ETV Bharat / state

ಆರ್​ಸಿಬಿ-ಡೆಲ್ಲಿ ಕ್ಯಾಪಿಟಲ್ಸ್ ಪಂದ್ಯ ವೀಕ್ಷಣೆ ವೇಳೆ‌ ಕಳಪೆ ಆಹಾರ ನೀಡಿದ ಆರೋಪ: ಎಫ್​ಐಆರ್​ ದಾಖಲು - FIR Registered - FIR REGISTERED

ಆರ್​ಸಿಬಿ-ಡೆಲ್ಲಿ ಕ್ಯಾಪಿಟಲ್ಸ್ ಪಂದ್ಯ ವೀಕ್ಷಣೆ ವೇಳೆ‌ ಕಳಪೆ ಆಹಾರ ನೀಡಿದ ಆರೋಪ ಹಿನ್ನೆಲೆ ಕೆಎಸ್​ಸಿಎ ಮ್ಯಾನೇಜ್​ಮೆಂಟ್ ವಿರುದ್ಧ ಎಫ್ಐಆರ್ ದಾಖಲಾಗಿದೆ.

POOR FOOD  ALLEGATION  RCB DELHI MATCH  BENGALURU
ಎಫ್​ಐಆರ್​ ದಾಖಲು (ಫೋಟೋ ಕೃಪೆ: IANS)
author img

By ETV Bharat Karnataka Team

Published : May 15, 2024, 12:56 PM IST

ಬೆಂಗಳೂರು: ಕಳಪೆ ಆಹಾರ ನೀಡಿದ ಆರೋಪದಡಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಆಡಳಿತ ಮಂಡಳಿ (ಕೆಎಸ್​ಸಿಎ) ವಿರುದ್ಧ ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಎಫ್ಐಆರ್​ ದಾಖಲಿಸಿಕೊಂಡಿದ್ದಾರೆ.

ಮೇ 12ರಂದು ಐಪಿಎಲ್ ವೀಕ್ಷಿಸಲು ಬಂದಿದ್ದ 23 ವರ್ಷದ ಚೈತನ್ಯ ಎಂಬಾತ ನೀಡಿದ ದೂರು ಆಧರಿಸಿ ಕೆಎಸ್​ಸಿಎ ಆಡಳಿತ ಮಂಡಳಿ ಹಾಗೂ ಕ್ಯಾಂಟೀನ್ ವ್ಯವಸ್ಥಾಪಕರ ವಿರುದ್ಧ ಪ್ರಕರಣ ದಾಖಲು ಮಾಡಿದ್ದಾರೆ. ಇದೇ‌ ತಿಂಗಳು 12ರಂದು ನಗರದ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಆರ್​ಸಿಬಿ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಪಂದ್ಯ ವೀಕ್ಷಣೆಗಾಗಿ ಚೈತನ್ಯ ಅವರು ಸ್ನೇಹಿತ ಗೌತಮ್​ನೊಂದಿಗೆ ಬಂದಿದ್ದರು. ಕತಾರ್ ಏರ್ ವೇಸ್ ಫ್ಯಾನ್ಸ್ ಟರೇಸ್ ಸ್ಟ್ಯಾಂಡ್​​ನಲ್ಲಿ ಪಂದ್ಯ ವೀಕ್ಷಿಸುವಾಗ ಅಲ್ಲಿದ್ದ ಕ್ಯಾಂಟೀನ್​ನಿಂದ ಊಟ ಸೇವಿಸಿದ ನಂತರ ಕೆಲವೇ ನಿಮಿಷಗಳಲ್ಲಿ ಹೊಟ್ಟೆ ನೋವು ಕಂಡು ಬಂದಿದೆ. ಬಳಿಕ ತಾನು ಕುಳಿತುಕೊಂಡಿದ್ದ ಜಾಗದಲ್ಲಿ ಚೈತನ್ಯ ಕುಸಿದುಬಿದ್ದಿದ್ದರು.

ಸಿಬ್ಬಂದಿ ನೆರವಿನಿಂದ ಸ್ಟೇಡಿಯಂ ಹೊರಗಿದ್ದ ಆ್ಯಂಬುಲೆನ್ಸ್​ನಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿತ್ತು‌. ಬಳಿಕ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿದಾಗ ಚೈತನ್ಯನನ್ನು ಪರೀಕ್ಷಿಸಿದ ವೈದ್ಯರು ಫುಡ್ ಪಾಯಿಸನ್ ಆಗಿದೆ ಎಂದು ದೃಢಪಡಿಸಿದ್ದರು. ಈ ಸಂಬಂಧ ತಮ್ಮ ಆರೋಗ್ಯ ಹದಗೆಡಲು ಕ್ಯಾಂಟೀನ್​ನಲ್ಲಿ ನೀಡಿದ ಆಹಾರವೇ ಕಾರಣ. ಹೀಗಾಗಿ ಕೆಎಸ್​ಸಿಎ ಆಡಳಿತ ಮಂಡಳಿ ವಿರುದ್ಧ ಕ್ರಮಕೈಗೊಳ್ಳುವಂತೆ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಓದಿ: IPL: ಲಕ್ನೋ ವಿರುದ್ದ ಗೆದ್ದ ಡೆಲ್ಲಿ; ಆರ್​ಸಿಬಿ ಪ್ಲೇ ಆಫ್​ ಹಾದಿ ಮತ್ತಷ್ಟು ಸನಿಹ! - DC Beat LSG

ETV Bharat Logo

Copyright © 2024 Ushodaya Enterprises Pvt. Ltd., All Rights Reserved.