ETV Bharat / state

ಫ್ಲೈಓವರ್‌ ಕಾಮಗಾರಿಯ ರಾಡ್ ಬಿದ್ದು ಗಾಯಗೊಂಡಿದ್ದ ASI ಸಾವು: ನೇತ್ರದಾನ, ಸಾವಿನಲ್ಲೂ ಸಾರ್ಥಕತೆ - ASI died

author img

By ETV Bharat Karnataka Team

Published : Sep 15, 2024, 12:07 PM IST

ಫ್ಲೈ ಓವರ್‌ ಕಾಮಗಾರಿಯ ಕಬ್ಬಿಣದ ರಾಡ್​ ಬಿದ್ದು ಗಾಯಗೊಂಡಿದ್ದ ಎಎಸ್​ಐ ನಾಭಿರಾಜ್ ದಯಣ್ಣವರ ಇಂದು ಸಾವನ್ನಪ್ಪಿದ್ದಾರೆ. ಅವರ ಕಣ್ಣುಗಳನ್ನು ದಾನ ಮಾಡಲಾಗಿದೆ.

ಫ್ಲೈ ಓವರ್‌ ಕಾಮಗಾರಿಯ ರಾಡ್ ಬಿದ್ದು ಗಾಯಗೊಂಡಿದ್ದ ಎಎಸ್ಐ ನಾಭಿರಾಜ್ ಸಾವು
ಫ್ಲೈ ಓವರ್‌ ಕಾಮಗಾರಿಯ ರಾಡ್ ಬಿದ್ದು ಗಾಯಗೊಂಡಿದ್ದ ಎಎಸ್ಐ ನಾಭಿರಾಜ್ ಸಾವು (ETV Bharat)
ಘಟನೆ ಬಗ್ಗೆ ಪೊಲೀಸ್​ ಕಮಿಷನರ್​ ಎನ್​. ಶಶಿಕುಮಾರ್​ ಅವರಿಂದ ಮಾಹಿತಿ (ETV Bharat)

ಹುಬ್ಬಳ್ಳಿ: ಫ್ಲೈ ಓವರ್‌ ಕಾಮಗಾರಿ ವೇಳೆ ಕಬ್ಬಿಣದ ರಾಡ್ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಎಎಸ್​ಐ ನಾಭಿರಾಜ್ ದಯಣ್ಣವರ (59) ಚಿಕಿತ್ಸೆ ಫಲಕಾರಿಯಾಗದೆ ಕಿಮ್ಸ್ ಆಸ್ಪತ್ರೆಯಲ್ಲಿ ಇಂದು ಬೆಳಗಿನ ಜಾವ ಸಾವನ್ನಪ್ಪಿದ್ದಾರೆ.

ನಾಭಿರಾಜ್ ಅವರು ಕಳೆದ ಮಂಗಳವಾರ ಸಾಯಂಕಾಲ ಕರ್ತವ್ಯಕ್ಕೆ ಬೈಕ್ ಮೇಲೆ ತೆರಳುತ್ತಿದ್ದರು. ಹಳೇ ಕೋರ್ಟ್ ಸರ್ಕಲ್ ಬಳಿಯಲ್ಲಿ ನಡೆಯುತ್ತಿದ್ದ ಫ್ಲೈ ಓವರ್‌ ಕಾಮಗಾರಿಯ ಕಬ್ಬಿಣದ ರಾಡ್ ಅವರ ತಲೆಯ ಮೇಲೆ ಬಿದ್ದಿತ್ತು. ಕೂಡಲೇ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ನಂತರ ಕಿಮ್ಸ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದ್ರೆ ತಲೆಗೆ ಬಲವಾದ ಏಟು ಬಿದ್ದ ಕಾರಣ ಕೋಮಾಗೆ ಜಾರಿದ್ದ ನಾಭಿರಾಜ್ ಇಂದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಸಾವಿನಲ್ಲೂ ಸಾರ್ಥಕತೆ ಮೆರೆದ ಎಎಸ್ಐ: ಎಎಸ್​ಐ ನಾಭಿರಾಜ್​ ಕುಟುಂಬಸ್ಥರು ಅವರನ್ನು ಕಳೆದುಕೊಂಡ ನೋವಿನಲ್ಲೂ ಮಾನವೀಯತೆ ಮೆರೆದಿದ್ದಾರೆ. ನಾಭಿರಾಜ್​ ನೇತ್ರಗಳನ್ನು ದಾನ ಮಾಡುವ ಮೂಲಕ ಸಾರ್ಥಕತೆಯನ್ನು ಮೆರೆದಿದ್ದಾರೆ. ಕಿಮ್ಸ್​ ಆಸ್ಪತ್ರೆಯಲ್ಲಿ ನೇತ್ರದಾನ ಮಾಡಲಾಗಿದೆ ಎಂದು ನಾಭಿರಾಜ್ ಮಾವ ಶಾಂತರಾಜ್ ಹೇಳಿದ್ದಾರೆ.

