ETV Bharat / state

ಹುಬ್ಬಳ್ಳಿ-ಧಾರವಾಡ ನಗರಕ್ಕೆ ಅತ್ಯಾಧುನಿಕ ಬಸ್​ಗಳ​ ವ್ಯವಸ್ಥೆ: ಪ್ರಾಯೋಗಿಕವಾಗಿ 10 ಬಸ್‌ಗಳ ಸಂಚಾರ ಆರಂಭ - advanced bus to twin cities

ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಹುಬ್ಬಳ್ಳಿ-ಧಾರವಾಡ ನಗರಕ್ಕೆ ಹೆಚ್ಚಿನ ಸಾರಿಗೆ ವ್ಯವಸ್ಥೆ ನೀಡುತ್ತಿದ್ದು, ಈಗಾಗಲೇ ಪ್ರಾಯೋಗಿಕವಾಗಿ 10 ಬಸ್‌ಗಳ ಸಂಚಾರ ಆರಂಭವಾಗಿದೆ.

ADVANCED BUS TO TWIN CITIES
ಹುಬ್ಬಳ್ಳಿ-ಧಾರವಾಡ ನಗರಕ್ಕೆ ಅತ್ಯಾಧುನಿಕ ಬಸ್​ಗಳ​ ವ್ಯವಸ್ಥೆ (ETV Bharat)
author img

By ETV Bharat Karnataka Team

Published : Aug 14, 2024, 10:47 AM IST

ನಗರ ಸಾರಿಗೆಯ ವಿಭಾಗೀಯ ನಿಯಂತ್ರಣಾಧಿಕಾರಿ ಸಿದ್ದಲಿಂಗೇಶ ಅವರಿಂದ ಮಾಹಿತಿ (ETV Bharat)

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಅವಳಿನಗರಗಳು. ಈ ನಗರಗಳಲ್ಲಿ ನಗರ ಸಾರಿಗೆ ಸೇವೆ ಸದೃಢಗೊಳಿಸಲು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮುಂದಾಗಿದೆ. ಅತ್ಯಾಧುನಿಕ ಮಹಾನಗರ ಬಸ್‌ಗಳು ಹುಬ್ಬಳ್ಳಿ-ಧಾರವಾಡ, ಬೆಳಗಾವಿ ನಗರದ ರಸ್ತೆಗಿಳಿಯಲಿದ್ದು, ಈಗಾಗಲೇ ಪ್ರಾಯೋಗಿಕವಾಗಿ 10 ಬಸ್‌ಗಳ ಸಂಚಾರ ಆರಂಭಗೊಂಡಿದೆ.

ಪ್ರಾಯೋಗಿಕವಾಗಿ 10 ಬಸ್‌ಗಳ ಸಂಚಾರ ಆರಂಭ
ಪ್ರಾಯೋಗಿಕವಾಗಿ 10 ಬಸ್‌ಗಳ ಸಂಚಾರ ಆರಂಭ (ETV Bharat)

ಶಕ್ತಿ ಯೋಜನೆ ನಂತರ ಬಸ್‌ಗಳ ಕೊರತೆಯ ಬಿಸಿ ತಟ್ಟಿತ್ತು. ಸರ್ಕಾರದ ನೆರವಿನೊಂದಿಗೆ ಒಂದಿಷ್ಟು ಸಾಲ ಮಾಡಿ ವಾಯವ್ಯ ಸಾರಿಗೆ ಸಂಸ್ಥೆ ಹೊಸ ಬಸ್‌ಗಳನ್ನು ಖರೀದಿಸಿ ಗ್ರಾಮೀಣ ಸಾರಿಗೆಗೆ ಒತ್ತು ನೀಡಿತ್ತು. ಈಗ ನಗರ ಸಾರಿಗೆಗೂ ಒತ್ತು ನೀಡುವ ನಿಟ್ಟಿನಲ್ಲಿ 100 ಬಸ್​​ ಖರೀದಿಗೆ ಮುಂದಾಗಿದೆ. ಈಗಾಗಲೇ ಟೆಂಡರ್​​​ ಸೇರಿದಂತೆ ಎಲ್ಲ ಪ್ರಕ್ರಿಯೆಗಳು ಪೂರ್ಣಗೊಂಡಿವೆ.

