ETV Bharat / state

ಬೆಂಗಳೂರಿನಲ್ಲಿ ಡೆಂಗ್ಯೂಗೆ ಮತ್ತೊಂದು ಬಲಿ; ಮೃತರ ಸಂಖ್ಯೆ 3ಕ್ಕೇರಿಕೆ - Young Man Succumbed To Dengue - YOUNG MAN SUCCUMBED TO DENGUE

ಮಳೆಗಾಲ ಆರಂಭವಾಗುತ್ತಿದ್ದಂತೆ ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಏರುತ್ತಿದೆ. ಸೋಮವಾರ ರಾಜಧಾನಿ ಬೆಂಗಳೂರಿನಲ್ಲಿ 27 ವರ್ಷದ ಯುವಕ ಸಾವಿಗೀಡಾಗಿದ್ದಾನೆ. ಇದರೊಂದಿಗೆ ಸಾವಿನ ಸಂಖ್ಯೆ 3ಕ್ಕೆ ಏರಿಕೆಯಾಗಿದೆ.

ಡೆಂಗ್ಯೂ
ಸಾಂದರ್ಭಿಕ ಚಿತ್ರ (ETV Bharat)
author img

By ETV Bharat Karnataka Team

Published : Jul 2, 2024, 6:45 AM IST

ಬೆಂಗಳೂರು: ನಗರದಲ್ಲಿ ಡೆಂಗ್ಯೂಗೆ ಮತ್ತೊಬ್ಬ ವ್ಯಕ್ತಿ ಮೃತಪಟ್ಟಿದ್ದಾರೆ. ಕಗ್ಗದಾಸಪುರದ ಯುವಕ ಸೋಂಕಿಗೆ ತುತ್ತಾಗಿ ಪ್ರಾಣ ಕಳೆದುಕೊಂಡಿದ್ದಾನೆ ಎಂದು ಬಿಬಿಎಂಪಿ ಮಾಹಿತಿ ನೀಡಿದೆ.

ಇನ್ನು, ಶುಕ್ರವಾರ ಮೃತಪಟ್ಟ 80 ವರ್ಷದ ವೃದ್ದೆಯ ಸಾವಿಗೆ ಡೆಂಗ್ಯೂ ಅಲ್ಲ ಕ್ಯಾನ್ಸರ್ ಕಾರಣ ಎಂದು ಬಿಬಿಎಂಪಿ ಹೆಲ್ತ್ ಆಡಿಟ್ ಸರ್ಕಾರಕ್ಕೆ ಸಲ್ಲಿಸಿದ ವರದಿಯಲ್ಲಿ ತಿಳಿಸಿದೆ. ಈಗ ಹೊಸದಾಗಿ 213 ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿದ್ದು, ಜೂನ್‌ನಲ್ಲಿ 1,742 ಜನರಲ್ಲಿ ಸೋಂಕು ದೃಢಪಟ್ಟಿದೆ.

ಜೂ.27ರಂದು ಬೆಂಗಳೂರಿನಲ್ಲಿ ಡೆಂಗ್ಯೂನಿಂದ ತಮಿಳುನಾಡಿನ ವೃದ್ಧೆ ಸೇರಿ ಇಬ್ಬರು ಸಾವನ್ನಪ್ಪಿದ್ದರು. ಈ ಎರಡೂ ಪ್ರಕರಣಗಳು ಬಿಬಿಎಂಪಿ ಪೂರ್ವ ವಲಯದಲ್ಲಿ ದಾಖಲಾಗಿವೆ. ಜ್ವರದಿಂದ ಬಳಲುತ್ತಿದ್ದ ಸಿ.ವಿ.ರಾಮನ್ ನಗರದ ನಿವಾಸಿ, 27 ವರ್ಷದ ಅಭಿಲಾಷ್​​ ಜೂ.25ರಂದು ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ವೈದ್ಯಕೀಯ ಪರೀಕ್ಷೆಯಲ್ಲಿ ಡೆಂಗ್ಯೂ ದೃಢಪಟ್ಟಿತ್ತು. ಚಿಕಿತ್ಸೆ ಫಲಿಸದೇ ಜೂ.27ರಂದು ಮೃತಪಟ್ಟಿದ್ದರು. ಮತ್ತೊಂದು ಪ್ರಕರಣದಲ್ಲಿ 80 ವರ್ಷದ ವೃದ್ಧೆ ನೀರಜಾದೇವಿಮೃತಪಟ್ಟಿದ್ದಾರೆ.

ಪ್ರಸಕ್ತ ವರ್ಷದಲ್ಲಿ ಡೆಂಗ್ಯೂ ಸಂಬಂಧಿತ ಇಬ್ಬರ ಸಾವು ಪ್ರಕರಣಗಳು ದಾಖಲಾಗಿವೆ. ಕಳೆದ ವರ್ಷ 9 ಜನ ಸಾವನ್ನಪ್ಪಿದ್ದರು ಎಂದು ಬಿಬಿಎಂಪಿ ಆರೋಗ್ಯ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ರಾಜ್ಯದಲ್ಲಿ ಏರುಗತಿಯಲ್ಲಿ ಡೆಂಘೀ ಪ್ರಕರಣಗಳು: ಪ್ಲೇಟ್ಲೆಟ್ಸ್​​​​ಗೆ ಹೆಚ್ಚಾದ ಡಿಮ್ಯಾಂಡ್ - increased demand for platelets

ETV Bharat Logo

Copyright © 2024 Ushodaya Enterprises Pvt. Ltd., All Rights Reserved.