ETV Bharat / state

ಹಾಲು ಹಾಕುವವನಿಂದಲೇ ಡಾಕ್ಟರ್ ಮನೆಗೆ ಕನ್ನ: ₹32.85 ಲಕ್ಷ ಮೊತ್ತದ ಸ್ವತ್ತು ವಶ, ನಾಲ್ವರು ಅರೆಸ್ಟ್ - DOCTOR HOUSE THEFT CASE

author img

By ETV Bharat Karnataka Team

Published : Jul 13, 2024, 7:57 AM IST

ಹಾಲು ಹಾಕುವನಿಂದಲೇ ಡಾಕ್ಟರ್ ಮನೆಗೆ ಕನ್ನ ಹಾಕಿರುವ ಘಟನೆ ದಾವಣಗೆರೆ ಜಿಲ್ಲೆಯಲ್ಲಿ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಖದೀಮರನ್ನು ಬಂಧಿಸಿದ ಹರಿಹರ ನಗರ ಠಾಣೆಯ ಪೊಲೀಸರು, ₹32.85 ಲಕ್ಷ ಮೊತ್ತದ ಸ್ವತ್ತು ವಶಕ್ಕೆ ಪಡೆದುಕೊಂಡಿದ್ದಾರೆ.

DOCTOR HOUSE BURGLARY  Davanagere
ಹಾಲು ಹಾಕುವನಿಂದಲೇ ಡಾಕ್ಟರ್ ಮನೆಗೆ ಕನ್ನ: ₹32.85 ಲಕ್ಷ ಮೊತ್ತದ ಸ್ವತ್ತು ವಶ, ನಾಲ್ವರು ಅರೆಸ್ಟ್ (ETV Bharat)

ದಾವಣಗೆರೆ: ಪ್ರತಿದಿನ ಮನೆಗೆ ಹಾಲು ಹಾಕುವನಿಂದಲೇ ಡಾಕ್ಟರ್ ಮನೆಗೆ ಕನ್ನ ಹಾಕಿರುವ ಘಟನೆ ದಾವಣಗೆರೆ ಜಿಲ್ಲೆಯ ಹರಿಹರ ನಗರದ ವಿದ್ಯಾನಗರದಲ್ಲಿ ನಿನ್ನೆ (ಜುಲೈ 12 ರಂದು) ನಡೆದಿದೆ.

ನಾವು ಎರಡು ದಿನ ಮನೆಯಲ್ಲಿ ಇರಲ್ಲ ಎಂದು ಹಾಲು ಹಾಕುವವನಿಗೆ ಡಾಕ್ಟರ್ ಹೇಳಿದ್ದರು. ಹಾಲು ಹಾಕುವವನು ತಡ ಮಾಡದೇ, ಡಾಕ್ಟರ್​ ಮನೆ ಕಳ್ಳತನ ಮಾಡಲು ಗುಂಪು ಕಟ್ಟಿಕೊಂಡಿದ್ದನು. ಹಾಲು ಮಾರುವನು ಸೇರಿದಂತೆ ನಾಲ್ವರ ಗ್ಯಾಂಗ್ ವೈದ್ಯರ ಮನೆಗೆ ಕನ್ನ ಹಾಕಿ ಬರೋಬ್ಬರಿ ₹32. 85 ಲಕ್ಷ ಮೊತ್ತದ ಚಿನ್ನಾಭರಣ ದೋಚಿದ್ದರು. ಮನೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಇದೀಗ ಬಂಧಿಸಿದ್ದಾರೆ.

