ಧಾರವಾಡ: ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಮೂಡಿಸುವ ದೃಷ್ಟಿಯಿಂದ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರು ಒಂದು ಹೆಜ್ಜೆ ಮುಂದಿಟ್ಟಿದ್ದು, ನಗರದ ಹಲವೆಡೆ ಪೊಲೀಸರಿಂದ ಏರಿಯಾ ಡಾಮಿನೇಷನ್ ಕಾರ್ಯ ನಡೆಯುತ್ತಿದೆ.
ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶನಿವಾರ ರಾತ್ರಿ ಏರಿಯಾ ಡಾಮಿನೇಷನ್ ನಡೆದಿದೆ. ಹು-ಧಾ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಒಟ್ಟು 243 ಜನರ ವಿರುದ್ಧ ಪೊಲೀಸರು ಕಾನೂನು ಕ್ರಮ ಕೈಗೊಂಡಿದ್ದಾರೆ. 50 ರೌಡಿಶೀಟರ್, 36 MOB, 9 NDPS, ಖಾಲಿ ಜಾಗ, ರಸ್ತೆ ಪಕ್ಕ ಕುಡಿಯುತ್ತ ಕುಳಿತಿದ್ದ 61 ಜನ, ಇತರೆ 18 ಜನ ಸೇರಿ 170 ಜನರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
170 ಜನರ ಮೇಲೆ ಕೆಪಿ ಆ್ಯಕ್ಟ್ ಅಡಿ ಪ್ರಕರಣ ದಾಖಲಿಸಲಾಗಿದ್ದು, ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡುತ್ತಿದ್ದ 31 ಜನರ ವಿರುದ್ಧ COPTA ಆ್ಯಕ್ಟ್ ಅಡಿ ಕೇಸ್ ನಮೂದಿಸಲಾಗಿದೆ. ಸಂಚಾರ ನಿಯಮ ಉಲ್ಲಂಘಿಸಿದ 38 ಜನರ ವಿರುದ್ಧ MV ಆ್ಯಕ್ಟ್ ಅಡಿ ಕೇಸ್ ಹಾಕಲಾಗಿದೆ. ಏರಿಯಾ ಡಾಮಿನೇಷನ್ ಬಳಿಕ ಮಾಧ್ಯಮಗಳಿಗೆ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಮಾಹಿತಿ ನೀಡಿದರು.
ಇದನ್ನೂ ಓದಿ: ಸಿಇಟಿಯನ್ನು ಕಂಪ್ಯೂಟರ್ ಆಧಾರಿತ ಪರೀಕ್ಷೆಯಾಗಿಸುವ ಬಗ್ಗೆ ಚಿಂತನೆ: ಉನ್ನತ ಶಿಕ್ಷಣ ಸಚಿವ ಸುಧಾಕರ್ - CET Computer Based Test