ಅತ್ಯಾಧುನಿಕ ಬಸ್​: ಬಿಎಸ್​-6 ಮಾದರಿಯ ಟಾಟಾ ಕಂಪನಿಯ ಬಸ್‌ಗಳಾಗಿದ್ದು, ಗ್ರಾಮೀಣ ಸಾರಿಗೆಗೆ ಕೆಂಪು ಬಿಳಿ ಬಣ್ಣ ಕಡ್ಡಾಯಗೊಳಿಸಿದಂತೆ ನಗರ ಸಾರಿಗೆಗೆ ಇನ್ನು ಮುಂದೆ ನೀಲಿ ಹಾಗೂ ಬಿಳಿ ಮಿಶ್ರಿತ ಬಣ್ಣ ಇರಲಿದೆ. ಬಸ್ಸಿನ ಹಿಂದೆ, ಮುಂದೆ, ಒಳಗಡೆ ಸಿಸಿ ಕ್ಯಾಮೆರಾಗಳಿವೆ. ನಾಲ್ಕು ಕಡೆಗಳಲ್ಲಿ ಎಲ್​​ಇಡಿ ಬೋರ್ಡ್‌ಗಳಿವೆ (10 ವರ್ಷಗಳ ನಿರ್ವಹಣಾ ಒಪ್ಪಂದವಿದೆ). ಅಡ್ಜ್​ಸ್ಟೇಬಲ್ ಸ್ಟೇರಿಂಗ್, ನ್ಯೂಮ್ಯಾಟಿಕ್ ಬಾಗಿಲು, ಜಿಪಿಎಸ್ ವ್ಯವಸ್ಥೆ ಇರಲಿದೆ.

ನಿಲ್ದಾಣದ ಧ್ವನಿ ಮಾಹಿತಿ ವ್ಯವಸ್ಥೆ ಇರಲಿದ್ದು, ರಿಯಲ್​ ಟೈಮ್​ ಲೊಕೆಶನ್​ ಗೊತ್ತಾಗಲಿದೆ. ಎಷ್ಟು ವೇಗದಲ್ಲಿ ಸಂಚಾರ, ಎಷ್ಟು ಬಾರಿ ಬ್ರೇಕ್ ಹಾಕಿದ್ದಾರೆ. ಸದ್ಯದ ವೇಗದ ಪ್ರಕಾರ ಮೈಲೇಜ್​ ಎಷ್ಟು ಬರಲಿದೆ. ವೇಗದ ಚಾಲನೆ, ಇಂಧನ ಎಷ್ಟು ಉಳಿದಿದೆ ಎಂಬುದು ಅಧಿಕಾರಿಗಳ ಮೊಬೈಲ್‌ನಲ್ಲಿರುವ ಆ್ಯಪ್​ ಮೂಲಕ ಮಾಹಿತಿ ದೊರೆಯಲಿದೆ.

ಈ ಕುರಿತಂತೆ ನಗರ ಸಾರಿಗೆಯ ವಿಭಾಗೀಯ ನಿಯಂತ್ರಣಾಧಿಕಾರಿ ಸಿದ್ದಲಿಂಗೇಶ ಮಾಹಿತಿ‌ ನೀಡಿದ್ದು, "ಹುಬ್ಬಳ್ಳಿ- ಧಾರವಾಡದಲ್ಲಿ ಪ್ರಾಯೋಗಿಕವಾಗಿ 7 ಬಸ್​ಗಳು ಸಂಚಾರ ನಡೆಸುತ್ತಿವೆ. ಇದರಲ್ಲಿ ನಾಲ್ಕು ವಾಹನಗಳು ಹುಬ್ಬಳ್ಳಿ ನಗರ ಹಾಗೂ ಮೂರು ವಾಹನಗಳು ಧಾರವಾಡ ನಗರಕ್ಕೆ ನಿಯೋಜಿಸಲಾಗಿದೆ. ಈ ಬಸ್​ಗಳನ್ನು ಒಂದು ತಿಂಗಳವರೆಗೆ ಅವಧಿವರೆಗೆ ಅವಳಿನಗರದಲ್ಲಿ ಓಡಿಸುವ ಮೂಲಕ ವಾಹನಗಳ ದಕ್ಷತೆ ಪರೀಕ್ಷೆ ಮಾಡಲಾಗುತ್ತಿದೆ".

