ETV Bharat / state

ಕಾಂಗ್ರೆಸ್​​ನವರದ್ದು ಓಲೈಕೆ ರಾಜಕಾರಣ: ಅರ್ಜುನ್ ರಾಮ್​ ಮೇಘವಾಲ್ - LOK SABHA ELECTION - LOK SABHA ELECTION

ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಅರ್ಜುನ್ ರಾಮ್ ಮೇಘವಾಲ್ ಕಾಂಗ್ರೆಸ್​ ವಿರುದ್ಧ ಹರಿಹಾಯ್ದಿದ್ದಾರೆ.

Arjun Ram Meghwal
ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್
author img

By ETV Bharat Karnataka Team

Published : Apr 28, 2024, 4:33 PM IST

ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್

ಹುಬ್ಬಳ್ಳಿ: ಕಾಂಗ್ರೆಸ್​ನವರು ಓಲೈಕೆ ರಾಜಕಾರಣ ಮಾಡುತ್ತಿದ್ದಾರೆ. ನಾವು ದೇಶದ ಸಮಗ್ರ ಅಭಿವೃದ್ಧಿಗೆ ಆದ್ಯತೆ ಕೊಡುತ್ತಿದ್ದೇವೆ ಎಂದು ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಹೇಳಿದರು.

ನಗರದಲ್ಲಿಂದು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ನಗದು ರಹಿತ ವಾಣಿಜ್ಯ ವಹಿವಾಟಿಗೆ ಆದ್ಯತೆ ನೀಡಿದ್ದೇವೆ. ಇದರಿಂದ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲಾಗಿದೆ. ಸಾಮಾಜಿಕ ಸವಲತ್ತುಗಳನ್ನು ಕಲ್ಪಿಸಿಕೊಡಲು ಆದ್ಯತೆ ಕೊಟ್ಟಿದ್ದೇವೆ. ಇದರಲ್ಲಿ ಮಹಿಳೆಯರ ಸಬಲೀಕರಣ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸೇರಿದಂತೆ ಶೋಷಿತ ಸಮುದಾಯದ ಏಳಿಗೆಗೆ ಆದ್ಯತೆ ನೀಡಿದ್ದೇವೆ ಎಂದರು.

ದೇಶದ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿ ಪಡಿಸಿದ್ದೇವೆ. ಇದರ ಆಧಾರದ ಮೇಲೆ ವಿಕಸಿತ ಭಾರತದ ಅಭಿವೃದ್ಧಿಗೆ ಆದ್ಯತೆ ಕೊಡುತ್ತಿದ್ದೇವೆ. ಆದರೆ ಕಾಂಗ್ರೆಸ್​ ಸಮುದಾಯದ ಓಲೈಕೆ ಗಮನದಲ್ಲಿಟ್ಟುಕೊಂಡು ಪ್ರಣಾಳಿಕೆ ಬಿಡುಗಡೆ ಮಾಡಿದೆ ಎಂದು ಟೀಕಿಸಿದರು.

ರಾಜೇಂದ್ರ ಸಾಚಾರ್​ ಕಮಿಟಿ, ರಂಗನಾಥ ಮಿಶ್ರಾ ಸಮಿತಿ ಇವುಗಳ ಅಂಶಗಳ ಜಾರಿಗೆ ಆದ್ಯತೆ ನೀಡಿದ್ದೇವೆ. ವಿಕಸಿತ ಭಾರತವೇ ನಮ್ಮ ಧ್ಯೇಯ. ಉತ್ತಮ ಆಡಳಿತ ನೀಡುವುದು, ಭ್ರಷ್ಟಾಚಾರ ಮುಕ್ತ ಆಡಳಿತ ನೀಡುವುದೇ ನಮ್ಮ ಅಜೆಂಡಾ. ಈ ಹಿನ್ನೆಲೆ ದೇಶದಲ್ಲಿ 400ಕ್ಕೂ ಅಧಿಕ ಸೀಟ್​​ ಗಳಿಸುತ್ತೇವೆ. ಇದಕ್ಕೆ 370 ಕಲಂ ರದ್ದತಿ ಕೂಡಾ ನಮಗೆ ಸಹಕಾರ ನೀಡುತ್ತದೆ ಎಂದು ಕೇಂದ್ರ ಸಚಿವರು ತಿಳಿಸಿದರು.

ಇದನ್ನೂ ಓದಿ: TCS ವರ್ಲ್ಡ್ 10K: ಕೀನ್ಯಾದ ಪೀಟರ್ ಮ್ವಾನಿಕಿ, ಲಿಲಿಯನ್ ಕಸಾಯಿಟ್ ಚಾಂಪಿಯನ್ - TCS World 10K Bengaluru

ಮುಸ್ಲಿಂ ಸಮುದಾಯ ಬಿಎಸ್ಪಿ, ಎಸ್ಪಿ, ಟಿಎಂಸಿ ಸಮತಾವಾದಿ ಪಕ್ಷದಲ್ಲಿ ವಿಂಗಡಣೆ ಆಗಿತ್ತು. ಅದನ್ನು ಸೆಳೆಯಲು ಇಂಡಿಯಾ ಒಕ್ಕೂಟವನ್ನು ಮಾಡಿಕೊಂಡಿದ್ದಾರೆ. ಇಂಡಿಯಾ ಒಕ್ಕೂಟ ಘಟಬಂಧನವಲ್ಲ, ಕಟಬಂಧನ ಎಂದು ಅವರು ವ್ಯಂಗ್ಯವಾಡಿದರು. ಮಾಧ್ಯಮಗೋಷ್ಟಿಯಲ್ಲಿ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ್, ಮುಖಂಡರಾದ ದತ್ತಮೂರ್ತಿ ಕುಲಕರ್ಣಿ, ಬಸವರಾಜ ಅಮ್ಮಿನಬಾವಿ, ಗುರು ಪಾಟೀಲ್ ಉಪಸ್ಥಿತರಿದ್ದರು.

ಇದನ್ನೂ ಓದಿ: ಮೋದಿ ಬದುಕಿರುವವರೆಗೂ ಕಾಂಗ್ರೆಸ್ ಆಸೆ ಈಡೇರುವುದಿಲ್ಲ: ನರೇಂದ್ರ ಮೋದಿ ಎಚ್ಚರಿಕೆ - PM MODI ELECTION CAMPAIGN

ETV Bharat Logo

Copyright © 2025 Ushodaya Enterprises Pvt. Ltd., All Rights Reserved.