ETV Bharat / state

ಗ್ಯಾಸ್‌ ಗೀಸರ್ ವಿಷಾನಿಲ ಸೋರಿಕೆ ; ಬಾತ್‌ರೂಂಗೆ ಸ್ನಾನ ಮಾಡಲೆಂದು ತೆರಳಿದ್ದ ಯುವಕ ಸಾವು - young man died after gas leak - YOUNG MAN DIED AFTER GAS LEAK

ಮೂಡಬಿದಿರೆಯ ಕೋಟೆಬಾಗಿಲಿನ ಫ್ಲಾಟ್​​ವೊಂದರಲ್ಲಿ ಸ್ನಾನಕ್ಕೆ ತೆರಳಿದ್ದ ಯುವಕ ಗ್ಯಾಸ್ ಗೀಸರ್​ನಿಂದ ವಿಷಾನಿಲ ಸೋರಿಕೆಯಾದ ಪರಿಣಾಮ ಉಸಿರುಗಟ್ಟಿ ಮೃತಪಟ್ಟ ಘಟನೆ ನಡೆದಿದೆ.

Sharik
ಶಾರಿಕ್ (ETV Bharat)
author img

By ETV Bharat Karnataka Team

Published : Jul 29, 2024, 7:22 PM IST

ಮಂಗಳೂರು (ದಕ್ಷಿಣ ಕನ್ನಡ) : ಸ್ನಾನ ಮಾಡಲೆಂದು ಬಾತ್‌ರೂಮ್‌ಗೆ ತೆರಳಿದ್ದ ಯುವಕನೊಬ್ಬ ಗ್ಯಾಸ್ ಗೀಸರ್​ನಿಂದ ವಿಷಾನಿಲ ಸೋರಿಕೆಯಾದ ಪರಿಣಾಮ ಉಸಿರುಗಟ್ಟಿ ಮೃತಪಟ್ಟ ಘಟನೆ ಭಾನುವಾರ ರಾತ್ರಿ ಮೂಡಬಿದಿರೆಯ ಕೋಟೆಬಾಗಿಲಿನಲ್ಲಿ ನಡೆದಿದೆ.

ಕೋಟೆಬಾಗಿಲಿನ ಫ್ಲಾಟ್​ವೊಂದರ ನಿವಾಸಿ ಶಾರಿಕ್ (18) ಮೃತಪಟ್ಟ ಯುವಕ. ಶಾರಿಕ್ ನಿನ್ನೆ ರಾತ್ರಿ ಸ್ನಾನ ಮಾಡಲೆಂದು ಬಾತ್‌ರೂಮ್‌ಗೆ ತೆರಳಿದ್ದರು. ಬಹಳ ಸಮಯವಾದರೂ ಶಾರಿಕ್ ಹೊರಬಾರದ ಹಿನ್ನೆಲೆ ಮನೆಯವರು ಕರೆದಿದ್ದಾರೆ. ಆದರೆ ಯಾವುದೇ ಪ್ರತಿಕ್ರಿಯೆ ಬಾರದ ಕಾರಣ ಬಾತ್‌ರೂಮ್ ಬಾಗಿಲು ಒಡೆದು ನೋಡಿದಾಗ ಶಾರಿಕ್ ವಿಷಾನಿಲ ಸೋರಿಕೆಯಿಂದ ಉಸಿರುಗಟ್ಟಿ ಮೃತಪಟ್ಟಿರುವುದು ಕಂಡುಬಂದಿದೆ.

ಸಂಪೂರ್ಣ ಮುಚ್ಚಿದ್ದ ಬಾತ್‌ರೂಮ್‌ನಲ್ಲಿ ಗ್ಯಾಸ್‌ ಗೀಸರ್ ವಿಷಾನಿಲ ಹೊರಗಡೆ ಹೋಗದೆ, ಅದನ್ನು ಸೇವಿಸಿದ್ದರಿಂದ ಶಾರಿಕ್ ಉಸಿರುಗಟ್ಟಿ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಶಾರಿಕ್ ದ್ವಿತೀಯ ಪಿಯುಸಿ ಮುಗಿಸಿದ್ದು, ಮೂಡುಬಿದಿರೆಯ ಕಾಲೇಜ್​ವೊಂದರಲ್ಲಿ ಪ್ರಥಮ ವರ್ಷದ ಪದವಿಗೆ ಪ್ರವೇಶಾತಿ ಪಡೆದಿದ್ದರು ಎಂದು ತಿಳಿದುಬಂದಿದೆ. ಈ ಘಟನೆಯ ಬಗ್ಗೆ ಮೂಡಬಿದಿರೆ ಪೊಲೀಸ್​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ರಾಮನಗರದ ಮನೆಯೊಂದರಲ್ಲಿ ಗೀಸರ್​ನ ವಿಷಾನಿಲ ಸೋರಿಕೆ: ತಾಯಿ - ಮಗ ಸಾವು - Gas leak from geyser

ETV Bharat Logo

Copyright © 2025 Ushodaya Enterprises Pvt. Ltd., All Rights Reserved.