"ಮೈಲೇಜ್​​ ಸೇರಿದಂತೆ ವಾಹನಗಳು ಅವಳಿನಗರದ ರಸ್ತೆಗಳಿಗೆ ಯಾವ ರೀತಿ ಕೆಲಸ ಮಾಡುತ್ತವೆ ಎಂಬ ಬಗ್ಗೆ ಪರೀಕ್ಷೆ ಮಾಡಲಾಗುತ್ತಿದೆ. ಹೊಗೆರಹಿತ ವಾಹನಗಳಾಗಿದ್ದು, ನಗರ ಸಾರಿಗೆ ಇಲ್ಲಿಯವರೆಗೂ ಬಿಎಸ್​-6 ಮಾದರಿ ವಾಹನಗಳನ್ನು ಬಳಸುತ್ತಿರುವುದು ಇದೇ ಮೊದಲು. ಪ್ರಾಯೋಗಿಕ ಪರೀಕ್ಷೆಗೆ ವಿಶೇಷವಾಗಿ ಮೂರು ಭಾಗಗಳನ್ನು ಮಾಡಿಕೊಂಡು ಬಸ್ ಓಡಿಸಲಾಗುತ್ತದೆ. ನಗರದ ಪ್ರಮುಖ ರಸ್ತೆ, ಸಬರ್ ಬನ್ (ನಗರ- ಗ್ರಾಮೀಣ) ಹಾಗೂ ಅತಿ ಹೆಚ್ಚು ದಟ್ಟಣೆ ಇರುವ ಸ್ಥಳಗಳಲ್ಲಿ ಬಸ್​​ಗಳು ಪ್ರಾಯೋಗಿಕ ಸಂಚಾರ ಮಾಡುತ್ತಿವೆ. ಇವೆಲ್ಲವೂ ಪರಿಗಣಿಸಿ ವರದಿ ನೀಡಲಾಗುತ್ತದೆ. ಆಗ ಸರ್ಕಾರ ಹುಬ್ಬಳ್ಳಿ-ಧಾರವಾಡ ಹಾಗೂ ಬೆಳಗಾವಿ ನಗರ ಸಾರಿಗೆಗೆ ಒಟ್ಟು 100 ಬಸ್​​ಗಳನ್ನು ಖರೀದಿ ಮಾಡಲಾಗುವುದು" ಎಂದು ಮಾಹಿತಿ ನೀಡಿದರು.

ಒಂದು ತಿಂಗಳು ಪ್ರಾಯೋಗಿಕ ಕಾರ್ಯಾಚರಣೆ ಇರಲಿದ್ದು, ಈ ಸಂದರ್ಭದಲ್ಲಿ ಏನಾದರೂ ನ್ಯೂನತೆಗಳು, ಮಾರ್ಪಾಡುಗಳಿದ್ದರೆ ಕಂಪನಿಗೆ ವರದಿ ಸಲ್ಲಿಸಲಾಗುತ್ತದೆ. ನಂತರ ಹಂತ ಹಂತವಾಗಿ ಸಂಸ್ಥೆಗೆ ಬಸ್​​ ಸೇರ್ಪಡೆಯಾಗಲಿವೆ. 100 ಬಸ್‌ಗಳಲ್ಲಿ 40 ಹುಬ್ಬಳ್ಳಿ, 30 ಧಾರವಾಡ ಹಾಗೂ 30 ಬೆಳಗಾವಿ ನಗರಕ್ಕೆ ಹಂಚಿಕೆಯಾಗಲಿವೆ.

ದಶಕದ ನಂತರ ಉತ್ತರ ಕರ್ನಾಟಕಕ್ಕೆ ಇಷ್ಟು ಬಸ್​ಗಳು: ನಗರ ಸಾರಿಗೆಗೆ 12 ವರ್ಷಗಳ ನಂತರ ಇದೇ ಮೊದಲು ಇಷ್ಟು ಬಸ್​​ ಬರುತ್ತಿವೆ. 2011-12ರಲ್ಲಿ 42 ಹಾಗೂ 2014ರಲ್ಲಿ 10 ಬಸ್‌ಗಳು ಸಂಸ್ಥೆಗೆ ಸೇರ್ಪಡೆಯಾಗಿದ್ದವು. ಅದಾದ ನಂತರ ಜೆ-ನರ್ಮ್ ಯೋಜನೆಯಡಿ ಕೇಂದ್ರ ಸರ್ಕಾರದಿಂದ 280 ಮಿನಿ ಬಸ್‌ಗಳು ಬಂದಿದ್ದವು.

ಇದನ್ನೂ ಓದಿ: ಸುದೀರ್ಘ ರಜೆ ಹಿನ್ನೆಲೆ ಸಂಚಾರ ದಟ್ಟಣೆ ಸಾಧ್ಯತೆ; ಉದ್ಯೋಗಿಗಳಿಗೆ WFH ನೀಡುವಂತೆ ಟ್ರಾಫಿಕ್ ಜಂಟಿ ಆಯುಕ್ತರ ಪತ್ರ - Traffic Joint Commissioner Letter

ETV Bharat Logo

Copyright © 2024 Ushodaya Enterprises Pvt. Ltd., All Rights Reserved.