ETV Bharat / state

ಶ್ರೀಮಂತರಿಗೆ ಮೋದಿ ಕೊಟ್ಟ ಸಂಪತ್ತೆಲ್ಲವೂ ಸೃಷ್ಟಿಯಾಗಿದ್ದು ಕಾಂಗ್ರೆಸ್​ ಸರ್ಕಾರದ ಅವಧಿಯಲ್ಲಿ: ಪ್ರಿಯಾಂಕಾ ಗಾಂಧಿ - Priyanka Gandhi vadra

author img

By ETV Bharat Karnataka Team

Published : May 4, 2024, 8:36 PM IST

ಬಿಜೆಪಿ ಪಕ್ಷ ದೇಣಿಗೆ ಸಂಗ್ರಹ ಮಾಡಿಕೊಂಡು ವಿಶ್ವದಲ್ಲೇ ಅತ್ಯಂತ ಶ್ರೀಮಂತ ಪಕ್ಷವಾಗಿದೆ ಎಂದು ಕಾಂಗ್ರೆಸ್​ ನಾಯಕಿ ಪ್ರಿಯಾಂಕಾ ಗಾಂಧಿ ದೂರಿದ್ದಾರೆ.

ಪ್ರಿಯಾಂಕಾ ಗಾಂಧಿ
ಪ್ರಿಯಾಂಕಾ ಗಾಂಧಿ (ETV Bharat)

ದಾವಣಗೆರೆ: ಮೋದಿಯವರು ದೊಡ್ಡ ದೊಡ್ಡ ಇವೆಂಟ್​ಗಳನ್ನು ಮಾಡುತ್ತಾರೆ, ಆದರೆ ಬಡವರ ಮನೆಗೆ ಹೋಗಿ ಅವರ ಸಮಸ್ಯೆ ಅಲಿಸಲಿಲ್ಲ. ಮೋದಿ ಒಳ್ಳೆ ಮಾತುಗಳನ್ನು ಆಡುತ್ತಾರೆ. ಆದರೆ ಅವರ ಸಂಬಂಧ ದೊಡ್ಡ ದೊಡ್ಡ ಶ್ರೀಮಂತರೊಂದಿಗೆ ಇರುತ್ತದೆಯೇ ಹೊರತು ಬಡವರೊಂದಿಗೆ ಇರುವುದಿಲ್ಲ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ವಾಗ್ದಾಳಿ ನಡೆಸಿದರು. ಇಲ್ಲಿನ ಹೈಸ್ಕೂಲ್ ಮೈದಾನದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್‌ ಪರ ಮತಯಾಚನೆ ಮಾಡಿದ ಬಳಿಕ ಅವರು ಮಾತನಾಡಿದರು.

''ದೇಶದಲ್ಲಿರುವ ವಿಮಾನ ನಿಲ್ದಾಣ, ಬಂದರುಗಳು, ರಸ್ತೆ, ವಿದ್ಯುತ್ ಅನ್ನು ಅವರ ಶ್ರೀಮಂತ ಸ್ನೇಹಿತರಿಗೆ ಕೊಡಲಾಗಿದೆ. ಕಾಂಗ್ರೆಸ್​ನವರು 70 ವರ್ಷದಲ್ಲಿ ಏನು ಮಾಡಿದ್ದಾರೆ ಎಂದು ಕೇಳುವ ನೀವು(ಬಿಜೆಪಿ) ಇದುವರೆಗೂ ಶ್ರೀಮಂತರಿಗೆ ಕೊಟ್ಟ ಪ್ರತಿಯೊಂದು ಸಂಪತ್ತು ಕೂಡ ನಮ್ಮ ಸರ್ಕಾರದ ಅವಧಿಯಲ್ಲಿ ಸೃಷ್ಟಿಯಾಗಿದ್ದು. ಬಿಜೆಪಿ ಕಳೆದ 10 ವರ್ಷದಲ್ಲಿ 7 ಸಾವಿರ ಕೋಟಿ ಹಣವನ್ನು ದೇಣಿಗೆ ಪಡೆದುಕೊಂಡಿದೆ. ಪ್ರಧಾನಿ ಮೋದಿ ದೊಡ್ಡ ದೊಡ್ಡ ಉದ್ಯಮಿಗಳು, ಬಂಡವಾಳಶಾಹಿಗಳು ಮತ್ತು ಅವರ ಸ್ನೇಹಿತರ 16 ಲಕ್ಷ ಕೋಟಿ ರೂಪಾಯಿ ಸಾಲ ಮನ್ನಾ ಮಾಡಿದ್ದಾರೆ'' ಎಂದು ದೂರಿದರು.

