ETV Bharat / state

ಬೆಂಗಳೂರಲ್ಲಿ ಡೇಟಿಂಗ್ ಹೋದವನ ಮೇಲೆ ನಾಲ್ವರಿಂದ ಹಲ್ಲೆ; ಪ್ರಕರಣ ದಾಖಲು - assault case

ಡೇಟಿಂಗ್ ಹೋದವನ ಮೇಲೆ ನಾಲ್ವರು ಹಲ್ಲೆ ಮಾಡಿರುವ ಘಟನೆ ಮಡಿವಾಳ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
author img

By ETV Bharat Karnataka Team

Published : Jan 20, 2024, 2:30 PM IST

ಬೆಂಗಳೂರು: ಡೇಟಿಂಗ್ ಆ್ಯಪ್​ನಲ್ಲಿ ಪರಿಚಯವಾಗಿದ್ದ ವ್ಯಕ್ತಿಯನ್ನು ರಾತ್ರೋರಾತ್ರಿ ಮನೆಗೆ ಕರೆಯಿಸಿಕೊಂಡು ಆತನನ್ನ ಹಣಕ್ಕೆ ಒತ್ತಾಯಿಸಿ, ನಾಲ್ವರು ಹಲ್ಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದ್ದು, ಈ ಸಂಬಂಧ ಮಡಿವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಮಮೂರ್ತಿನಗರ ಎನ್ಐಆರ್ ಲೇಔಟ್ ಯುವಕನೊಬ್ಬ ನೀಡಿದ ದೂರಿನ ಮೇರೆಗೆ ಮಡಿವಾಳ ಪೊಲೀಸರು ನಾಲ್ವರ ವಿರುದ್ಧ ಹಲ್ಲೆ ಪ್ರಕರಣ ದಾಖಲಿಕೊಂಡು, ಆರೋಪಿಗಳ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ. ಹಲ್ಲೆಗೊಳಗಾಗಿರುವ ಯುವಕ ಸಲಿಂಗಕಾಮಿಯಾಗಿದ್ದು, ಡೇಟಿಂಗ್ ಆ್ಯಪ್​ವೊಂದರಲ್ಲಿ ನೋಂದಾಯಿಸಿದ್ದ.‌ ಇದೇ ಆ್ಯಪ್​ನಲ್ಲಿ ಯುವಕನೊಬ್ಬನನ್ನು ಪರಿಚಯಿಸಿಕೊಂಡಿದ್ದ.‌ ಫೋನ್ ನಂಬರ್ ಪಡೆದು ತಾವರೆಕೆರೆಯಲ್ಲಿರುವ ಮನೆಗೆ ಬರುವಂತೆ ಜನವರಿ 10 ರಂದು ಅಪರಿಚಿತ ಆರೋಪಿಯೊಬ್ಬ ಆಹ್ವಾನಿಸಿದ್ದ.

ಪರಿಚಿತನ ಸೂಚನೆ ಮೇರೆಗೆ ಅಂದು ರಾತ್ರಿ ಯುವಕ, ಆರೋಪಿಯ ಮನೆಗೆ ಹೋಗಿದ್ದ. ಈ ವೇಳೆ ಆರೋಪಿ ಮನೆಯಲ್ಲಿ ಇನ್ನೂ ಮೂವರು ಉಳಿದುಕೊಂಡಿದ್ದರು‌‌‌. ಈ ವೇಳೆ, ಹಣ ನೀಡುವಂತೆ ನಾಲ್ವರು ಒತ್ತಾಯಿಸಿದ್ದಾರೆ. ಹಣವಿಲ್ಲ ಎಂದಾಗ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಬೆಲ್ಟ್ ನಿಂದ ಹೊಡೆದು ಮನಬಂದಂತೆ ಹಲ್ಲೆ ಮಾಡಿದ್ದಾರೆ. ಹೊಸೂರು ರಸ್ತೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಜ.12 ರಂದು ನೀಡಿದ ದೂರಿನ ಮೇರೆಗೆ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ಬಂಧನಕ್ಕಾಗಿ ಶೋಧ ಕಾರ್ಯ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ವಿಜಯಪುರ: ಮನೆ ಮುಂದೆ ನವಜಾತ ಗಂಡು ಶಿಶುವಿನ ಮೃತದೇಹ ಇಟ್ಟು ಪರಾರಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.