ETV Bharat / state

ಷೋಡಶಾವಧಾನದಲ್ಲಿ ಬಾಲಕನ ವಿಶೇಷ ಸಾಧನೆ! ಇಂಡಿಯಾ ಬುಕ್ ಆಫ್ ರೆಕಾರ್ಡ್ ಸೇರಿದ ಅನ್ವೇಶ್ ಅಂಬೆಕಲ್ಲು - Achievement In Shodashavadhana

ಈಗಾಗಲೇ ಷೋಡಶಾವಧಾನದ ಮೂಲಕ ದಾಖಲೆ ಬರೆದಿರುವ ಅನ್ವೇಶ್​ ಇನ್ನೂ 10 ವಿಷಯಗಳಲ್ಲಿ ವಿಶ್ವದಾಖಲೆ ನಿರ್ಮಿಸುವ ತವಕದಲ್ಲಿದ್ದಾರೆ.

author img

By ETV Bharat Karnataka Team

Published : Jun 28, 2024, 4:34 PM IST

Updated : Jun 28, 2024, 8:13 PM IST

Anvesh Ambekallu
ಅನ್ವೇಶ್ ಅಂಬೆಕಲ್ಲು (ETV Bharat)

ಮಂಗಳೂರು: ಒಬ್ಬರು ಒಮ್ಮೆ ಹೇಳಿದ ವಿಷಯವನ್ನು ಪುನಾರವರ್ತಿಸುವುದೇ ಬಹಳ ಕಷ್ಟದ ಕೆಲಸ. ಆದರೆ ಇಲ್ಲೊಬ್ಬ ಬಾಲಕ 16 ಮಂದಿ ಹೇಳಿದ ವಿಷಯಗಳನ್ನು ನೆನಪಿಟ್ಟು ಹೇಳಿ ಇಂಡಿಯಾ ಬುಕ್ ಆಫ್​ ರೆಕಾರ್ಡ್​ನಲ್ಲಿ ಸೇರಿ ದಾಖಲೆ ಬರೆದಿದ್ದಾನೆ.

ಷೋಡಶಾವಧಾನದಲ್ಲಿ ಬಾಲಕನ ವಿಶೇಷ ಸಾಧನೆ (ETV Bharat)

ಹದಿನಾರು ಮಂದಿ ಕೊಟ್ಟ 16 ವಿಷಯಗಳನ್ನು ಏಕಕಾಲಕ್ಕೆ ನೋಡಿ, ಕೇಳಿ, ಗಮನಿಸಿ, ಸ್ಮರಣಶಕ್ತಿಯೊಳಗೆ ದಾಖಲಿಸಿಕೊಂಡು ಪ್ರದರ್ಶನ ನೀಡುವ 'ಷೋಡಶಾವಧಾನ'ದ ಮೂಲಕ ಮಂಗಳೂರು ಸ್ವರೂಪ ಅಧ್ಯಯನ ಕೇಂದ್ರದ ಅನ್ವೇಶ್ ಅಂಬೆಕಲ್ಲು 'ಇಂಡಿಯಾ ಬುಕ್ ಆಫ್ ರೆಕಾರ್ಡ್'ನಲ್ಲಿ ತನ್ನ ಹೆಸರು ಅಚ್ಚೊತ್ತಿದ್ದಾನೆ. ನೆನಪಿನ ಹತ್ತು ತಂತ್ರಗಳ ಮೂಲಕ ಮಕ್ಕಳಲ್ಲಿರುವ ಅಗಾಧ ಸಾಮರ್ಥ್ಯವನ್ನು ಸ್ವರೂಪ ಶಿಕ್ಷಣದ ಮೂಲಕ ಪರಿಚಯಿಸುವ ಸ್ವರೂಪ ಅಧ್ಯಯನ ಕೇಂದ್ರದ ಗೋಪಾಡ್ಕರ್ ಮಾರ್ಗದರ್ಶನದಲ್ಲಿ ಈ ಬಾಲಕ ದಾಖಲೆ ನಿರ್ಮಿಸಿದ್ದಾನೆ.

