ETV Bharat / state

ಅಂಧಾಭಿಮಾನಿಗಳಿಂದ ಜೀವ ಬೆದರಿಕೆ ಆರೋಪ: ಪೊಲೀಸ್ ಠಾಣೆ ಮೆಟ್ಟಿಲೇರಿದ ನಟ ಪ್ರಥಮ್ - Actor Pratham filed complaint - ACTOR PRATHAM FILED COMPLAINT

ದರ್ಶನ್ ಮತ್ತವರ ಸಹವರ್ತಿಗಳ ವಿರುದ್ಧದ ಹತ್ಯೆ ಆರೋಪದ‌ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ಬೆದರಿಕೆ ಕರೆಗಳು ಹಾಗೂ ತಮ್ಮ ತಾಯಿ, ಪತ್ನಿಯ ಕುರಿತು ಅವಹೇಳನಕಾರಿ ಮೆಸೇಜ್​, ಕಾಮೆಂಟ್ಸ್ ಮಾಡಲಾಗುತ್ತಿದೆ ಎಂದು ನಟ ಪ್ರಥಮ್ ಜ್ಞಾನಭಾರತಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಪೊಲೀಸ್ ಠಾಣೆ ಮೆಟ್ಟಿಲೇರಿದ ನಟ ಪ್ರಥಮ್
ಪೊಲೀಸ್ ಠಾಣೆ ಮೆಟ್ಟಿಲೇರಿದ ನಟ ಪ್ರಥಮ್ (ETV Bharat)
author img

By ETV Bharat Karnataka Team

Published : Jun 22, 2024, 10:59 PM IST

ಬೆಂಗಳೂರು: ದರ್ಶನ್ ಮತ್ತವರ ಸಹವರ್ತಿಗಳ ವಿರುದ್ಧದ ಹತ್ಯೆ ಆರೋಪದ‌ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ಬೆದರಿಕೆ ಕರೆಗಳು ಹಾಗೂ ತಮ್ಮ ತಾಯಿ, ಪತ್ನಿಯ ಕುರಿತು ಅವಹೇಳನಕಾರಿ ಮೆಸೇಜ್​, ಕಾಮೆಂಟ್ಸ್ ಮಾಡಲಾಗುತ್ತಿದೆ ಎಂದು ಆರೋಪಿಸಿ ನಟ ಪ್ರಥಮ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಕೆಲ ಅಂಧಾಭಿಮಾನಿಗಳಿಂದ ಹತ್ಯೆ ಬೆದರಿಕೆ ಕರೆಗಳು ಬರುತ್ತಿರುವುದಾಗಿ ಅವರು, ಜ್ಞಾನಭಾರತಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಅದರನ್ವಯ ಪ್ರಕರಣ ದಾಖಲಾಗಿದೆ.

''ದರ್ಶನ್ ಅವರ ವಿಚಾರಣೆ ನಡೆಸಲಾಗುತ್ತಿದ್ದ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯ ಮುಂದೆ ಜಮಾಯಿಸುತ್ತಿದ್ದ ಅಭಿಮಾನಿಗಳನ್ನು ಲಾಠಿ ತೆಗೆದುಕೊಂಡು ಹೊಡೆಯಬೇಕು ಅನಿಸುತ್ತದೆ. ಅವರು ತಮ್ಮ‌ ಪೋಷಕರಿಗೆ ಒಂದು ಹೊತ್ತಿನ ಊಟ ಹಾಕುವ ಯೋಗ್ಯತೆ ಇಲ್ಲದವರು'' ಎಂದಿದ್ದ ಪ್ರಥಮ್, ದರ್ಶನ್ ಅವರನ್ನ ಸೂಪರ್ ಸ್ಟಾರ್ ಎಂದು ಕರೆಯುವುದರ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದರು. ಇದು ದರ್ಶನ್ ಅವರ ಕೆಲ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿತ್ತು.

ಇದನ್ನೂ ಓದಿ: ಪರಪ್ಪನ ಅಗ್ರಹಾರ ಸೇರಿದ ದರ್ಶನ್: ವಿಚಾರಣಾಧೀನ ಕೈದಿ ನಂಬರ್ 6106 - Actor Darshan sent to jail

ETV Bharat Logo

Copyright © 2024 Ushodaya Enterprises Pvt. Ltd., All Rights Reserved.