್ಲಿ ಪರೀಕ್ಷಿಸಿದ್ದಾರೆ.
ಇವುಗಳು ಅಸಲಿ ಡೈಮಂಡ್ಗಳಾಗಿದ್ದು, ಮಾರುಕಟ್ಟೆಯಲ್ಲಿ ಇವುಗಳ ಅಸಲಿ ಬೆಲೆ 10 ಕೋಟಿ ಇದ್ದು, ನಾವು 3 ಕೋಟಿ ಕೊಡುವುದಾಗಿ ಹೇಳಿದ್ದಾರೆ. ಲಕ್ಷ್ಮೀನಾರಾಯಣ ಖುದ್ದು ಹರಳುಗನ್ನು ಪರೀಕ್ಷಿಸಿದ್ದಾಗ ನಕಲಿ ಡೈಮಂಡ್ಗಳೆಂಬ ಅನುಮಾನ ಬಂದಿದೆ. ತಕ್ಷಣವೇ ಅವರು ನಕಲಿ ಡೈಮಂಡ್ ತೋರಿಸಿ ಹಣ ಲಪಟಾಯಿಸಲು ಯತ್ನಸಿದ ಈ ನಾಲ್ವರ ವಿರುದ್ಧ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಇದನ್ನೂ ಓದಿ: ಅಂಗಡಿ ಮಾಲೀಕರೇ ಹುಷಾರ್! ಬೆಂಗಳೂರಲ್ಲಿ ಯುಪಿಐ ನಕಲಿ ಪೇಮೆಂಟ್ ತೋರಿಸಿ ವಂಚಿಸಿದ್ದ ಜೋಡಿ ಅರೆಸ್ಟ್