ಪುಸ್ತಕಗಳ ಹೆಸರುಗಳು, ಪ್ರಶ್ನೆಗಳು, ಸಂಖ್ಯೆಗಳು, ವಸ್ತುಗಳ ಹೆಸರು, ಚಿತ್ರಗಳ ಹೆಸರುಗಳು, ಹಾಡುಗಳ ಹೆಸರುಗಳು, ಘಂಟೆ ಶಬ್ದಗಳು, ಕ್ರಿಯೇಟಿವ್ ಆರ್ಟ್ ಜೊತೆಗೆ ಎರಡು ಕೈಗಳಿಗೂ, ಯೋಚನೆಗಳಿಗೂ ನಿರಂತರ ಕೆಲಸ, ಹೀಗೆ ಇನ್ನೂ ಹಲವು ವಿಚಾರಗಳ ಜೊತೆಗೆ ರೂಬಿಕ್ಸ್ ಕ್ಯೂಬ್ ಪರಿಹರಿಸಿಕೊಂಡು ಕಾಳುಗಳನ್ನು ಎಣಿಸುತ್ತಾ, ಮಧ್ಯೆ ಮಧ್ಯೆ ಪ್ರವೇಶ ಮಾಡಿ ಕಿರಿಕಿರಿ ಮಾಡುವ ಅಧಿಕ ಪ್ರಸಂಗಿಯನ್ನೂ ಸಹಿಸಿಕೊಂಡು 16 ವಿಷಯಗಳ ಅಂಶಗಳನ್ನು ನೆನಪಿನಲ್ಲಿಟ್ಟುಕೊಂಡು ದಾಖಲಿಸುವ ಮೂಲಕ ಈ ಅದ್ಭುತ ಸಾಧನೆಯ ಪ್ರದರ್ಶನ ಮಾಡಿ ದಾಖಲೆ ಬರೆದಿದ್ದಾನೆ.

Anvesh Ambekallu with parents
ಪೋಷಕರ ಜೊತೆಗೆ ಅನ್ವೇಶ್ ಅಂಬೆಕಲ್ಲು (ETV Bharat)

ಉದಯೋನ್ಮುಖ ಪ್ರತಿಭೆ: ಉಪ್ಪಿನಂಗಡಿ ಇಂದ್ರಪ್ರಸ್ಥ ವಿದ್ಯಾಲಯದಲ್ಲಿ 1ರಿಂದ 7ನೇ ತರಗತಿ ಶಿಕ್ಷಣ ಪೂರ್ಣಗೊಳಿಸಿರುವ ಅನ್ವೇಶ್​ ಪ್ರಸ್ತುತ ಸ್ವರೂಪ ಅಧ್ಯಯನ ಕೇಂದ್ರದಲ್ಲಿ 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾನೆ. ಪಠ್ಯಪುಸ್ತಕಗಳ ಕಲಿಕೆಯೊಂದಿಗೆ ವಿಶೇಷ ಸಾಮರ್ಥ್ಯಗಳನ್ನು ಮೈಗೂಡಿಸಿಕೊಂಡು ಬೆಳೆಯುತ್ತಿರುವ ಅನ್ವೇಶ್, ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ, ಮಿಮಿಕ್ರಿ ಬೀಟ್‌ಬಾಕ್ಸ್, ನೆನಪು ಶಕ್ತಿಯ ಪ್ರತಿಭಾ ಪ್ರದರ್ಶನ ಹಾಗೂ ವಯೋಲಿನ್ ಅಭ್ಯಾಸ ನಡೆಸುತ್ತಿರುವ ಜೊತೆಗೆ ಚಿತ್ರಕಲೆಯಲ್ಲಿಯೂ ಗುರುತಿಸಿಕೊಂಡಿರುವ ಉದಯೋನ್ಮುಖ ಪ್ರತಿಭೆ.

10 ವಿಶ್ವದಾಖಲೆ ನಿರ್ಮಾಣಕ್ಕೆ ತಯಾರಿ: ಮೂಲತಃ ಸುಳ್ಯದ ಪ್ರಸ್ತುತ ಬಂಟ್ವಾಳದ ಮೆಲ್ಕಾರ್‌ನಲ್ಲಿ ವಾಸವಿರುವ ಇಂಜಿನಿಯರ್ ಮಧುಸೂದನ್ ಅಂಬೆಕಲ್ಲು ಹಾಗೂ ಶಿಕ್ಷಕಿ ತೇಜಸ್ವಿ ಅಂಬೆಕಲ್ಲು ಅವರ ಪುತ್ರ ಈತ. ಅನ್ವೇಶ್ ಅಂಬೆಕಲ್ಲು ಸ್ವರೂಪ ಅಧ್ಯಯನ ಕೇಂದ್ರದಲ್ಲಿ 9ನೇ ತರಗತಿಯ ವಿಷಯದ ಜೊತೆ ಜೊತೆಗೆ, 10ನೇ ತರಗತಿಯ ವಿಷಯವನ್ನು ಒಂದೇ ತಿಂಗಳಲ್ಲಿ ಮುಗಿಸಿಕೊಂಡು ಇನ್ನೂ ಹಲವು ವಿಷಯಗಳಲ್ಲಿ 10 ವಿಶ್ವದಾಖಲೆಯ ಸಾಧನೆಗಳನ್ನು ಮಾಡುವ ಸಿದ್ಧತೆಯಲ್ಲಿದ್ದಾನೆ.

