ETV Bharat / state

ಚಿಕ್ಕಮಗಳೂರು: ಕೆರೆಯಲ್ಲಿ ಮುಳುಗುತ್ತಿದ್ದ ಬಾಲಕ, ರಕ್ಷಣೆಗೆ ಹೋದ ವೃದ್ಧ; ಇಬ್ಬರೂ ನೀರುಪಾಲು - A BOY AND AN OLD MAN DROWN - A BOY AND AN OLD MAN DROWN

ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಚಿಕ್ಕಂಗಳ ಗ್ರಾಮದ ಕೆರೆಯಲ್ಲಿ ಮುಳುಗುತ್ತಿದ್ದ ಬಾಲಕನನ್ನು ಕಾಪಾಡಲು ತೆರಳಿದ ವೃದ್ಧನೂ ನೀರು ಪಾಲಾಗಿರುವ ಘಟನೆ ನಡೆದಿದೆ.

an-old-man-died-while-trying-to-save-a-boy-who-was-drowning-in-a-lake
ಕೆರೆಯಲ್ಲಿ ಮುಳುಗುತ್ತಿದ್ದ ಬಾಲಕನನ್ನು ರಕ್ಷಿಸಲು ಹೋಗಿ ವೃದ್ಧ ಸಾವು
author img

By ETV Bharat Karnataka Team

Published : Apr 4, 2024, 7:21 PM IST

Updated : Apr 4, 2024, 7:32 PM IST

ಕೆರೆಯಲ್ಲಿ ಮುಳುಗುತ್ತಿದ್ದ ಬಾಲಕನನ್ನು ರಕ್ಷಿಸಲು ಹೋಗಿ ವೃದ್ಧ ಸಾವು

ಚಿಕ್ಕಮಗಳೂರು : ನೀರಿನಲ್ಲಿ ಮುಳುಗುತ್ತಿದ್ದ ಬಾಲಕನನ್ನು ರಕ್ಷಿಸಲು ಹೋದ ವೃದ್ಧ ಹಾಗೂ ಬಾಲಕ ಇಬ್ಬರೂ ನೀರುಪಾಲಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ.

ಕಡೂರು ತಾಲೂಕಿನ ಚಿಕ್ಕಂಗಳ ಗ್ರಾಮದಲ್ಲಿ ಈ ದುರಂತ ಸಂಭವಿಸಿದ್ದು, ಮೃತರನ್ನು ಕೃಷ್ಣ ನಾಯಕ್ (70) ಹಾಗೂ ಬಾಲಕ ಆದರ್ಶ್ (14) ಎಂದು ಗುರುತಿಸಲಾಗಿದೆ. ಚಿಕ್ಕಂಗಳ ಗ್ರಾಮದ ಕೆರೆಯಲ್ಲಿ ಕುರಿಗಳಿಗೆ ನೀರನ್ನು ಕುಡಿಸಲು ಹೋದ ಬಾಲಕ ಆದರ್ಶ ಮುಳುಗುತ್ತಿರುವುದನ್ನು ಕಂಡು ಕೃಷ್ಣ ನಾಯಕ್ ಕಾಪಾಡಲು ಮುಂದಾಗಿದ್ದರು.

ದುರಾದೃಷ್ಟವಶಾತ್ ಇಬ್ಬರು ಕೆರೆಯ ಗುಂಡಿಯ ಆಳಕ್ಕೆ ಸಿಲುಕಿ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಕಡೂರು ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಭೇಟಿ ನೀಡಿದರು. ಶೋಧ ಕಾರ್ಯ ನಡೆಸಿ, ಮೃತ ದೇಹಗಳನ್ನು ಹೊರ ತೆಗೆದಿದ್ದಾರೆ. ಮೃತರ ಕುಟುಂಬಗಳಿಗೆ ಕಡೂರು ಶಾಸಕ ಕೆ. ಎಸ್ ಆನಂದ್, ಚಿಕ್ಕಂಗಳ ಗ್ರಾಮ ಪಂಚಾಯತಿ ಸದಸ್ಯ ಪ್ರಕಾಶ್ ನಾಯಕ್ ಸಾಂತ್ವನ ಹೇಳಿದ್ದಾರೆ. ಕಡೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಬಳಿಕ, ಪ್ರಕರಣ ದಾಖಲಿಸಿಕೊಂಡರು.

ಇದನ್ನೂ ಓದಿ : ಹಾಸನ: ಕೆರೆಗೆ ಹಾರಿ ಪತ್ನಿ ಆತ್ಮಹತ್ಯೆ, ರಕ್ಷಿಸಲು ಹೋದ ಪತಿಯೂ ಸಾವು

Last Updated : Apr 4, 2024, 7:32 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.