ETV Bharat / state

ದಾವಣಗೆರೆ: ಬೀದಿನಾಯಿಗಳ ದಾಳಿಯಿಂದ ಮಹಿಳೆ ಸಾವು - Street Dogs Attack - STREET DOGS ATTACK

ಬೀದಿನಾಯಿಗಳ ಗುಂಪು ದಾಳಿ ನಡೆಸಿದ ಪರಿಣಾಮ ಮಹಿಳೆ ಮೃತಪಟ್ಟಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ.

street-dog
ಸಂಗ್ರಹ ಚಿತ್ರ (ETV Bharat)
author img

By ETV Bharat Karnataka Team

Published : Jun 7, 2024, 3:32 PM IST

ದಾವಣಗೆರೆ: ನಗರದಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗುತ್ತಿದ್ದು, ರತ್ನಮ್ಮ (51) ಎಂಬವರು ಮೃತಪಟ್ಟಿದ್ದಾರೆ. ಆಸ್ಪತ್ರೆಯಲ್ಲಿ ಅಟೆಂಡರ್ ಕೆಲಸ ಮಾಡುತ್ತಿದ್ದ ರತ್ನಮ್ಮರನ್ನು ಪುತ್ರ ದ್ವಿಚಕ್ರ ವಾಹನದಲ್ಲಿ ಕೂರಿಸಿಕೊಂಡು ಬರುತ್ತಿದ್ದರು. ಬಾಬು ಜಗಜೀವನ್ ರಾಮ್ ನಗರದ ಮಾರಮ್ಮ ದೇವಸ್ಥಾನದ ದರ್ಶನ ಪಡೆಯಲು ವಾಹನ ನಿಲ್ಲಿಸಿದ್ದರು. ದೇವರ ದರ್ಶನ ಪಡೆದು ದ್ವಿಚಕ್ರ ವಾಹನ ಹತ್ತಲು ತೆರಳುತ್ತಿದ್ದಾಗ ನಾಯಿಗಳು ದಾಳಿ ನಡೆಸಿವೆ. ನಾಯಿಗಳು ರತ್ನಮ್ಮನವರ ಸೀರೆ ಸೆರಗು ಕಚ್ಚಿ ಎಳೆದಾಡಿದ್ದು, ಕೆಳಗೆ ಬಿದ್ದಿದ್ದಾರೆ. ಹೀಗೆ ಬಿದ್ದ ರಭಸಕ್ಕೆ ತಲೆಗೆ ಪೆಟ್ಟಾಗಿದೆ. ನಂತರ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ರಾಯಚೂರು: ಬೀದಿ ನಾಯಿ ಕಡಿತಕ್ಕೆ ಒಳಗಾಗಿದ್ದ ಬಾಲಕಿ ಸಾವು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.