ETV Bharat / state

ಬೆಂಗಳೂರು: ಹಣ ವರ್ಗಾವಣೆ ಸೋಗಿನಲ್ಲಿ ಯಾಮಾರಿಸುತ್ತಿದ್ದ ವಂಚಕನ ಬಂಧನ - ಮಾಗಡಿ ರೋಡ್​ ಠಾಣೆ ಪೊಲೀಸರು

ಎಟಿಎಂ ಡೆಪಾಸಿಟ್ ಇಡಲು ಬರುವ ಸಾರ್ವಜನಿಕರನ್ನು ನಂಬಿಸಿ ಹಣ ಪಡೆದು ವಂಚಿಸುತ್ತಿದ್ದ ಆರೋಪಿಯನ್ನು ಮಾಗಡಿ ರೋಡ್​ ಠಾಣೆ ಪೊಲೀಸರು ಬಂಧಿಸಿದ್ದಾರೆ.

accused sayil
ಆರೋಪಿ ಸಾಯಿಲ್
author img

By ETV Bharat Karnataka Team

Published : Jan 24, 2024, 1:03 PM IST

ಬೆಂಗಳೂರು: ಎಟಿಎಂ ಸೆಂಟರ್​ನಲ್ಲಿ ಹಣ ಠೇವಣಿಯಿಡುವ ಅಮಾಯಕರನ್ನು ಗುರಿಯಾಗಿಸಿ ಹಣ ವರ್ಗಾವಣೆ ಮಾಡಿಕೊಳ್ಳುವ ಸೋಗಿನಲ್ಲಿ ವಂಚಿಸುತ್ತಿದ್ದ ವಂಚಕನನ್ನು ಮಾಗಡಿ ರೋಡ್​ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಆರ್​.ಟಿ.ನಗರದ ಸಾಯಿಲ್​ ಬಂಧಿತ ಆರೋಪಿ. 24 ವರ್ಷದ ಸಾಯಿಲ್​, ಅವಿವಾಹಿತನಾಗಿದ್ದು, ಕಡಿಮೆ ಸಮಯದಲ್ಲಿ ಹೆಚ್ಚು ಹಣ ಸಂಪಾದಿಸುವ ದೃಷ್ಟಿಯಿಂದ ವಾಮಾಮಾರ್ಗದ ಮೂಲಕ ವಂಚಿಸುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದ. ನಗರದಲ್ಲಿರುವ ಎಟಿಎಂ ಕೇಂದ್ರಗಳ ಮುಂದೆ ನಿಂತು ಹಣ ಡೆಪಾಸಿಟ್​ಗೆ ಬರುವ ಅಮಾಯಕರನ್ನು ಟಾರ್ಗೆಟ್ ಮಾಡಿಕೊಳ್ಳುತ್ತಿದ್ದ.

ತುರ್ತು ಹಣ ಬೇಕಾಗಿದ್ದು ಆನ್​ ಲೈನ್​ ಮೂಲಕ ಹಣ ಕಳಿಸುವುದಾಗಿ ಸಾರ್ವಜನಿಕರ ಬಳಿ ನಿವೇದಿಸಿಕೊಳ್ಳುತ್ತಿದ್ದ. ಈತನ ಮಾತನ್ನು ನಂಬಿ ಡೆಪಾಸಿಟ್ ಇಡುವ ಹಣವನ್ನು ಕೊಡುತ್ತಿದ್ದರು. ಪೂರ್ವನಿರ್ಧರಿತವಾಗಿ ರಚಿಸಿಕೊಂಡಿದ್ದ ನಕಲಿ ಅಪ್ಲಿಕೇಷನ್​ ಮೂಲಕ ಹಣ ಕಳುಹಿಸಿರುವ ರೀತಿ ಫೇಕ್​ ಮೆಸ್ಸೇಜ್ ಸಂದೇಶ ಕಳುಹಿಸಿದ್ದ. ತಮ್ಮ ಮೊಬೈಲ್​ಗೆ ಸಂದೇಶ ಬಂದಿರುವುದನ್ನು ನೋಡಿ ತಮ್ಮ ಖಾತೆಗೆ ಹಣ ಬಂದಿದೆ ಎಂದು ಜನ ನಂಬುತ್ತಿದ್ದರು.

