ETV Bharat / state

ಚಿಕ್ಕಬಳ್ಳಾಪುರ: ಗಣೇಶ ನಿಮಜ್ಜನ ವೇಳೆ ಡ್ಯಾನ್ಸ್​ ಮಾಡಬೇಡ ಎಂದಿದ್ದಕ್ಕೆ ಯುವಕ ಆತ್ಮಹತ್ಯೆ - young man suicide - YOUNG MAN SUICIDE

ಯುವಕನೋರ್ವ ಗಣೇಶ ನಿಮಜ್ಜನ ಮಾಡುವ ವೇಳೆ ಈ ರೀತಿಯಾಗಿ ಡ್ಯಾನ್ಸ್ ಮಾಡಬೇಡ ಎಂದು ತನ್ನ ಅಣ್ಣ ಬುದ್ಧಿವಾದ ಹೇಳಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

YOUNG MAN SUICIDE
ಯುವಕ ಆತ್ಮಹತ್ಯೆ (ETV Bharat)
author img

By ETV Bharat Karnataka Team

Published : Sep 11, 2024, 1:47 PM IST

ಚಿಕ್ಕಬಳ್ಳಾಪುರ: ಗಣೇಶ ನಿಮಜ್ಜನ ವೇಳೆ ಡ್ಯಾನ್ಸ್​ ಮಾಡಬೇಡ ಎಂದು ಹೇಳಿದ್ದಕ್ಕೆ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಚಿಕ್ಕಪೈಲಗುರ್ಕಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಗಿರೀಶ್ (22) ಆತ್ಮಹತ್ಯೆ ಮಾಡಿಕೊಂಡ ಯುವಕ.

ಮಂಜುನಾಥ ಹಾಗೂ ಲಕ್ಷ್ಮಿನರಸಮ್ಮ ದಂಪತಿಗಳ ಇಬ್ಬರು ಮಕ್ಕಳಲ್ಲಿ ಒಬ್ಬರಾದ ಗಿರೀಶ್ ರಾತ್ರಿ ಗ್ರಾಮದಲ್ಲಿ ಗಣೇಶ ಮೂರ್ತಿ ನಿಮಜ್ಜನ ವೇಳೆ ಡ್ಯಾನ್ಸ್ ಮಾಡಿದ್ದನು. ಇದನ್ನು ಗಮನಿಸಿದ ಅಣ್ಣ ಈ ರೀತಿಯಾಗಿ ಡ್ಯಾನ್ಸ್ ಮಾಡಬೇಡ ಎಂದು ಬುದ್ಧಿವಾದ ಹೇಳಿದ್ದರು. ಇಷ್ಟಕ್ಕೆ ಮನನೊಂದ ಗಿರೀಶ್ ಮನೆಯ ಸಮೀಪ 100 ಮೀಟರ್ ದೂರದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಇಂದು ಗ್ರಾಮದ ವ್ಯಕ್ತಿಯೊಬ್ಬರು ಮೂತ್ರ ವಿಸರ್ಜನೆಗೆ ಹೋಗಿದ್ದ ವೇಳೆ ಗಿರೀಶ್ ಆತ್ಮಹತ್ಯೆ ಮಾಡಿಕೊಂಡು ಮೃತ ಪಟ್ಟಿರುವುದಾಗಿ ತಿಳಿದು ಬಂದಿದೆ‌. ಘಟನೆಗೆ ಸಂಬಂಧಿಸಿದಂತೆ ಗ್ರಾಮಾಂತರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ: ಹುಬ್ಬಳ್ಳಿ: ಟೋಲ್ ಡಿವೈಡರ್​ಗೆ ಕಾರು ಡಿಕ್ಕಿ, 3 ತಿಂಗಳ ಮಗು ಸಾವು - Hubballi Road Accident

ETV Bharat Logo

Copyright © 2024 Ushodaya Enterprises Pvt. Ltd., All Rights Reserved.