ನಾಭಿರಾಜ್​ ಇತ್ತೀಚಿಗೆ ಒಂದು ದಿನವೂ ರಜೆ ಹಾಕದೆ ಕರ್ತವ್ಯ ನಿರ್ಹಿಸುತ್ತಿದ್ದರು. ಕಣ್ಣು ದಾನ ಮಾಡಬೇಕು ಎನ್ನುವುದು ಅವರ ಇಚ್ಛೆ ಆಗಿತ್ತು. ಉಳಿದ ಅಂಗಾಂಗಗಳನ್ನು ಸಹ ದಾನ ಮಾಡಲು ಸಹ ನಾವು ಮುಂದಾಗಿದ್ದೆವು. ಆದರೆ ಸದ್ಯ ಅವರ ಯಾವುದೇ ಅಂಗಾಂಗಗಳು ಕಾರ್ಯ ಮಾಡುತ್ತಿಲ್ಲ. ಇಂದು ಧಾರವಾಡದ ಸತ್ತೂರು ರುದ್ರಭೂಮಿಯಲ್ಲಿ ನಾಭಿರಾಜ್ ಅಂತ್ಯಕ್ರಿಯೆ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು.

ನಮ್ಮ ಮಾವನ ಸಾವಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೇ ನೇರ ಕಾರಣ ಎಂದು ನಾಭಿರಾಜ್ ಅಳಿಯ ಅಭಿನಂದನ್ ಆರೋಪಿಸಿದ್ದಾರೆ. ತಪ್ಪಿತಸ್ಥರ ಮೇಲೆ ಕಠಿಣ ಕ್ರಮವಾಗಬೇಕು. ಘಟನೆ ನಡೆದು ನಾಲ್ಕು ದಿನ ಕಳೆದರು ಗುತ್ತಿಗೆದಾರ ಕಂಪನಿಯಿಂದ ಸೌಜನ್ಯಕ್ಕಾದರು ಯಾರೂ ಬಂದಿಲ್ಲ. ಇನ್ನೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಬಂದಿಲ್ಲ. ನಾಭಿರಾಜ್ ಅವರ ಸಾವಿಗೆ ನ್ಯಾಯ ಸಿಗಬೇಕು. ಅವೈಜ್ಞಾನಿಕ ಕಾಮಗಾರಿಗೆ ಕಾರಣರಾದ ಎಲ್ಲರಿಗೂ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು.

ಚಿಕಿತ್ಸೆ ಫಲಿಸದೆ ಎಎಸ್​ಐ ನಾಭಿರಾಜ್ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಕಿಮ್ಸ್ ಆಸ್ಪತ್ರೆಗೆ ಪೊಲೀಸ್ ಕಮಿಷನರ್ ಎನ್​. ಶಶಿಕುಮಾರ್ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗಿನ ಜಾವ ನಾಭಿರಾಜ್ ಮೃತಪಟ್ಟಿದ್ದಾರೆ. ಪೊಲೀಸ್ ಮತ್ತು ಜಿಲ್ಲಾಡಳಿತ ಅವರನ್ನು ಉಳಿಸಿಕೊಳ್ಳಲು ಸಾಕಷ್ಟು ಪ್ರಯತ್ನ ಮಾಡಿತು. ಆದರೆ ನಮ್ಮ ಶ್ರಮ ಫಲಿಸಲಿಲ್ಲ. ಈಗಾಗಲೇ 19 ಜನರ ಮೇಲೆ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈಗ ಎಎಸ್ಐ ಸಾವನ್ನಪ್ಪಿದ್ದು ಇದನ್ನು ಗಂಭೀರ ಸ್ವರೂಪದ ಪ್ರಕರಣ ಎಂದು ಪರಿಗಣಸಲಾಗುತ್ತದೆ. ಈ ಕಾಮಗಾರಿಯಲ್ಲಿ ಯಾವ ಯಾವ ಇಲಾಖೆ ಬರುತ್ತವೊ ಎಲ್ಲವೂ ಇದಕ್ಕೆ ಹೊಣೆ. ಸಂಬಂಧಿತ ಗುತ್ತಿಗೆದಾರ ಕಂಪನಿ, ಮಾಲೀಕ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಮೇಲೂ ಪ್ರಕರಣ ದಾಖಲಾಗುತ್ತದೆ. ಇದು ನಮ್ಮದೇ ಇಲಾಖೆ ಪ್ರಕರಣ, ಹೀಗಾಗಿ ಯಾವುದೇ ಲೋಪದೋಷವಾಗಲು ಬಿಡಲ್ಲ ಎಂದರು.

ಇದನ್ನೂ ಓದಿ: ASI ತಲೆ ಮೇಲೆ ಫ್ಲೈಓವರ್ ರಾಡ್​​ ಬಿದ್ದ ಪ್ರಕರಣ: 16 ಜನರ ವಿರುದ್ಧ ದೂರು ದಾಖಲು - FLYOVER CASE

ಇದನ್ನೂ ಓದಿ: ಪ್ಲೈಓವರ್ ಕಾಮಗಾರಿ ವೇಳೆ ತಲೆಗೆ ಕಬ್ಬಿಣದ ರಾಡ್ ಬಿದ್ದು ASIಗೆ ಗಂಭೀರ ಗಾಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.