ETV Bharat / state

ಎಲೆಕ್ಟ್ರಿಕಲ್ ಎಂಜಿನಿಯರ್​ಗಳ ನೇಮಕಾತಿಗೆ ಕ್ರಮ: ಡಿಸಿಎಂ ಡಿ.ಕೆ.ಶಿವಕುಮಾರ್ - DCM D K Shivakumar

ವಿಧಾನಸಭೆಯಲ್ಲಿ ಪ್ರಶ್ನೋತ್ತರ ವೇಳೆ ಜೆಡಿಎಸ್ ಶಾಸಕ ಎ.ಮಂಜು ಈ ಬಗ್ಗೆ ಪ್ರಸ್ತಾಪಿಸಿದಾಗ ಡಿಕೆಶಿ ಉತ್ತರ ನೀಡಿದರು.

DCM D K Shivakumar
ಡಿಸಿಎಂ ಡಿ ಕೆ ಶಿವಕುಮಾರ್​ (ETV Bharat)
author img

By ETV Bharat Karnataka Team

Published : Jul 23, 2024, 7:50 PM IST

ಬೆಂಗಳೂರು: "ಏತ ನೀರಾವರಿ ಯೋಜನೆಗಳ ಮುಖ್ಯಸ್ಥಾವರಗಳ ನಿರ್ವಹಣೆಗಾಗಿ ಇಂಧನ ಇಲಾಖೆಯಿಂದ 3 ಮಂದಿ ವಿದ್ಯುತ್ ಎಂಜಿನಿಯರ್​ಗಳನ್ನು ಎರವಲು ಸೇವೆ ಮೇಲೆ ಪಡೆಯಲಾಗಿದೆ. ಮಿಕ್ಕಂತೆ ಅಗತ್ಯಕ್ಕೆ ಅನುಗುಣವಾಗಿ ಹೊರಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ನಮ್ಮ ಇಲಾಖೆಯಿಂದಲೇ ಎಲೆಕ್ಟ್ರಿಕಲ್​ ಎಂಜಿನಿಯರ್​ಗಳನ್ನು ನೇಮಕಾತಿ ಮಾಡಿಕೊಳ್ಳಲು ನಿಯಮ ತರಲಾಗುವುದು" ಎಂದು ಜಲಸಂಪನ್ಮೂಲ ಸಚಿವರೂ ಆಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.

ವಿಧಾನಸಭೆಯಲ್ಲಿ ಪ್ರಶ್ನೋತ್ತರ ವೇಳೆ ಏತ ನೀರಾವರಿ ಯೋಜನೆಯಲ್ಲಿ ಅಳವಡಿಸಿರುವ ಬೃಹತ್ ಪಂಪ್​ಗಳ ನಿರ್ವಹಣೆಗೆ ಎಲೆಕ್ಟ್ರಿಕಲ್ ಎಂಜಿನಿಯರ್​ಗಳ ಲಭ್ಯತೆ ಬಗ್ಗೆ ಜೆಡಿಎಸ್ ಶಾಸಕ ಎ.ಮಂಜು ಅವರು ಗಮನ ಸೆಳೆದರು. ಆಗ "ಹಿಡಕಲ್ ಜಲಾಶಯದ ಜಿಎಲ್​ಬಿಸಿ ಕಾಲುವೆಯಿಂದ ತಾಲೂಕುವಾರು ನೀರಿನ ಹಂಚಿಕೆಯಾಗಿಲ್ಲ" ಎಂದು ಮಹೇಂದ್ರ ಕಲ್ಲಪ್ಪ ತಮ್ಮಣ್ಣ ಅವರು ಪ್ರಸ್ತಾಪಿಸಿದರು. ಆಗ "ನೀರು ಹಂಚಿಕೆ ತಾರತಮ್ಯ ಉಂಟಾಗಿದ್ದರೆ ಸಮಸ್ಯೆ ಬಗೆಹರಿಸಲಾಗುವುದು. ಜುಲೈ 25 ರಂದು ಅಧಿಕಾರಿಗಳ ಸಭೆಯಲ್ಲಿ ಇದರ ಬಗ್ಗೆ ಗಮನ ಹರಿಸಲಾಗುವುದು. ಇದಕ್ಕಾಗಿ ವಿಶೇಷ ಸಭೆ ಕರೆದು ನಿಮ್ಮ ಅಹವಾಲು ಆಲಿಸಲಾಗುವುದು" ಎಂದು ಡಿಕೆಶಿ ತಿಳಿಸಿದರು.

ಇದನ್ನೂ ಓದಿ: ಸಂವಿಧಾನ ಹಾಗೂ ತುರ್ತು ಪರಿಸ್ಥಿತಿ ಕುರಿತ ವಿಚಾರ: ಸದನದಲ್ಲಿ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ಆರೋಪ, ಪ್ರತ್ಯಾರೋಪ - Monsoon Session

ETV Bharat Logo

Copyright © 2024 Ushodaya Enterprises Pvt. Ltd., All Rights Reserved.