ಈ ಬಗ್ಗೆ ಮಾತನಾಡಿದ ಅಧ್ಯಯನ ಕೇಂದ್ರದ ಗೋಪಾಡ್ಕರ್, "ಅನ್ವೇಶ್​ ನೆನಪಿನ ಅಧ್ಯಯನದಲ್ಲಿ ಪ್ರಥಮ ಸ್ಥಾನದಲ್ಲಿದ್ದಾನೆ. ಅವನ ಸಾಮರ್ಥ್ಯ ವಿಶೇಷವಾಗಿದೆ. ನೆನಪಿನ ಹತ್ತು ತಂತ್ರಗಳನ್ನು ಅಭ್ಯಾಸ ಮಾಡುತ್ತಾ ಇದೀಗ 16 ಮಂದಿ ಹೇಳುವ ವಿಷಯಗಳನ್ನು ಪೂರ್ಣವಾಗಿ ನೆನಪಿನಲ್ಲಿಟ್ಟುಕೊಂಡು ದಾಖಲೆ ಮಾಡಿದ್ದು, ವಿಶೇಷ ಸಾಧನೆಯಾಗಿದೆ" ಎಂದರು.

ಅನ್ವೇಶ್​ ತಾಯಿ ತೇಜಸ್ವಿ ಅಂಬೆಕಲ್ಲು ಮಾತನಾಡಿ, "ಅನ್ವೇಶ್​ಗೆ ಬಾಲ್ಯದಿಂದಲೂ ಸಂಗೀತದಲ್ಲಿ ಆಸಕ್ತಿ ಇತ್ತು. ಸ್ವರೂಪ ಅಧ್ಯಯನ ಕೇಂದ್ರಕ್ಕೆ ಬಂದ ಬಳಿಕ ಅವನಲ್ಲಿ ತುಂಬಾ ಬದಲಾವಣೆಯಾಗಿದೆ. ಮೆಮೊರಿ ತಂತ್ರ, ಬೀಟ್ ಬಾಕ್ಸ್ ಮೂಲಕ ಸಾಧನೆ ಮಾಡುತ್ತಿದ್ದಾನೆ. ಅವನ ಈ ದಾಖಲೆ ಸ್ವರೂಪ ಅಧ್ಯಯನ ಕೇಂದ್ರದಿಂದ ಸಾಧ್ಯವಾಗಿದೆ" ಎಂದು ಹೇಳಿದರು.

ಅನ್ವೇಶ್​ ಪ್ರತಿಕ್ರಿಯಿಸಿ, "ಸ್ವರೂಪ ಅಧ್ಯಯನ ಕೇಂದ್ರಕ್ಕೆ ಕಳುಹಿಸಿದ ಅಪ್ಪ, ಅಮ್ಮನಿಗೆ ಧನ್ಯವಾದ ಹೇಳುತ್ತೇನೆ. ಷೋಡಶಾವಧಾನ ಮಾಡುವ ಮೊದಲು ಅಷ್ಟವಧಾನ, ದಶವಧಾನ, ತ್ರಯದಶಾವಧಾನ ಮಾಡಿ ಪ್ರದರ್ಶನ ನೀಡಿದೆ. ಸ್ವರೂಪ ಅಧ್ಯಯನ ಕೇಂದ್ರದಲ್ಲಿ ಇದು ಸಾಧ್ಯವಾಗಿದೆ" ಎಂದು ತಿಳಿಸಿದರು.

ಇದನ್ನೂ ಓದಿ: 750 ಕೆ.ಜಿ ಮಂಜುಗಡ್ಡೆ ಮೇಲೆ 42 ನಿಮಿಷಗಳ ಕಾಲ ಕುಳಿತು 52 ಯೋಗಾಸನ ಪ್ರದರ್ಶನ! - International Yoga Day

Last Updated : Jun 28, 2024, 8:13 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.