ಹಣ ಕೈಗೆ ಸಿಗುತ್ತಿದ್ದಂತೆ ಸ್ಥಳದಿಂದ ಪರಾರಿಯಾಗುತ್ತಿದ್ದ.‌ ಇದೇ ರೀತಿ ಮಾಗಡಿ ರೋಡ್​ ಪೊಲೀಸ್ ಠಾಣಾ ವ್ಯಾಪ್ತಿಯ ಎರಡು ಕಡೆಗಳಲ್ಲಿ ವಂಚನೆ ಎಸಗುತ್ತಿದ್ದ. ಸಿಸಿಟಿವಿ ಆಧಾರದ ಮೇರೆಗೆ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಮಲ್ಲೇಶ್ವರ, ಸುಬ್ರಮಣ್ಯನಗರ, ರಾಜಾಜಿನಗರ ಪೊಲೀಸ್​ ಠಾಣಾ ವ್ಯಾಪ್ತಿಗಳಲ್ಲಿ ವಂಚಿಸಿರುವುದು ತಿಳಿದುಬಂದಿದೆ. ಆದರೆ‌ ವಂಚನೆಗೊಳಗಾದವರು ಈ‌ ಬಗ್ಗೆ ದೂರು ನೀಡಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಹುಬ್ಬಳ್ಳಿಯ ಹಲವೆಡೆ 116 ಐಟಿ ಅಧಿಕಾರಿಗಳಿಂದ ಏಕಕಾಲಕ್ಕೆ ದಾಳಿ

ಹಿಂದಿನ ಪ್ರಕರಣ:

ಹುಬ್ಬಳ್ಳಿಯಲ್ಲಿ ಬ್ಯಾಂಕ್​​ ಉದ್ಯೋಗಿಗೆ ವಂಚನೆ: ಕಂಪನಿಯೊಂದರಲ್ಲಿ ಹಣ ಹೂಡಿಕೆ ಮಾಡಿದರೆ ಲಾಭಗಳಿಸಬಹುದು ಎಂದು ವ್ಯಕ್ತಿಯೊಬ್ಬ ಬ್ಯಾಂಕ್​ ಉದ್ಯೋಗಿಗೆ 27.78 ಲಕ್ಷ ರೂ. ವಂಚನೆ ಮಾಡಿದ್ದ. ಅಪರಿಚಿತ ವ್ಯಕ್ತಿ ನಕಲಿ ಫೇಸ್‌ಬುಕ್ ಖಾತೆಯಲ್ಲಿ ಹಾಕಿದ್ದ ಲಿಂಕ್ ಅನ್ನು ವಂಚನೆಗೆ ಒಳಗಾದ ಬ್ಯಾಂಕ್​ ಉದ್ಯೋಗಿ ಕ್ಲಿಕ್ ಮಾಡಿದ್ದರು. ಬಳಿಕ ಆರೋಪಿ ಅವರ ಮೊಬೈಲ್ ಸಂಖ್ಯೆಯನ್ನು ವಾಟ್ಸ್‌ಆ್ಯಪ್ ಗ್ರೂಪ್​ವೊಂದಕ್ಕೆ ಸೇರಿಸಿ ಹಣ ಹೂಡುವಂತೆ ಪ್ರೇರೇಪಿಸಿದ್ದನು. ಆರಂಭದಲ್ಲಿ ಸೋಮಶೇಖರ್​ ಅವರಿಂದ ಹಣ ವರ್ಗಾಯಿಸಿಕೊಂಡು ಲಾಭ ನೀಡಿದ್ದಾನೆ. ಬಳಿಕ ಖಾಸಗಿ ಬ್ಯಾಂಕ್‌ನಿಂದ ಹಂತ ಹಂತವಾಗಿ ಲಕ್ಷ ಲಕ್ಷ ರೂ.ವರ್ಗಾಯಿಸಿಕೊಂಡು ವಂಚಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.