ವೈದ್ಯರಾದ ಡಾ.‌ಸಚಿನ್ ಬೊಂಗಾಳೆ ಎಂಬುವರ ಮನೆಯಲ್ಲಿ ಕಳ್ಳತನವಾಗಿದೆ. ಮನೆಯಲ್ಲಿದ್ದ 434 ಗ್ರಾಂ ಬಂಗಾರ, 500 ಗ್ರಾಂ ಬೆಳ್ಳಿ ಆಭರಣ, 25 ಸಾವಿರ ನಗದು, ಆ್ಯಪಲ್ ಫೋನ್, ಸ್ಮಾರ್ಟ್ ವಾಚ್ ಎಲ್ಲವುದನ್ನು ಕಳ್ಳರು ದೋಚಿದ್ದಾರೆ. ಡಾ.ಸಚಿನ್ ಬೊಂಗಳೆ ಅವರು ಹರಿಹರ ನಗರ ಪೊಲೀಸ್ ಠಾಣೆಗೆ ಈ ಬಗ್ಗೆ ದೂರು ನೀಡಿದ್ದರು. ಪ್ರಕರಣ ದಾಖಲು ಮಾಡಿಕೊಂಡ ಹರಿಹರ ನಗರ ಠಾಣೆಯ ಪೊಲೀಸರು ಖದೀಮರ ಹೆಡೆಮುರಿ ಕಟ್ಟಲು ತನಿಖೆಗೆ ಇಳಿದಿದ್ದರು. ಕೊನೆಗೂ ಪ್ರಕರಣವನ್ನು ಭೇದಿಸಿದ ಪೊಲೀಸರು, ಆರೋಪಿಗಳಾದ ಕಿರಣ ಗುಬ್ಬಿ (24), ಕೊಟ್ರೇಶ ಸಿ.ಕೆ ಅಲಿಯಾಸ್ ಕುಪಸಾದ್ (22), ನಿತ್ಯಾನಂದ ಅಲಿಯಾಸ್ ನಿತ್ಯಾನಂದ ಕೆಳಗಿನಮನಿ (24), ಶಿವರಾಜ್ ಅಲಿಯಾಸ್ ಶಿವು (32) ಅವರನ್ನು ಬಂಧಿಸಿದ್ದಾರೆ‌.

ಎಸ್ಪಿ ಉಮಾ ಪ್ರಶಾಂತ್ ಮಾಹಿತಿ: ''ಡಾ.ಸಚಿನ್ ಅವರ ಮನೆಗೆ ದಿನನಿತ್ಯ ಹಾಲು ಹಾಕ್ತಿದ್ದ ಬಂಧಿತ ಶಿವರಾಜ್ ಮನೆ ಕಳ್ಳತನ ಪ್ರಕರಣದ ಮಾಸ್ಟರ್ ಮೈಂಡ್ ಆಗಿದ್ದಾನೆ. ವೈದ್ಯ ಸಚಿನ್ ಬೊಂಗಳೆ ಅವರು, ನಾವು ಎರಡು ದಿನ ಇರಲ್ಲ. ಇದರಿಂದ ಹಾಲು ಬೇಡ ಎಂದು ಶಿವರಾಜ್​​ಗೆ ತಿಳಿಸಿದ್ದರು. ನಾಲ್ವರ ಗುಂಪು ಕಟ್ಟಿಕೊಂಡ ಶಿವರಾಜ್, ಡಾ.ಸಚಿನ್ ಅವರು ಮರಳಿ ಮನೆಗೆ ಬರುವಷ್ಟರಲ್ಲಿ ಮನೆಯಲ್ಲಿದ್ದ ಚಿನ್ನಾಭರಣ, ನಗದು, ದೋಚಿ ತಲೆಮರೆಸಿಕೊಂಡಿದ್ದ. ರಾಣೆಬೆನ್ನೂರು ಬಳಿ ನಡೆದ ಕಳ್ಳತನ ಪ್ರಕರಣದಲ್ಲಿ ಈ ಖದೀಮರ ತಂಡವು ಪೊಲೀಸರಿಗೆ ತಗಲಾಕಿಕೊಂಡಿತ್ತು. ಹರಿಹರ ಪೊಲೀಸರ ಕೈಗೂ ಈ ಕಳ್ಳರು ಸಿಕ್ಕಿಬಿದ್ದಿದ್ದಾರೆ. ಬಂಧಿತ ಆರೋಪಿಗಳಿಂದ ₹32.85 ಲಕ್ಷ ಮೌಲ್ಯದ ಸ್ವತ್ತು ವಶಕ್ಕೆ ಪಡೆದಿದ್ದೇವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ತಿಳಿಸಿದ್ದಾರೆ.

ಇದನ್ನೂ ಓದಿ: ಮುಡಾ ಹಗರಣದ ವಿರುದ್ಧ ಪ್ರತಿಭಟನೆ: ಬೆಂಗಳೂರಿನಿಂದ ಗೂಡ್ಸ್‌ ಆಟೋದಲ್ಲಿ ಬಂದ ಆರ್ ಅಶೋಕ್‌ ಪೊಲೀಸರ ವಶಕ್ಕೆ - R Ashok taken into police custody

ETV Bharat Logo

Copyright © 2024 Ushodaya Enterprises Pvt. Ltd., All Rights Reserved.