ETV Bharat / state

ನಟ ದರ್ಶನ್ ಅರಣ್ಯ ಇಲಾಖೆಯ ರಾಯಭಾರಿ ಅಲ್ಲ: ಸಚಿವ ಈಶ್ವರ್ ಖಂಡ್ರೆ - eshwara khandre - ESHWARA KHANDRE

ಅರಣ್ಯ ಇಲಾಖೆಗೆ ಯಾರೂ ರಾಯಭಾರಿಗಳು ಇಲ್ಲ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಸ್ಪಷ್ಟನೆ ನೀಡಿದರು.

ಸಚಿವ ಈಶ್ವರ್ ಖಂಡ್ರೆ
ಸಚಿವ ಈಶ್ವರ್ ಖಂಡ್ರೆ (ETV Bharat)
author img

By ETV Bharat Karnataka Team

Published : Jun 15, 2024, 10:18 PM IST

Updated : Jun 15, 2024, 10:59 PM IST

ಸಚಿವ ಈಶ್ವರ್ ಖಂಡ್ರೆ (ETV Bharat)

ಮೈಸೂರು: ದರ್ಶನ್ ಅರಣ್ಯ ಇಲಾಖೆಯ ರಾಯಭಾರಿ ಅಲ್ಲ, ಅರಣ್ಯ ಇಲಾಖೆಗೆ ಯಾರು ರಾಯಭಾರಿಗಳಿಲ್ಲ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಸ್ಪಷ್ಟನೆ ನೀಡಿದರು. ಶನಿವಾರ ಮೈಸೂರು ಮೃಗಾಲಯದಲ್ಲಿ ವಾಟ್ಸ್​​ಪ್​ ಟಿಕೆಟ್​ಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ನಟ ದರ್ಶನ್ ಅರಣ್ಯ ಇಲಾಖೆ ರಾಯಭಾರಿ ವಿಚಾರವಾಗಿ ಪ್ರತಿಕ್ರಿಯಿಸಿ, ನಮ್ಮ ಇಲಾಖೆಯಲ್ಲಿ ಯಾರೂ ರಾಯಭಾರಿಗಳು ಇಲ್ಲ ಎಂದರು.

ಆಂಧ್ರಪ್ರದೇಶದವರು ನಮ್ಮ ರಾಜ್ಯದ ಆನೆಗಳನ್ನು ಕೇಳಿದ್ದಾರೆ ಅಷ್ಟೇ. ಆದರೆ ಯಾವುದೇ ಕಾರಣಕ್ಕೂ ದಸರಾ ಆನೆಗಳನ್ನು ಕಳುಹಿಸಿಕೊಡಲು ಆಗಲ್ಲ. ದಸರಾ ಆನೆಗಳು ನಮ್ಮ ಅಸ್ಮಿತೆ. ಇತರೆ ಆನೆಗಳನ್ನು ಕಳುಹಿಸಿಕೊಡುವ ಬಗ್ಗೆ ಪರಿಶೀಲನೆ ನಡೆಸುತ್ತಿದ್ದೇವೆ ಎಂದರು.

ಚಾಮುಂಡಿ ಬೆಟ್ಟಕ್ಕೆ ರೋಪ್ ವೇ ನಿರ್ಮಾಣ ವಿಚಾರವಾಗಿ ಮಾತನಾಡಿ, ರೋಪ್ ವೇ ನಿರ್ಮಾಣ ವಿಚಾರದಲ್ಲಿ ಆತಂಕ ಪಡುವ ಅಗತ್ಯವಿಲ್ಲ. ಪರಿಸರ ಸಂರಕ್ಷಣೆ ಜೊತೆ ಅಭಿವೃದ್ಧಿ ಸಹ ಆಗಬೇಕು ಎಂದ ಸಚಿವರು, ಅರ್ಜುನ ಆನೆ ಮೃತಪಟ್ಟ ಸ್ಥಳ ಹಾಗೂ ಬಳ್ಳೆ ಅರಣ್ಯ ಶಿಬಿರದಲ್ಲಿ ಸರ್ಕಾರವೇ ಸ್ಮಾರಕ ನಿರ್ಮಿಸಲಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಲೈವ್ ಫೀಡ್ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದ ಅವರು, ಮೃಗಾಲಯದ ಹಾವುಗಳಿಗೆ ಹೊರಗಿನಿಂದ ಆಹಾರ ತರಲಾಗುತ್ತಿತ್ತು. ಈಗ ನಮ್ಮಲ್ಲೇ ಮೊಲ, ಇಲಿ ಸಂತತಿ ಹೆಚ್ಚಳಕ್ಕೆ ಮುಂದಾಗಿದ್ದೇವೆ. ಚಾಮರಾಜೇಂದ್ರ ಮೃಗಾಲಯ ಅಭಿವೃದ್ಧಿಗೆ ನಾವು ಸಿದ್ಧರಿದ್ದೇವೆ ಎಂದರು.

ವಿದ್ಯುತ್ ಸ್ಪರ್ಶಿಸಿ ಆನೆಗಳ ದುರಂತ ಸಾವು ವಿಚಾರವಾಗಿ ಪ್ರತಿಕ್ರಿಯಿಸಿ, ವಿದ್ಯುತ್ ಸ್ಪರ್ಶದಿಂದ ಆನೆಗಳು ಸಾಯುತ್ತಿರುವುದು ದುಃಖದ ಸಂಗತಿ. ಆನೆಗಳ ಸಾವಿನ ಬಗ್ಗೆ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇವೆ. ಇಂತಹ ಘಟನೆ ಮರುಕಳಿಸದಂತೆ ಕ್ರಮ ವಹಿಸಲು ಸೂಚನೆ ನೀಡಿದ್ದೇನೆ ಎಂದಿದ್ದಾರೆ.

ಇದನ್ನೂ ಓದಿ: ಮೈಸೂರು ಮೃಗಾಲಯದಲ್ಲಿ ವಾಟ್ಸಪ್ ಟಿಕೆಟ್​ಗೆ ಚಾಲನೆ; ದಸರಾ ಆನೆಗಳನ್ನು ಎಲ್ಲಿಯೂ ಕೊಡುವುದಿಲ್ಲ ಎಂದ ಸಚಿವ ಖಂಡ್ರೆ - WhatsApp Tickets

Last Updated : Jun 15, 2024, 10:59 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.