ಆನೇಕಲ್: ತಾಲೂಕಿನ ಹೆಬ್ಬಗೋಡಿ ಕಾರ್ಖಾನೆಯೊಂದಕ್ಕೆ ದಿಢೀರ್ ಬೆಂಕಿ ಬಿದ್ದ ಪರಿಣಾಮ ಎರಡು ಅಗ್ನಿಶಾಮಕದಳದ ವಾಹನಗಳು ಸ್ಥಳಕ್ಕೆ ದೌಡಾಯಿಸಿವೆ. ಬೆಂಗಳೂರು - ಹೊಸೂರು ರಾಜ್ಯ ಹೆದ್ದಾರಿಯ ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದ ಎಸ್ಕೆಎಫ್ ತಿರುವಿನ ಏರಿಯನ್ ಟೆಕ್ನಾಲಜಿ ಯೂನಿಟ್-1ರಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ಸ್ಥಳಕ್ಕೆ ಹೆಬ್ಬಗೋಡಿ ಪೊಲೀಸರು ಧಾವಿಸಿದ್ದು ಕಾರ್ಖಾನೆಯಲ್ಲಿನ ಕಾರ್ಮಿಕರನ್ನ ಸುರಕ್ಷಿತವಾಗಿ ಹೊರ ಹೋಗಲು ಅನುವು ಮಾಡುತ್ತಿದ್ದಾರೆ. ತಕ್ಷಣ ಬೆಂಕಿಗೆ ಕಾರಣ ಇನ್ನೂ ತಿಳಿದು ಬಂದಿಲ್ಲವಾದರೂ ಈ ಕ್ಷಣ ಸುರಕ್ಷತೆಯ ಹಿತದೃಷ್ಟಿಯಿಂದ ಜನರನ್ನ ಕಾಪಾಡುವಲ್ಲಿ ಪೊಲೀಸ್ ಸಿಬ್ಬಂದಿ, ಅಗ್ನಿಶಾಮಕದಳ ಹೆಣಗಾಡುತ್ತಿದೆ.
ಕಾರ್ಖಾನೆ ಮೇಲೆಯೂ ಬೆಂಕಿ ಕೆನ್ನಾಲಿಗೆ ಕಾಣಿಸುತ್ತಿದ್ದು, ಬೆಂಕಿ ತೀವ್ರತೆ ಹೆಚ್ಚಾಗಿದೆ. ಕಾರ್ಖಾನೆ ಸಂಜೆಯಿಂದಲೇ ಬೆಂಕಿ ಆರ್ಭಟಕ್ಕೆ ಸಿಲುಕಿದ್ದು ಬಹುಪಾಲು ಸುಟ್ಟಿದೆ. ಹೊಗೆಯ ದಟ್ಟಣೆ ಆಗಸಕ್ಕೆ ಮುಟ್ಟಿದೆ. ಅಗ್ನಿಶಾಮಕದಳ ಎಷ್ಟೇ ಪ್ರಯತ್ನಿಸಿದರೂ ಬೆಂಕಿ ನಿಯಂತ್ರಣಕ್ಕೆ ಬರುತ್ತಿಲ್ಲ.
ಇದನ್ನೂ ಓದಿ: ಬುಲೆಟ್ ಬೈಕ್ ಇಲ್ಲದ ಹತಾಶೆ: ಪೆಟ್ರೋಲ್ ಕದ್ದು 3 ದ್ವಿಚಕ್ರವಾಹನಗಳಿಗೆ ಬೆಂಕಿ ಇಟ್ಟವ ಅರೆಸ್ಟ್ - Bengaluru Crime