ETV Bharat / state

ಕಾಂಗ್ರೆಸ್​ನವರು ಸೋಲಿನ ಹತಾಶೆಯಲ್ಲಿ ಏನೇನೋ ಮಾತನಾಡುತ್ತಿದ್ದಾರೆ: ಅಣ್ಣಾಮಲೈ ತಿರುಗೇಟು - Annamalai Campaign - ANNAMALAI CAMPAIGN

ಬಾಗಲಕೋಟೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಿ.ಸಿ. ಗದ್ದಿಗೌಡರ ಪರ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಮತಬೇಟೆ ನಡೆಸಿದರು.

annamalai-campaign
ಕಾಂಗ್ರೆಸ್​ನವರು ಸೋಲಿನ ಹತಾಶೆಯಲ್ಲಿ ಏನೇನೋ ಮಾತನಾಡುತ್ತಿದ್ದಾರೆ: ಅಣ್ಣಾಮಲೈ ತಿರುಗೇಟು (Etv Bharat)
author img

By ETV Bharat Karnataka Team

Published : May 2, 2024, 4:53 PM IST

Updated : May 2, 2024, 5:24 PM IST

ಕಾಂಗ್ರೆಸ್​ ನಾಯಕರಿಗೆ ಅಣ್ಣಾಮಲೈ ತಿರುಗೇಟು (ETV Bharat)

ಬಾಗಲಕೋಟೆ: ಜಮಖಂಡಿ ಪಟ್ಟಣದಲ್ಲಿ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಅವರು ಗುರುವಾರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿರುವ ಪಿ.ಸಿ. ಗದ್ದಿಗೌಡರ ಪರ ರೋಡ್ ಶೋ ಮೂಲಕ ಮತ ಪ್ರಚಾರ ನಡೆಸಿದರು. ಹೆಲಿಕಾಪ್ಟರ್ ಮೂಲಕ ಆಗಮಿಸಿದ ಅವರು, ಪಟ್ಟಣದಲ್ಲಿ ಪ್ರಮುಖ ರಸ್ತೆಯಲ್ಲಿ ತೆರೆದ ವಾಹನದಲ್ಲಿ ಮತಯಾಚಿಸಿದರು.

ರೋಡ್​ ಶೋಗೂ ಮುನ್ನ ಹೆಲಿಪ್ಯಾಡ್​​​ನಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅಣ್ಣಾಮಲೈ, ''ಕಾಂಗ್ರೆಸ್ ಪಕ್ಷದವರು ಸೋತಿದ್ದಾರೆ. ಸೋತವರು ಏನು ಬೇಕಾದರೂ ಮಾತನಾಡುತ್ತಾರೆ. ಕಾಂಗ್ರೆಸ್ ನಾಯಕರು ಹತಾಶೆಯಲ್ಲಿದ್ದಾರೆ. ಮಾಧ್ಯಮಗಳಲ್ಲಿ ಸುದ್ದಿಯಲ್ಲಿರಬೇಕೆಂದು ಮಾತಾಡುತ್ತಾರೆ. ನಾವು ಬಹಳ ಸ್ಪಷ್ಟವಾಗಿದ್ದೇವೆ. 10 ವರ್ಷ ಕೆಲಸ ಮಾಡಿದ್ದು, ಇನ್ನೂ 5 ವರ್ಷ ಮೋದಿಜಿ ಬೇಕು ಅಂತಾ ಜನರು ತೀರ್ಮಾನಿಸಿದ್ದಾರೆ. ಈ ಸಲ ಎನ್​ಡಿಎಗೆ ಉತ್ಸಾಹದಿಂದ ಬೆಂಬಲ‌ ನೀಡಿದ್ದಾರೆ'' ಎಂದರು.

ಪ್ರಜ್ವಲ್ ರೇವಣ್ಣ ಪ್ರಕರಣ ಇಟ್ಟುಕೊಂಡು ಬಿಜೆಪಿಗರನ್ನು ಕಾಂಗ್ರೆಸ್ ಟಾರ್ಗೆಟ್ ಮಾಡುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿ, ''ಅಮಿತ್​ ಶಾ ಅವರು ಈಗಾಗಲೇ ಇದಕ್ಕೆ ಉತ್ತರ ಕೊಟ್ಟಿದ್ದಾರೆ. ನಮ್ಮ ಪ್ರಕಾರ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದೆ. ಎಸ್ಐಟಿ ಅದರ ಕಂಟ್ರೋಲ್‌ನಲ್ಲಿದೆ. ಅಗತ್ಯ ಕ್ರಮವನ್ನು ಕಾಂಗ್ರೆಸ್​ ಸರ್ಕಾರ ತೆಗೆದುಕೊಳ್ಳಬೇಕಿದೆ. ಅದಕ್ಕೆ ಯಾರಾದರೂ ಅಡ್ಡಪಡಿಸುತ್ತಿದ್ದಾರಾ? ಕ್ರಮ ತಗೋಬೇಡಿ ಅಂತ ಯಾರಾದರೂ ಹೇಳುತ್ತಿದ್ದಾರಾ? ತೊಂದರೆ ಕೊಡ್ತಿದಾರಾ? ಎಲ್ಲಿಯೂ ಕೂಡಾ ನಾವು ಬರಲ್ಲ, ಸರ್ಕಾರ ನಿಮ್ಮದೇ ಇದೆ. ಪೊಲೀಸರು ನಿಮ್ಮವರೇ ಇದ್ದಾರೆ, ಕ್ರಮ‌ ಕೈಗೊಳ್ಳಿ'' ಎಂದು ತಿರುಗೇಟು ನೀಡಿದರು.

