ಮಂಡ್ಯ: ಸಕ್ಕರೆನಾಡಲ್ಲಿ ಪ್ರವಾಸಿ ತಾಣಗಳಿಗೇನು ಕೊರತೆ ಇಲ್ಲ. ಕೆ.ಆರ್.ಎಸ್ನ ಬೃಂದಾವನ, ರಂಗನತಿಟ್ಟು ಪಕ್ಷಿಧಾಮ ವಿಶ್ವ ಪ್ರಸಿದ್ಧಿ ಸ್ಥಾನ ಪಡೆದಿದ್ದರೆ ಇವುಗಳ ಜೊತೆಗೆ ಇದೀಗ ಮತ್ತೊಂದು ತಾಣ ಜಿಲ್ಲೆಯಲ್ಲಿ ಪ್ರವಾಸಿಗರ ಹಾಟ್ಸ್ಪಾಟ್ ಆಗಿದ್ದು, ಪ್ರವಾಸಿಗರ ಕಣ್ಮನ ತಣಿಸುತ್ತಿದೆ. ಯಾವುದು ಆ ಪ್ರವಾಸಿ ತಾಣ? ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್.
ಶ್ರೀರಂಗಪಟ್ಟಣದ ಹೊರ ವಲಯದ ಮೈಸೂರು-ಬೆಂಗಳೂರು ದಶಪಥ ಹೆದ್ದಾರಿ ಪಕ್ಕದಲ್ಲಿರುವ ಪಯಣ ಹೆಸರಿನ ವಿಂಟೇಜ್ ಮ್ಯೂಸಿಯಂ ಎಲ್ಲರನ್ನೂ ಕೈ ಬೀಸಿ ಕರೆಯುತ್ತಿದೆ. ಹೌದು, ಈ ವಿಂಟೇಜ್ ಮ್ಯೂಸಿಯಂಗೆ ಇದೀಗ ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಆಗಮಿಸಿ ಇಲ್ಲಿನ ಪಾರಂಪರಿಕ ಸೊಬಗನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಪಯಣ ಹೆಸರಿನ ಈ ಮ್ಯೂಸಿಯಂನ್ನು ಧರ್ಮಸ್ಥಳ ಸಂಸ್ಥೆಯ ಸಹಯೋಗದಲ್ಲಿ ನಿರ್ಮಿಸಲಾಗಿದೆ. ಸದ್ಯ ಮ್ಯೂಸಿಯಂನಲ್ಲಿ ವಿವಿಧ ದೇಶಗಳ ಹಳೇ ಕಾಲದ ವಿಂಟೇಜ್ ಕಾರುಗಳನ್ನು ಸಾಲಾಗಿ ನಿಲ್ಲಿಸಲಾಗಿದೆ.
ಸುಮಾರು 70ಕ್ಕೂ ಹೆಚ್ಚು ಹಳೆಯ ಕಾರುಗಳಿದ್ದು ಆಕಾರ, ಬಣ್ಣ ವಿಭಿನ್ನವಾಗಿವೆ. ಇವುಗಳಲ್ಲಿ ಮೈಸೂರು ರಾಜ ವಂಶಸ್ಥ ಜಯಚಾಮರಾಜ ಒಡೆಯರ್ ಬಳಸುತ್ತಿದ್ದ ಡಾಮ್ಲರ್ ಕಾರು, ನೊಬೆಲ್ ಪ್ರಶಸ್ತಿ ಪುರಸ್ಕೃತ ವಿಜ್ಞಾನಿ ಸಿ. ವಿ. ರಾಮನ್ ಅವರ ವಿಶೇಷ ಕಾರು ಇದ್ದೂ, ಇದರ ಮೂಲ ಯುಎಸ್ಎ ಆಗಿದೆ. ಸಿಲಿಂಡರ್ ಆಕಾರದ ಜೋಡಿ ಇಂಜಿನ್ ಹಾಗೂ ಈ ಕಾರಿಗೆ ಎರಡು ಬಾಗಿಲು ಇವೆ. ಅಲ್ಲದೇ ಇಲ್ಲಿ ಹಳೆಯ ಬೈಕ್, ಸ್ಕೂಟರ್, ಸೇರಿದಂತೆ ಪಾರಂಪರಿಕ ಕರಕುಶಲ ವಸ್ತುಗಳು ಕೂಡ ಪ್ರವಾಸಿಗರ ಗಮನ ಸೆಳೆಯುತ್ತಿವೆ.
ಇದನ್ನೂ ಓದಿ: ಗೋವಾದ ಬ್ರಾಹ್ಮಿ ಶಾಸನದಲ್ಲಿ ಹೊಸ ರಾಜಮನೆತನ ಬೆಳಕಿಗೆ: ಮಂಗಳೂರಿನ ನಿ. ಪ್ರೊಫೆಸರ್ ಮಾಹಿತಿ - Haihaya dynasty ruled Goa