ETV Bharat / state

ಕಿಲ್ಲರ್ ಹಣೆಪಟ್ಟಿ ಕಳಚಿಕೊಂಡ ಬಿಎಂಟಿಸಿ ಬಸ್: ಈ ವರ್ಷ ಬಿಎಂಟಿಸಿ ದುರಂತಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆ! - Reduction BMTC accidents

author img

By ETV Bharat Karnataka Team

Published : Jul 30, 2024, 5:55 PM IST

Updated : Jul 30, 2024, 7:25 PM IST

ಸಂಚಾರಿ ಠಾಣೆ ಪೊಲೀಸರು ಈ ವರ್ಷ ಬಿಎಂಟಿಸಿ ಹಾಗೂ ಕೆಎಸ್​ಆರ್​ಟಿಸಿ ಬಸ್​ ಚಾಲಕರು ಹಾಗೂ ನಿರ್ವಾಹಕರಿಗೆ ನೀಡುತ್ತಿರುವ ತರಬೇತಿಯಿಂದಾಗಿ ಅಪಘಾತ ಸಂಖ್ಯೆಗಳಲ್ಲಿ ಗಣನೀಯ ಇಳಿಕೆಯಾಗಿದೆ ಎಂದು ನಗರ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಎಂ.ಎನ್.ಅನುಚೇತ್ ತಿಳಿಸಿದ್ದಾರೆ.

BMTC Bus
ಬಿಎಂಟಿಸಿ ಬಸ್​ (ETV Bharat)

ಬೆಂಗಳೂರು: ಕಿಲ್ಲರ್ ಎಂದೇ ಹಣೆಪಟ್ಟಿ ಹೊತ್ತಿಕೊಂಡಿದ್ದ ಬಿಎಂಟಿಸಿ ಬಸ್ ಇದೀಗ ಆರೋಪದಿಂದ ವಿಮುಕ್ತಗೊಂಡಿದೆ.‌ ಸಂಚಾರ ಪೊಲೀಸರ ನಿರಂತರ ತರಬೇತಿ ಹಿನ್ನೆಲೆಯಲ್ಲಿ ಸರ್ಕಾರಿ ಬಸ್​ಗಳಿಂದ ನಗರದಲ್ಲಿ ಸಂಭವಿಸುತ್ತಿದ್ದ ಅಪಘಾತ ಪ್ರಮಾಣದಲ್ಲಿ ಗಣನೀಯ ಇಳಿಕೆಯಾಗಿದೆ. ಟ್ರಾಫಿಕ್ ಪೊಲೀಸರು ಚಾಲಕರಿಗೆ ಸುರಕ್ಷಿತ ಬಸ್ ಚಾಲನೆ ಬಗ್ಗೆ ತರಬೇತಿ ನೀಡುತ್ತಿರುವ ಪರಿಣಾಮ ಈ ವರ್ಷ 4 ಅಪಘಾತ ಪ್ರಕರಣಗಳು ದಾಖಲಾಗಿರುವುದು ಹೊರತುಪಡಿಸಿ ಹೆಚ್ಚಿನ ಸಂಖ್ಯೆಯಲ್ಲಿ ಅಪಘಾತ ಪ್ರಕರಣಗಳು ದಾಖಲಾಗಿಲ್ಲ.

ಈ ಹಿಂದೆ ಸರಿಯಾದ ನಿರ್ವಹಣೆ ಇಲ್ಲದೆ, ಬ್ರೇಕ್​ಗಳು ಸರಿ ಇರದ ಕಾರಣ ಬಸ್​ಗಳಿಂದ ಅಪಘಾತವಾಗುತ್ತಿದೆ ಎಂಬ ದೂರುಗಳು ಕೇಳಿಬಂದಿತ್ತು. ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ಬಿಎಂಟಿಸಿ ಹಾಗೂ ಕೆಎಸ್​ಆರ್​ಟಿಸಿ ಬಸ್​ಗಳಲ್ಲಿ ಸಾಕಷ್ಟು ಸುಧಾರಣೆ ಕಂಡು ಬಂದಿದ್ದರೂ ಅಪಘಾತಗಳ ಸಂಖ್ಯೆ ಕಡಿಮೆಯಾಗಿರಲಿಲ್ಲ. ಈ ಬಗ್ಗೆ ಪರಿಹಾರ ಕಂಡುಕೊಳ್ಳುವ ಸಲುವಾಗಿ ನಗರದಲ್ಲಿ ಬಿಎಂಟಿಸಿ ಹಾಗೂ ಕೆಎಸ್​ಆರ್​ಟಿಸಿಯಲ್ಲಿ ಕೆಲಸ ಮಾಡುವ ಸಾವಿರಾರು ಸಂಖ್ಯೆಯ ಚಾಲಕರು, ನಿರ್ವಾಹಕರಿಗೆ ಸಂಚಾರಿ ಪೊಲೀಸರು ಟ್ರಾಫಿಕ್ ಮ್ಯಾನೇಜ್ಮೆಂಟ್ ಸೆಂಟರ್​ನಲ್ಲಿ ತರಬೇತಿ ನೀಡುತ್ತಿದ್ದಾರೆ.

