ETV Bharat / state

ಪತ್ನಿ ಕೊಲೆಗೈದು, ಧರ್ಮ ಬದಲಿಸಿಕೊಂಡ ಆರೋಪಿ 31 ವರ್ಷಗಳ ಬಳಿಕ ಸೆರೆ

31 ವರ್ಷಗಳ ಹಿಂದೆ ತನ್ನ ಪತ್ನಿಯನ್ನು ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿ ಕೊನೆಗೂ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

Absconding accused arrested  Wife murder case  ಆರೋಪಿಯ ಬಂಧನ  ಕೊಲೆಮಾಡಿದ್ದ ಪ್ರಕರಣದಲ್ಲಿ ಜಾಮೀನು  ಪತ್ನಿ ಕೊಲೆ ಪ್ರಕರಣ
31 ವರ್ಷಗಳ ಬಳಿಕ ಸೆರೆಯಾದ ಹಂತಕ
author img

By ETV Bharat Karnataka Team

Published : Feb 16, 2024, 8:06 PM IST

Updated : Feb 16, 2024, 8:44 PM IST

ಬೆಂಗಳೂರು: ಪತ್ನಿಯನ್ನು ಕೊಲೆ ಮಾಡಿದ್ದ ಪ್ರಕರಣದಲ್ಲಿ ಜಾಮೀನು ಪಡೆದು ಪೊಲೀಸರಿಂದ ತಪ್ಪಿಸಿಕೊಳ್ಳಲು ಧರ್ಮ ಬದಲಿಸಿಕೊಂಡು ತಲೆಮರೆಸಿಕೊಂಡಿದ್ದ ಆರೋಪಿಯನ್ನು ಹೆಬ್ಬಾಳ ಠಾಣಾ ಪೊಲೀಸರು ಬಂಧಿಸಿದ್ದಾರೆ. ಸುಬ್ರಮಣಿ ಬಂಧಿತ ಆರೋಪಿ. 31 ವರ್ಷಗಳ ನಂತರ ಚಿಕ್ಕಮಗಳೂರಿನಲ್ಲಿ ಈತನನ್ನು ಸೆರೆಹಿಡಿಯಲಾಗಿದೆ.

ಹೆಬ್ಬಾಳದ ನಿವಾಸಿಯಾಗಿದ್ದ ಸುಬ್ರಮಣಿ 1993ರಲ್ಲಿ ಪತ್ನಿ ಸುಧಾಳಿಗೆ ಅಕ್ರಮ ಸಂಬಂಧವಿದೆ ಎಂದು ಶಂಕಿಸಿ ಬೆಂಕಿ ಹಚ್ಚಿ ಕೊಲೆ ಮಾಡಿದ್ದ. ಪ್ರಕರಣ ಸಂಬಂಧ ಆರೋಪಿಯನ್ನು ಬಂಧಿಸಲಾಗಿತ್ತು. ಬಳಿಕ ನ್ಯಾಯಾಲಯದಲ್ಲಿ ಜಾಮೀನು ಪಡೆದು ಕೇರಳಕ್ಕೆ ಪರಾರಿಯಾಗಿ ತಲೆಮರೆಸಿಕೊಂಡಿದ್ದ.

ಪೊಲೀಸರು ಜಾಮೀನುರಹಿತ ವಾರೆಂಟ್ ಹೊರಡಿಸಿದ್ದರು. ಕೇರಳಕ್ಕೆ ತೆರಳಿದ್ದ ಆರೋಪಿ ನಂತರ ತನ್ನ ಹೆಸರನ್ನು ಹುಸೇನ್ ಸಿಕಂದರ್ ಬಾಷಾ ಎಂದು ಬದಲಾಯಿಸಿಕೊಂಡು ಕೆಲ ವರ್ಷಗಳ ಕಾಲ ಅಲ್ಲಿಯೇ ವಾಸಿಸಿದ್ದ. ನಂತರ ಚಿಕ್ಕಮಗಳೂರಿನ ಮಸೀದಿಯೊಂದರಲ್ಲಿ ಆಶ್ರಯ ಪಡೆದಿದ್ದ ಎಂಬುದನ್ನು ತಿಳಿದ ಪೊಲೀಸರು ಕಾರ್ಯಾಚರಣೆ ಕೈಗೊಂಡು ಬಂಧಿಸಿದ್ದಾರೆ.

