ETV Bharat / state

ಫುಟ್‌ಬೋರ್ಡ್​ನಲ್ಲಿ ನೇತಾಡುತ್ತಾ ಬಸ್ ಸಂಚಾರ, ಕೈಜಾರಿ ಬಿದ್ದ ವಿದ್ಯಾರ್ಥಿ - ವಿಡಿಯೋ ವೈರಲ್ - Student Falls From Bus - STUDENT FALLS FROM BUS

ಖಾಸಗಿ ಬಸ್ಸಿನ ಫುಟ್​ಬೋರ್ಡ್​ನಲ್ಲಿ ನೇತಾಡುತ್ತಿದ್ದ ವಿದ್ಯಾರ್ಥಿ ಕೈ ಜಾರಿ ಕೆಳಗೆ ಬಿದ್ದಿದ್ದಾನೆ. ಅದೃಷ್ಟವಶಾರ್ ಯಾವುದೇ ಗಾಯಗಳಾಗಿಲ್ಲ. ಈ ಕುರಿತು ಚಾಲಕ, ನಿರ್ವಾಹಕನ ವಿರುದ್ಧ ದೂರು ದಾಖಲಾಗಿದೆ.

ಫುಟ್‌ಬೋರ್ಡ್​ನಲ್ಲಿ ನೇತಾಡುತ್ತಾ ಬಸ್ ಸಂಚಾರ
ಫುಟ್‌ಬೋರ್ಡ್​ನಲ್ಲಿ ನೇತಾಡುತ್ತಾ ಬಸ್‌ನಲ್ಲಿ ಪ್ರಯಾಣ (ETV Bharat)
author img

By ETV Bharat Karnataka Team

Published : Sep 13, 2024, 1:11 PM IST

ಫುಟ್‌ಬೋರ್ಡ್​ನಲ್ಲಿ ನೇತಾಡುತ್ತಾ ಬಸ್‌ನಲ್ಲಿ ಪ್ರಯಾಣ (ETV Bharat)

ಮಂಗಳೂರು: ಫುಟ್‌ಬೋರ್ಡ್​ನಲ್ಲಿ ನೇತಾಡುತ್ತಾ ಸಂಚರಿಸುತ್ತಿದ್ದ ಬಸ್‌ನಿಂದ ಶಾಲಾ ವಿದ್ಯಾರ್ಥಿಯೋರ್ವ ಕೈಜಾರಿ ಬಿದ್ದ ಘಟನೆ ತೊಕ್ಕೊಟ್ಟು ಓವರ್ ಬ್ರಿಡ್ಜ್ ಬಳಿ ನಡೆದಿದೆ. ವಿದ್ಯಾರ್ಥಿ ಬಿದ್ದಿರುವ ವಿಡಿಯೋ ವೈರಲ್ ಆಗಿದೆ.

ತಲಪಾಡಿಯಿಂದ ಮಂಗಳೂರು ಕಡೆಗೆ ಸಂಚರಿಸುತ್ತಿದ್ದ ರೂಟ್ ನಂಬರ್ 42 ಸೈಂಟ್ ಆ್ಯಂಟನಿ ಬಸ್‌‌ನಲ್ಲಿ ಬುಧವಾರ ಬೆಳಗ್ಗೆ 8.25ಕ್ಕೆ ಈ ಘಟನೆ ನಡೆದಿದೆ. ಬಸ್​​ನಲ್ಲಿ ಭರ್ತಿ ಪ್ರಯಾಣಿಕರಿದ್ದರು. ಎರಡೂ ಫುಟ್‌ಬೋರ್ಡ್‌ನಲ್ಲೂ ಶಾಲಾ ವಿದ್ಯಾರ್ಥಿಗಳು ನೇತಾಡುತ್ತಾ ಸಂಚರಿಸುತ್ತಿದ್ದರು.‌

ಬಸ್ ತೊಕ್ಕೊಟ್ಟು ಓವರ್ ಬ್ರಿಡ್ಜ್ ಬಳಿ ತಲುಪಿದಾಗ ಚಾಲಕ ಬ್ರೇಕ್ ಹಾಕಿದ್ದು, ನೇತಾಡಿಕೊಂಡು ಬರುತ್ತಿದ್ದ ವಿದ್ಯಾರ್ಥಿ ಕೆಳಗೆ ಬಿದ್ದಿದ್ದಾನೆ. ಅದೃಷ್ಟವಶಾತ್ ವಿದ್ಯಾರ್ಥಿಗೆ ಯಾವುದೇ ಗಾಯಗಳಾಗಿಲ್ಲ. ಬಸ್ಸಿನ ಹಿಂಭಾಗದಿಂದ ಬರುತ್ತಿದ್ದ ವಾಹನದಲ್ಲಿದ್ದವರು ಇದರ ವಿಡಿಯೋ ಮಾಡಿದ್ದಾರೆ.

ಪುಟ್‌ಬೋರ್ಡ್‌ನಲ್ಲಿ ಜನರನ್ನು ನೇತಾಡಿಸಿಕೊಂಡು ನಿರ್ಲಕ್ಷ್ಯತನದಿಂದ ಬಸ್ ಚಲಾಯಿಸಿದ ಆರೋಪದ ಮೇಲೆ ಚಾಲಕ ಮುಹಮ್ಮದ್ ಫಯಾಝ್ ಮತ್ತು ನಿರ್ವಾಹಕ ಮನೀಶ್ ವಿರುದ್ಧ ಜಪ್ಪಿನಮೊಗರು ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಹೆಣ್ಣುಮಕ್ಕಳ ರಕ್ಷಣೆಗೆ 'ನಾರಿ ಶಕ್ತಿ': ದಾವಣಗೆರೆಯಲ್ಲಿ 48 ದಿನ ಕರಾಟೆ ತರಬೇತಿ - Nari Shakti

ETV Bharat Logo

Copyright © 2024 Ushodaya Enterprises Pvt. Ltd., All Rights Reserved.