''ಬಿಜೆಪಿ ದೇಣಿಗೆ ಸಂಗ್ರಹ ಮಾಡಿಕೊಂಡು ವಿಶ್ವದಲ್ಲೇ ಅತ್ಯಂತ ಶ್ರೀಮಂತ ಪಕ್ಷವಾಗಿದೆ. ಸದ್ಯ ತಾಯಂದಿರು ದಿನ ಬಳಕೆ ವಸ್ತುಗಳನ್ನು ಕೊಳ್ಳಲು ಅಂಗಡಿಗೆ ಹೋದರೆ ಅಲ್ಲಿ ಅವುಗಳ ಬೆಲೆಗಳನ್ನು ನೋಡಿ ಮನೆಗೆ ವಾಪಸ್​ ಬರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕೃಷಿಗೆ ಬೇಕಾದ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ರೈತ ಸಂಕಷ್ಟಕ್ಕೆ ಸಿಲುಕಿದ್ದಾನೆ. ಕೋಟ್ಯಂತರ ರೂಪಾಯಿ ಸಾಲ ಮಾಡಿದ ಉದ್ಯಮಿಗಳ ಸಾಲ ಮನ್ನಾ ಆಗುತ್ತದೆ. ಆದರೆ ಎರಡ್ಮೂರು ಲಕ್ಷ ಸಾಲ ಮನ್ನಾ ಆಗದೆ ರೈತರು ಆತ್ಮಹತ್ಯೆ ಮಾಡಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ'' ಎಂದರು.

ಧ್ವನಿ ಎತ್ತಿದವರಿಗೆ ಧಮ್ಕಿ- ಪ್ರಿಯಾಂಕಾ: ''ಗುಜರಾತ್​ನಲ್ಲಿ ನಿರ್ಮಾಣ ಮಾಡಿದ್ದ ಬ್ರಿಡ್ಜ್ ಬಿದ್ದಾಯಿತು. ಆದರೆ ಆ ಬ್ರಿಡ್ಜ್ ನಿರ್ಮಿಸಿದ ಕಾಂಟ್ರಾಕ್ಟರ್ ಬಳಿಯಿಂದ ಬಿಜೆಪಿಯವರು ದೇಣಿಗೆ ಪಡೆದಿದ್ದಾರೆ. ಲಸಿಕೆ ತಯಾರು ಮಾಡಿದವರಿಂದ ಇವರು ಚಂದಾ ಪಡೆದಿದ್ದಾರೆ. ಅ ವ್ಯಾಕ್ಸಿನ್ ನಿಂದ ದುಷ್ಪರಿಣಾಮ ಇದೆ ಎಂದು ತಿಳಿದುಬಂದಿದೆ. ಆರೋಗ್ಯವಾಗಿದ್ದ ಯುವಕರು ಈ ವ್ಯಾಕ್ಸಿನ್​ ಪಡೆದಿದ್ದರಿಂದ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ವ್ಯಾಕ್ಸಿನ್​ ಕಂಪನಿ 51 ಕೋಟಿ ಹಣ ಇವರಿಗೆ ದೇಣಿಗೆ ಕೊಟ್ಟಿದೆ. ಈ ದೇಶದಲ್ಲಿ ಯಾರು ಧ್ವನಿ ಎತ್ತುತ್ತಾರೆ ಅತಂಹವರಿಗೆ ಧಮ್ಕಿ ಹಾಕಲಾಗುತ್ತಿದೆ. ದುರಂತ ಎಂದರೆ ಇಡೀ ದೇಶದ ಇತಿಹಾಸದಲ್ಲಿ ಇಬ್ಬರು ಸಿಎಂಗಳನ್ನು ಈ ಸರ್ಕಾರ ಜೈಲಿಗೆ ಹಾಕಿತು'' ಎಂದು ಹರಿಹಾಯ್ದರು.