ಇದನ್ನೂ ಓದಿ: ಪ್ರಿಯಕರನ ಜೊತೆಗೂಡಿ ಗಂಡನ ಕೊಲೆ; ಮನೆಯಲ್ಲೇ ಶವ ಹೂತು ಹಾಕಿದ ಮಹಿಳೆ

ಅಪಘಾತದಲ್ಲಿ ಆಟೋ ಚಾಲಕನ ಸಾವು, ಆರೋಪಿ ಸೆರೆ: ಅತೀ ವೇಗ ಹಾಗೂ ಅಜಾಗರೂಕತೆಯಿಂದ ದ್ವಿಚಕ್ರ ವಾಹನ ಚಲಾಯಿಸಿ ಸಂಭವಿಸಿದ ಅಪಘಾತದಲ್ಲಿ ಆಟೋ ಚಾಲಕನ ಸಾವಿಗೆ ಕಾರಣವಾಗಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಸವನಗುಡಿ ಸಂಚಾರ ಠಾಣಾ ಪೊಲೀಸರು ಬಂಧಿಸಿದ್ದಾರೆ. ವೇಣು (25) ಬಂಧಿತ ಆರೋಪಿ.

Absconding accused arrested  Wife murder case  ಆರೋಪಿಯ ಬಂಧನ  ಕೊಲೆಮಾಡಿದ್ದ ಪ್ರಕರಣದಲ್ಲಿ ಜಾಮೀನು  ಪತ್ನಿ ಕೊಲೆ ಪ್ರಕರಣ
ಆರೋಪಿ ಬಂಧನ

ಫೆಬ್ರವರಿ 12ರಂದು ರಾತ್ರಿ 2:45ರ ಸುಮಾರಿಗೆ ಹನುಮಂತನಗರ 1ನೇ ಮುಖ್ಯರಸ್ತೆಯ ಗವಿಪುರಂ ಎಕ್ಸ್‌ಟೆನ್ಶನ್ ಬಳಿ ಸಂಭವಿಸಿದ ಅಪಘಾತದಲ್ಲಿ ಆಟೋ ರಿಕ್ಷಾ ಮೈಮೇಲೆ ಬಿದ್ದು ಚಾಲಕ ರಮೇಶ್ (48) ಮೃತಪಟ್ಟಿದ್ದರು. ದ್ವಿಚಕ್ರ ವಾಹನದಲ್ಲಿ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದಿದ್ದ ಆರೋಪಿ ಆಟೋರಿಕ್ಷಾಕ್ಕೆ ಡಿಕ್ಕಿಯಾಗಿದ್ದ. ಪರಿಣಾಮ ಚಾಲಕ ರಮೇಶ್​ನ ಮೇಲೆ ಆಟೋರಿಕ್ಷಾ ಬಿದ್ದ ಪರಿಣಾಮ ಆತ ಸಾವನ್ನಪ್ಪಿದ್ದ. ದುರಂತವೆಂದರೆ ಅಪಘಾತದ ಬಳಿಕ ಗಾಯಾಳುವಿಗೆ ನೆರವಾಗುವ ಕನಿಷ್ಠ ಸೌಜನ್ಯ ಸಹ ತೋರದ ಆರೋಪಿ ಸ್ಥಳದಿಂದ ಪರಾರಿಯಾಗಿದ್ದ. ಈ ಬಗ್ಗೆ ಬಸವನಗುಡಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಡಿಸಿಪಿ ಪ್ರತಿಕ್ರಿಯೆ

