ಧಾರವಾಡ : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ನಟ ದರ್ಶನ್ ಆ್ಯಂಡ್ ಗ್ಯಾಂಗ್ನ A9 ಆರೋಪಿ ಧನರಾಜ್ನನ್ನು ಧಾರವಾಡ ಕೇಂದ್ರ ಕಾರಾಗೃಹಕ್ಕೆ ಶಿಫ್ಟ್ ಮಾಡುವ ಸಾಧ್ಯತೆಯಿದೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್ ಮತ್ತು ಸಹಚರರಿಗೆ ವಿಶೇಷ ಆತಿಥ್ಯ ನೀಡಿರುವ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಈ ಹಿನ್ನೆಲೆ ಆರೋಪಿಗಳನ್ನ ಬೇರೆ ಜೈಲುಗಳಿಗೆ ಸ್ಥಳಾಂತರಿಸುವಂತೆ ಬೆಂಗಳೂರಿನ ನ್ಯಾಯಾಲಯ ಆದೇಶಿಸಿದೆ. ಹೀಗಾಗಿ ಧಾರವಾಡ ಕೇಂದ್ರ ಕಾರಾಗೃಹ ಅಧಿಕಾರಿಗಳು ಅಲರ್ಟ್ ಆಗಿದ್ದಾರೆ. ಸಿಸಿಟಿವಿ ಸೇರಿದಂತೆ ಎಲ್ಲಾ ಭದ್ರತೆಯನ್ನು ಜೈಲು ಅಧಿಕಾರಿಗಳು ಹೆಚ್ಚಿಸಿದ್ದಾರೆ. 9 ಬ್ಯಾರಕ್ಗಳನ್ನು ಧಾರವಾಡ ಕಾರಾಗೃಹ ಹೊಂದಿದೆ. ಜೈಲಿನಲ್ಲಿ ಸುಮಾರು 613 ಕೈದಿಗಳಿದ್ದಾರೆ. ಇಂದು ರಾತ್ರಿ ವೇಳೆಗೆ A9 ಆರೋಪಿ ಧನರಾಜ್ ಶಿಫ್ಟ್ ಆಗುವ ಸಾಧ್ಯತೆಯಿದೆ.
ಈ ಕುರಿತು ಜೈಲು ಅಧೀಕ್ಷಕ ಮಹಾದೇವ ನಾಯಕ ಮಾತನಾಡಿದ್ದು, 'ಇದುವರೆಗೆ ಅಧಿಕೃತ ಮಾಹಿತಿ ಬಂದಿಲ್ಲ. ನಾವು ಎಲ್ಲ ರೀತಿಯ ತಯಾರಿ ಮಾಡಿಕೊಂಡಿದ್ದೇವೆ. ಇದೊಂದು ಸಾಮಾನ್ಯ ಪ್ರಕ್ರಿಯೆ. ಬೇರೆ ಕೈದಿಗಳ ವರ್ಗಾವಣೆಯಂತೆಯೇ ನಡೆಯುತ್ತದೆ. ಸ್ಪೆಷಲ್ ಸೆಲ್ ಅಂತಾ ಇಲ್ಲ. ಇರೋ ವ್ಯವಸ್ಥೆಯಲ್ಲಿಯೇ ಇಡುತ್ತೇವೆ. ನಮ್ಮಲ್ಲಿಯೇ ವೈದ್ಯಕೀಯ ತಪಾಸಣೆ ಆಗುತ್ತದೆ. ಬಂದ ತಕ್ಷಣ ವೈದ್ಯಕೀಯ ತಪಾಸಣೆ ಮಾಡುತ್ತೇವೆ. ಜೈಲ್ ಒಳಗಡೆಯೇ ಕಾರಾಗೃಹದ ವೈದ್ಯಾಧಿಕಾರಿ ಇದ್ದಾರೆ. ಅವರೇ ತಪಾಸಣೆ ಮಾಡುತ್ತಾರೆ. ತಪಾಸಣೆ ಮಾಡಿದ ಬಳಿಕ ಸೆಲ್‌ಗೆ ಕಳುಹಿಸಲಾಗುವುದು. 13 ಭದ್ರತಾ ಸೆಲ್ ಇದ್ದು, ಆ ಪೈಕಿ ಒಂದರಲ್ಲಿ ಇಡಲಾಗುವುದು. ಧಾರವಾಡ ಕೇಂದ್ರ ಕಾರಾಗೃಹ 678 ಕೈದಿಗಳ ಸಾಮರ್ಥ್ಯ ಹೊಂದಿದೆ. ಪ್ರಸ್ತುತ 613 ಕೈದಿಗಳಿದ್ದಾರೆ' ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ : ದರ್ಶನ್, ಸಹಚರರ ನ್ಯಾಯಾಂಗ ಬಂಧನ ಇಂದು ಅಂತ್ಯ - Darshan Judicial Custody