ಇದು ಬಿಜೆಪಿಗೆ ಮುಜುಗರ ತಂದೊಡ್ಡುವುದಿಲ್ಲವೇ ಎಂಬ ಪ್ರಶ್ನೆಗೆ, ''ಎಲೆಕ್ಷನ್ ಸಮಯದಲ್ಲಿ ಬೇರೆ ರೂಪದಲ್ಲಿ ಜನರಿಗೆ ತೊಂದರೆ ಇದೆ ಅಂದರೆ ದೂರು ನೀಡುತ್ತಾರೆ. ಅಂತಹ ದೂರಿನ ತನಿಖೆ ಮಾಡಲು ಪೊಲೀಸ್ ಇಲಾಖೆ ಇದೆ. ಅವರು ಮಾಡುತ್ತಾರೆ. ಕ್ರಮ ಕೈಗೊಳ್ಳುವ ಬಗ್ಗೆ ಪೊಲೀಸರು ನಿರ್ಧರಿಸುತ್ತಾರೆ. ಈ ತನಿಖೆ ತಡೆಗೆ ಹಾಗೂ ಮುಚ್ಚಿಹಾಕಲು ಬಿಜೆಪಿ ಏನಾದರೂ ಮಾಡುತ್ತಿದೆಯೇ, ಇಲ್ವಲ್ಲ'' ಎಂದು ಪ್ರತಿಕ್ರಿಯಿಸಿದರು.

''ಜೆಡಿಎಸ್ ಪಕ್ಷದಲ್ಲಿ ಈಗಾಗಲೇ ಅಮಾನತು ಮಾಡಿದ್ದಾರೆ. ಎಸ್ಐಟಿ ತನಿಖೆಗೆ ಸಂಪೂರ್ಣ ಬೆಂಬಲ ಕೊಡುತ್ತೇವೆ ಎಂದಿದ್ದಾರೆ. ಆ ಪ್ರಕಾರ ಕೆಲಸ ಆಗುತ್ತಿದೆ, ಇವರು (ರಾಜ್ಯ ಸರ್ಕಾರ) ಕೆಲಸ ಮಾಡಿ ತೋರಿಸಬೇಕು. ತನಿಖೆ ಪೂರ್ಣಗೊಳಿಸಿ ಕ್ರಮ ಕೈಗೊಳ್ಳಬೇಕು'' ಎಂದು ಆಗ್ರಹಿಸಿದರು.

ಅಣ್ಣಾಮಲೈ ರೋಡ್​ ಶೋ: ಜಮಖಂಡಿ ಪಟ್ಟಣದ ಹನುಮಾನ ಚೌಕದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅಣ್ಣಾಮಲೈ ಅವರು, ''2024ರ ಲೋಕಸಭಾ ಚುನಾವಣೆಯು ಬಹಳ ಮಹತ್ವದ್ದಾಗಿದೆ. 2014 ರಿಂದ ಇಲ್ಲಿಯವರೆಗೆ ಪ್ರಧಾನಿ ನರೇಂದ್ರ ಮೋದಿ ಅವರು, ಸಾಕಷ್ಟು ಬದಲಾವಣೆ ತಂದು, ಭಾರತವನ್ನು ಇಡೀ ಜಗತ್ತಿನಲ್ಲೇ ಆರ್ಥಿಕವಾಗಿ ಮುಂದುವರೆಯುವ ದೇಶವನ್ನಾಗಿ ಬದಲಾಯಿಸಿದ್ದಾರೆ. ಮೋದಿ ಮತ್ತೊಮ್ಮೆ ಪ್ರಧಾನಿ ಆಗಿ, ಇನ್ನೂ ಸಾಕಷ್ಟು ಅಭಿವೃದ್ಧಿ ಮಾಡಬೇಕಿದೆ. ಈ ಹಿನ್ನೆಲೆಯಲ್ಲಿ ಪಿ.ಸಿ. ಗದ್ದಿಗೌಡರ ಅವರಿಗೆ ಮತ ಚಲಾಯಿಸಿ'' ಎಂದು ಜನರಲ್ಲಿ ಮನವಿ ಮಾಡಿದರು.

ಜಮಖಂಡಿ‌ ಶಾಸಕ ಜಗದೀಶ ಗುಡಗುಂಟಿ, ತೇರದಾಳ ಶಾಸಕ ಸಿದ್ದು ಸವದಿ, ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಸೇರಿದಂತೆ ಇತರ ಮುಖಂಡರು ರೋಡ್ ಶೋದಲ್ಲಿ ಸಾಥ್ ನೀಡಿದರು.

ಇದನ್ನೂ ಓದಿ: 'ಪಾತ್ರವಲ್ಲ, ಅಭಿನಯ ಮುಖ್ಯ', ಪ್ರಜ್ವಲ್ ಪ್ರಕರಣದಲ್ಲಿ ಇಡೀ ದೇವೇಗೌಡ ಕುಟುಂಬ ರಾಜಕೀಯದಿಂದ ಹೊರ ಇರಬೇಕು: ಮೊಯ್ಲಿ - HASSAN PEN DRIVE CASE

Last Updated : May 2, 2024, 5:24 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.