ಅಪಘಾತವೆಸಗಿ ತಲೆಮರೆಸಿಕೊಂಡಿದ್ದ ದ್ವಿಚಕ್ರ ವಾಹನದ ರಿಜಿಸ್ಟ್ರೇಷನ್ ನಂಬರ್ ಬಗ್ಗೆಯಾಗಲೀ ಅಥವಾ ಅಪಘಾತ ಮಾಡಿದ ದ್ವಿಚಕ್ರ ವಾಹನ ಚಾಲಕನ ಬಗ್ಗೆಯಾಗಲೀ ಯಾವುದೇ ಮಾಹಿತಿ ಲಭ್ಯವಿರಲಿಲ್ಲ. ಬಳಿಕ ಸಿಸಿ ಕ್ಯಾಮರಾದ ದೃಶ್ಯಗಳಲ್ಲಿ ದ್ವಿಚಕ್ರ ವಾಹನದ ಚಾಲಕ ಧರಿಸಿದ್ದ ಹಳದಿ ಬಣ್ಣದ ಟೀಶರ್ಟ್ ಗಮನಿಸಿದ್ದ ಪೊಲೀಸರು ಸುಮಾರು 70 ಸಿ.ಸಿ ಕ್ಯಾಮೆರಾಗಳನ್ನು ಪರಿಶೀಲಿಸಿ ಕೊನೆಗೆ ಆರೋಪಿಯನ್ನ ಪತ್ತೆಹಚ್ಚಿ ಬಂಧಿಸಿದ್ದಾರೆ.

ಡಿಸಿಪಿ ಪ್ರತಿಕ್ರಿಯೆ: ಈ ಬಗ್ಗೆ ಮಾಹಿತಿ ನೀಡಿದ ಬೆಂಗಳೂರು ದಕ್ಷಿಣ ಸಂಚಾರ ವಿಭಾಗದ ಡಿಸಿಪಿ ಶಿವಪ್ರಕಾಶ್ ದೇವರಾಜ್, ''ಬೆಳಗಿನಜಾವ 2.45ರ ವೇಳೆ ಹನುಮಂತನಗರ 1ನೇ ಮುಖ್ಯರಸ್ತೆಯಲ್ಲಿ ಭೀಕರ ಅಪಘಾತ ಸಂಭವಿಸಿತ್ತು. ಇದರಲ್ಲಿ, ಆಟೋ ಚಾಲಕ ರಮೇಶ್​ (48) ಎಂಬುವರು ಸ್ಥಳದಲ್ಲೇ ಮೃತಪಟ್ಟಿದ್ದರು. ಈ ಬಗ್ಗೆ ಬಸವನಗುಡಿ ಪೊಲೀಸ್​ ಠಾಣೆಯಲ್ಲಿ ಹಿಟ್​ ಆ್ಯಂಡ್​ ರನ್​ ಪ್ರಕರಣ ದಾಖಲಾಗಿತ್ತು. ಆದರೆ, ಆರೋಪಿಯು ಹಳದಿ ಬಣ್ಣದ ಟೀಶರ್ಟ್​ ಧರಿಸಿರುವುದು ಬಿಟ್ಟರೆ ಬೇರಾವ ಮಾಹಿತಿ ಸಿಕ್ಕಿರಲಿಲ್ಲ. ಬಳಿಕ 70ರಿಂದ 80 ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ಅರೋಪಿಯನ್ನು ಪತ್ತೆ ಮಾಡಿ ಬಂಧಿಸಲಾಗಿದೆ. ವೇಣು (25) ಎಂಬಾತನೇ ಬಂಧಿತ ಆರೋಪಿಯಾಗಿದ್ದು, ಆತನ ಬೈಕ್​ ವಶಕ್ಕೆ ಪಡೆಯಲಾಗಿದೆ. ಎರಡೇ ದಿನಗಳಲ್ಲಿ ಆತನನ್ನು ಬಂಧಿಸಲಾಗಿದೆ'' ಎಂದು ತಿಳಿಸಿದರು.

Last Updated : Feb 16, 2024, 8:44 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.