ಬೆಂಗಳೂರು: ಇತ್ತೀಚೆಗೆ ಹಲಸೂರು ಗೇಟ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಿಬಿಎಂಪಿ ಕಸದ ಲಾರಿಯು ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಾವನ್ನಪ್ಪಿದ ದುರಂತ ಸಂಭವಿಸಿತ್ತು. ಈ ಘಟನೆ ಮಾಸುವ ಮುನ್ನವೇ ಇದೇ ರೀತಿ ಮತ್ತೊಂದು ಅವಘಡ ಸಂಭವಿಸಿದೆ.ಬಿಬಿಎಂಪಿ ಕಸದ ಲಾರಿಗೆ ಮತ್ತೊಂದು ಜೀವ ಬಲಿಯಾಗಿದೆ.
ರಸ್ತೆ ದಾಟುವಾಗ ಕಸದ ಲಾರಿ ಡಿಕ್ಕಿ ಹೊಡೆದ ಪರಿಣಾಮ 69 ವರ್ಷದ ವೃದ್ಧೆ ಅವರು ಜಂಬೂಸವಾರಿ ದಿಣ್ಣೆಯಲ್ಲಿರುವ ಮಗಳ ಗೃಹಪ್ರವೇಶಕ್ಕೆ ಬಂದಿದ್ದರು. ಕೆಲದಿನಗಳ ಮಗಳ ಮನೆಯಲ್ಲಿ ಉಳಿದಿಕೊಂಡಿದ್ದರು ವೃದ್ದೆ ಸಂಬಂಧಿಕರೊಬ್ಬರು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಊರಿಗೆ ಹೋಗಲು ನಿನ್ನೆ ಬೆಳಗ್ಗೆ ಜಂಬೂಸವಾರಿ ದಿಣ್ಣೆ ಬಳಿ ಬಸ್ಗಾಗಿ ನಡೆದುಕೊಂಡು ರಸ್ತೆ ದಾಟುತ್ತಿದ್ದರು. ಈ ವೇಳೆ ವೇಗವಾಗಿ ಬಂದ ಕಸದ ಲಾರಿಯು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ವೃದ್ಧೆ ಸಾವನ್ನಪ್ಪಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಸಂಚಾರ ಪೊಲೀಸರು ಚಾಲಕ ಮೊಹಮ್ಮದ್ ಹುಸೈನ್ಅನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಓದಿ: ಇಬ್ಬರು ಟೆಕ್ಕಿಗಳ ಸಾವು ಪ್ರಕರಣ: ಬಿಬಿಎಂಪಿ ಕಸದ ಲಾರಿ ಚಾಲಕ ಅರೆಸ್ಟ್ - BBMP Lorry Driver Arrested