ETV Bharat / state

ಹುಬ್ಬಳ್ಳಿ: ತಂದೆ ಕೊಲೆ ಮಾಡಿ ಪರಾರಿಯಾಗಿದ್ದ ಮಗ - ಸೊಸೆ ಬಂಧನ - SON KILLED HIS FATHER

ಆಸ್ತಿ ವಿಚಾರಕ್ಕೆ ತಂದೆಯನ್ನ ಕೊಲೆ ಮಾಡಿ ಪರಾರಿಯಾಗಿದ್ದ ಮಗ ಹಾಗೂ ಸೊಸೆಯನ್ನ ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

Accused
ಆರೋಪಿಗಳು (ETV Bharat)
author img

By ETV Bharat Karnataka Team

Published : Nov 30, 2024, 6:27 PM IST

ಹುಬ್ಬಳ್ಳಿ : ಹೆತ್ತ ತಂದೆಯನ್ನ ಕೊಲೆ ಮಾಡಿ ಪರಾರಿಯಾಗಿದ್ದ ಮಗ - ಸೊಸೆಯನ್ನ ಬಂಧಿಸುವಲ್ಲಿ ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಕಳೆದ 19 ರಂದು ಆಸ್ತಿ ವಿಚಾರಕ್ಕೆ ತಂದೆ ನಾಗರಾಜ್ ಹಾಗೂ ಮಗ ಅಣ್ಣಪ್ಪ ನಡುವೆ ಜಗಳ ನಡೆದಿತ್ತು. ಜಗಳ ವಿಕೋಪಕ್ಕೆ ತಿರುಗಿ ಮಗ ಅಣ್ಣಪ್ಪ ಮೈಸೂರು, ಸೊಸೆ ಲಕ್ಷ್ಮಿ ವೃದ್ಧ ನಾಗರಾಜ್ ಅವರಿಗೆ ಮನಬಂದಂತೆ ಥಳಿಸಿದ್ದರು. ಕಾಲಿನಿಂದ ಒದ್ದು ಹಲ್ಲೆ ಮಾಡಿದ್ದರು. ಬಳಿಕ ಮಗ -ಸೊಸೆ ಮನೆ ಬಿಟ್ಟು ಪರಾರಿಯಾಗಿದ್ದರು.

ತೀವ್ರವಾಗಿ ಗಾಯಗೊಂಡ ನಾಗರಾಜ್ ಅವರಿಗೆ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಚಿಕಿತ್ಸೆ ಫಲಿಸದೇ ನಾಗರಾಜ್ ಮೃತಪಟ್ಟಿದ್ದರು. ಈ ಕುರಿತಂತೆ ಹಳೇ ಹುಬ್ಬಳ್ಳಿ ‌ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ಪೊಲೀಸರು ‌ಕೊನೆಗೂ ಆರೋಪಿ ಅಣ್ಣಪ್ಪ ಮೈಸೂರು, ಸೊಸೆ ಲಕ್ಷ್ಮಿಯನ್ನ ಬಂಧಿಸಿ‌ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಇದನ್ನೂ ಓದಿ : ಹುಬ್ಬಳ್ಳಿ: ಬುದ್ಧಿವಾದ ಹೇಳಿದ್ದಕ್ಕೆ ಮಗನಿಂದ ಹಲ್ಲೆ, ಚಿಕಿತ್ಸೆ ಫಲಿಸದೇ ಪ್ರಾಣಬಿಟ್ಟ ತಂದೆ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.