ಈ ವರ್ಷ ಬಿಎಂಟಿಸಿ ದುರಂತಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆ
ಈ ವರ್ಷ ಬಿಎಂಟಿಸಿ ದುರಂತಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆ (ETV Bharat)

ತರಬೇತಿ ಸಮಯದಲ್ಲಿ ಚಾಲಕರು ಹಾಗೂ ನಿರ್ವಾಹಕರು ಮುಖ್ಯವಾಗಿ ಸಮಯ ನಿರ್ವಹಣೆ ಸಮಸ್ಯೆ, ಸರಿಯಾದ ಸಮಯದಲ್ಲಿ ನಿಗದಿಯಾದ ಸ್ಥಳಕ್ಕೆ ಹೋಗಬೇಕು‌, ಸರಿಯಾದ ವಿಶ್ರಾಂತಿ ಇಲ್ಲದಿರುವುದು, ಸುಮಾರು ದಿನಕ್ಕೆ 10-12 ಗಂಟೆಗಳ ಕಾಲ ಕರ್ತವ್ಯ ನಿರ್ವಹಣೆ ಸೇರಿದಂತೆ ಹಲವು ಸಮಸ್ಯೆಗಳ ಬಗ್ಗೆ ಆಳಲು ತೊಂಡಿಕೊಂಡಿದ್ದರು. ಇದಕ್ಕೆ‌ ಪರಿಹಾರ ಎಂಬಂತೆ ಒತ್ತಡ ಸಂದರ್ಭದಲ್ಲಿ ಹೇಗೆ ಕಾರ್ಯನಿರ್ವಹಿಸಬೇಕು. ಜಾಗರೂಕತೆಯಿಂದ ಹೇಗೆ ವಾಹನ ಚಲಾಯಿಸಬೇಕು. ರಸ್ತೆ ತಿರುವುಗಳಲ್ಲಿ ಯಾವ ರೀತಿ ಮುಂಜಾಗ್ರತೆ ತೆಗೆದುಕೊಳ್ಳಬೇಕು ಎಂಬುದರ ಸಂಪೂರ್ಣ ತರಬೇತಿ ಚಾಲಕರಿಗೆ ನೀಡಲಾಗಿದೆ.

ಇನ್ನು ಅಪಘಾತಗಳು ಹೆಚ್ಚಾಗಿ ಸಂಜೆ ಹಾಗೂ ಮುಂಜಾನೆ ವೇಳೆಯೇ ಘಟಿಸುತ್ತಿದ್ದು, ಆ ಸಂದರ್ಭದಲ್ಲಿ ಬಸ್ ಚಾಲಕರು ಯಾವ ರೀತಿ ಎಚ್ಚರಿಕೆಯಿಂದಿರಬೇಕು ಎಂಬುದನ್ನೂ ತರಬೇತಿಯಲ್ಲಿ ಹೇಳಿಕೊಡಲಾಗಿದೆ. ಈ ತರಬೇತಿಯಿಂದ ಅಪಘಾತ ಪ್ರಕರಣಗಳು ಗಣನೀಯವಾಗಿ ಇಳಿಕೆಯಾಗಿದೆ.

"2022ರಲ್ಲಿ ಒಟ್ಟು 33 ಬಸ್ ಅಪಘಾತ ಪ್ರಕರಣಗಳು ದಾಖಲಾಗಿದ್ದರೆ, 2023ರಲ್ಲಿ 35 ಪ್ರಕರಣಗಳು ದಾಖಲಾಗಿವೆ. ಅಶ್ಚರ್ಯ ಎಂದರೆ ಪೊಲೀಸರ ತರಬೇತಿ ಬಳಿಕ ಈ ವರ್ಷ ದಾಖಲಾದ ಕೇಸ್​ಗಳು ಕೇವಲ 4. ಈ ಅಂಕಿ - ಅಂಶ ಪರಿಗಣಿಸಿದಾಗ ತರಬೇತಿ ಕಾರ್ಯಾಗಾರ ಬಹುತೇಕ ಯಶಸ್ವಿಯಾಗಿದೆ" ಎಂದು ನಗರ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಎಂ.ಎನ್.ಅನುಚೇತ್ ತಿಳಿಸಿದ್ದಾರೆ.

ಈ ವರ್ಷ ದಿನಕ್ಕೆ 50 ಮಂದಿಯಂತೆ ಒಟ್ಟು 8,500 ಚಾಲಕ ಹಾಗೂ ನಿರ್ವಾಹಕರಿಗೆ ತರಬೇತಿಯನ್ನು ನೀಡಲಾಗಿದ್ದು, ಸದ್ಯ ಈ ತರಬೇತಿ ಕಾರ್ಯಾಗಾರವನ್ನು ಮುಂದುವರೆಸಲಾಗುವುದು ಎಂದು ಟ್ರಾಫಿಕ್ ಪೊಲೀಸರು ತಿಳಿಸಿದ್ದಾರೆ.

ಬಸ್ ಅಪಘಾತಗಳ ವಿವರ:

ವರ್ಷಅಪಘಾತಗಳ ಸಂಖ್ಯೆ
202127
202233
202335
20244

ಇದನ್ನೂ ಓದಿ: ಬಿಎಂಟಿಸಿ ಬಸ್ ಡಿಕ್ಕಿಯಾಗಿ ಪಾದಚಾರಿ ಸಾವು; ಮೂವರು ಗಂಭೀರ - Bus Accident

Last Updated : Jul 30, 2024, 7:25 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.