''ನರೇಂದ್ರ ಮೋದಿಯವರು ದೊಡ್ಡ ಸಂಸ್ಥೆಗಳನ್ನು ಖಾಸಗೀಕರಣಗೊಳಿಸಿ ಶ್ರೀಮಂತರಿಗೆ ಹಂಚಿಕೆ ಮಾಡಿದ್ದಾರೆ. ದೇಶದ ಸಂಪತ್ತನ್ನು ತಮ್ಮ ಶ್ರೀಮಂತ ಸ್ನೇಹಿತರಿಗೆ ಕೊಡಲಾಗುತ್ತಿದೆ. ಈ ಎಲ್ಲಾ ಸಂಪತ್ತು, ಹಣ ಜನ ಸಾಮಾನ್ಯರದ್ದು, 10 ವರ್ಷಗಳ ಆಡಳಿತದಲ್ಲಿ ಜನರಿಗೆ ಮೋದಿ ಸರ್ಕಾರ ಉದ್ಯೋಗ ಕೊಟ್ಟಿಲ್ಲ. ಭಾರತದಲ್ಲಿ ಚುನಾವಣೆ ನಡೆಯುತ್ತಿದ್ದರೆ ಇವರು ತಮ್ಮ ಭಾಷಣದಲ್ಲಿ ಪಾಕಿಸ್ತಾನದ ಬಗ್ಗೆ ಮಾತನಾಡುತ್ತಾರೆ. 10 ವರ್ಷಗಗಳಲ್ಲಿ ನೀವು ನಿರ್ಮಾಣ ಮಾಡಿದ ರಸ್ತೆ, ಶಿಕ್ಷಣ, ಶಾಲೆ ಹಾಗೂ ಆಸ್ಪತ್ರೆ ಮತ್ತು ಯುವಕರಿಗೆ ಎಷ್ಟು ಉದ್ಯೋಗ ಕೊಟ್ಟಿವೆ ಎಂಬುದನ್ನು ಹೇಳಬೇಕಿತ್ತು. ಆದರೆ ನೀವು ಅದ್ಯಾವುದನ್ನು ಮಾಡಲಿಲ್ಲ'' ಎಂದು ಟೀಕಿಸಿದರು.

ನೀವು ಒಬ್ಬ ಹೊಸ ಪಿಎಂ ಆಯ್ಕೆ ಮಾಡಿ, ಹೊಸ ಆಡಳಿತಕ್ಕೆ ಅವಕಾಶ ಕೊಡಿ. ಕರ್ನಾಟಕದಲ್ಲಿ ಬದಲಾವಣೆ ತಂದಂತೆ ಕೇಂದ್ರದಲ್ಲಿ ಬದಲಾವಣೆ ತನ್ನಿ. ಅಲೋಚನೆ ಮಾಡಿ ಮತದಾನ ಮಾಡಿ ಎಂದು ಮತದಾರರಿಗೆ ಪ್ರಿಯಾಂಕಾ ಗಾಂಧಿ ಮನವಿ ಮಾಡಿದರು.

ಇದನ್ನೂ ಓದಿ: ಎರಡನೇ ಹಂತದ ಚುನಾವಣೆ: ಡಾ. ಪ್ರಭಾ ಮಲ್ಲಿಕಾರ್ಜುನ್​-ಗಾಯಿತ್ರಿ ಸಿದ್ದೇಶ್ವರ್ ನಡುವೆ ನೇರ ಫೈಟ್ - Ground Report

ETV Bharat Logo

Copyright © 2024 Ushodaya Enterprises Pvt. Ltd., All Rights Reserved.