ETV Bharat / state

ವಿಧಾನಸಭೆಯ ಪ್ರವೇಶದ್ವಾರ, ಸಭಾಂಗಣಕ್ಕೆ ಹೊಸ ಮೆರಗು; ಶಾಸಕರ ಮೇಲೆ AI ಕ್ಯಾಮರಾ ಕಣ್ಣು! - Monsoon Assembly Session

ವಿಧಾಸಭೆಯಲ್ಲಿ ಆರ್ಟಿಫಿಶಿಯಲ್ ಕ್ಯಾಮರಾ ಅಳವಡಿಸಲಾಗಿದ್ದು, ಶಾಸಕರು ಸದನದಲ್ಲಿ ಎಷ್ಟು ಹೊತ್ತು ಇರಲಿದ್ದಾರೆ ಎನ್ನುವುದನ್ನು ಗಮನಿಸಲಿದೆ. ವಿಧಾನಸಭೆಯ ಪ್ರವೇಶ ದ್ವಾರ ಸೇರಿದಂತೆ ಆಸನಗಳಿಗೆ ಸುವರ್ಣ ಬಣ್ಣದ ಕಟ್ಟುಗಳ ಅಳವಡಿಕೆ ಹಾಗೂ ಗಂಡಭೇರುಂಡ ಚಿತ್ರವಿರುವ ಗಡಿಯಾರಗಳನ್ನು ಅಳವಡಿಸಲಾಗಿದೆ.

author img

By ETV Bharat Karnataka Team

Published : Jul 15, 2024, 6:32 PM IST

MONSOON ASSEMBLY SESSION
ವಿಧಾನಸಭೆ ಅಧಿವೇಶನ (ETV Bharat)
ವಿಧಾನಸಭೆ ಅಧಿವೇಶನ (ETV Bharat)

ಬೆಂಗಳೂರು: ವಿಧಾನಸಭಾ ಸಭಾಂಗಣದ ಪ್ರವೇಶದ್ವಾರವನ್ನು ಹೊಸದಾಗಿ ವಿನ್ಯಾಸಗೊಳಿಸಿರುವುದಲ್ಲದೇ ಸಭಾಂಗಣದ ಒಳಗಿನ ಗೋಡೆಗಳಲ್ಲಿ ಗಂಡಭೇರುಂಡ ಚಿತ್ರವಿರುವ ಗಡಿಯಾರಗಳನ್ನು ಅಳವಡಿಸಲಾಗಿದೆ. ಶಾಸಕರು ಪ್ರವೇಶಿಸುವ ದ್ವಾರಗಳಲ್ಲಿ ವಿಶೇಷ ಕ್ಯಾಮರಾಗಳನ್ನು ಅಳವಡಿಸಲಾಗಿದೆ.

ಆಡಳಿತ ಹಾಗೂ ಪ್ರತಿಪಕ್ಷಗಳ ಶಾಸಕರು ಪ್ರವೇಶಿಸುವ ದ್ವಾರಗಳಲ್ಲಿ ವಿಶೇಷ ಕ್ಯಾಮೆರಾಗಳನ್ನು ಅಳವಡಿಸಿದ್ದು, ಶಾಸಕರು ಸಭಾಂಗಣ ಪ್ರವೇಶಿಸುತ್ತಿದ್ದಂತೆ ಕ್ಯಾಮೆರಾ ಮುಂದೆ ನಿಂತು ಪೋಸ್ ಕೊಟ್ಟು ತಮ್ಮ ಸ್ಥಾನಗಳಿಗೆ ತೆರಳಿದರು. ವಿಧಾನಸಭೆಯ ಎಲ್ಲಾ ಶಾಸಕರ ಕುರ್ಚಿಗಳ ಮುಂದಿರುವ ಮೇಜುಗಳಿಗೆ ಸುವರ್ಣ ಬಣ್ಣದ ಲೋಹದ ಕಟ್ಟುಗಳನ್ನು ಅಳವಡಿಸಿರುವುದು ಆಕರ್ಷಣೀಯವಾಗಿದೆ.

ವಿಧಾನಸಭೆಯಲ್ಲಿ ಅಳವಡಿಸಲಾಗಿರುವ ಆಸನಗಳು ಇಷ್ಟೂ ದಿನ ಯಾವುದೇ ಅಲಂಕಾರ ಇಲ್ಲದೇ ಸಾಧಾರಣ ಸ್ಥಿತಿಯಲ್ಲಿದ್ದವು. ಅವುಗಳಿಗೆ ಸುವರ್ಣ ಬಣ್ಣದ ಅಲಂಕಾರದ ಕಟ್ಟುಗಳು ಎದ್ದು ಕಾಣುತ್ತಿದ್ದು, ಬೆಳಕಿಗೆ ಮಿಂಚುತ್ತಿದ್ದುದು ವಿಶೇಷವಾಗಿತ್ತು.

ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ಅವರ ಪೀಠದ ಇಕ್ಕೆಲಗಳಲ್ಲಿ ಕೇಸರಿ, ಬಿಳಿ, ಹಸಿರಿನ ಹೂವುಗಳಿಂದ ರಾಷ್ಟ್ರಧ್ವಜದ ಮಾದರಿಯ ಅಲಂಕಾರ ಮಾಡಿರುವುದು ವಿಶೇಷವಾಗಿ ಗಮನ ಸೆಳೆಯುತ್ತಿದೆ. ಸದನದ ಆರಂಭಕ್ಕೆ ಸಂಪ್ರದಾಯದಂತೆ ವಂದೇ ಮಾತರಂ ಗೀತೆಯನ್ನು ಹಾಡಲಾಯಿತು. ನಂತರ ಸಭಾಧ್ಯಕ್ಷ ಯು.ಟಿ.ಖಾದರ್ ಅವರು ಭಾರತದ ಸಂವಿಧಾನದ ಪ್ರಸ್ತಾವನೆಯನ್ನು ಸದನದಲ್ಲಿ ಭೋದಿಸಿದರು.

ವಿಧಾನಸೌಧ ನವೀಕರಣಕ್ಕೆ ಸಿಎಂ, ಡಿಸಿಎಂ ಸೇರಿದ ಸದನ ಸದಸ್ಯರ ಮೆಚ್ಚುಗೆ: ವಿಧಾನಸೌಧದ ಪಶ್ಚಿಮ ದ್ವಾರ ವಿಧಾನಸಭಾ ಸಭಾಂಗಣದ ದ್ವಾರ ಬಾಗಿಲು ನವೀಕರಣ ಸೇರಿದಂತೆ ಸದನದೊಳಗಡೆ ವಿವಿಧ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ನವೀಕರಣ ಮಾಡಿರುವ ಸಭಾಧ್ಯಕ್ಷ ಯು.ಟಿ.ಖಾದರ್ ಅವರ ಕಾರ್ಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಸಂತಾಪ ಸೂಚನೆ ಕುರಿತು ಚರ್ಚೆ ನಡೆಯುತ್ತಿದ್ದ ವೇಳೆ ಉಪಮುಖ್ಯಮಂತ್ರಿ ಡಿಕೆಶಿ, ವಿಧಾನಸಭೆಯ ನೂತನ ಅಲಂಕಾರಕ್ಕಾಗಿ ಸಭಾಧ್ಯಕ್ಷರನ್ನು ಅಭಿನಂದಿಸಿದರು. ಪ್ರವೇಶ ದ್ವಾರಕ್ಕೆ ಹೊಸ ರೂಪ ನೀಡಲಾಗಿದೆ. ಜೊತೆಗೆ ಆಸನಗಳಿಗೆ ಸುವರ್ಣ ಬಣ್ಣದ ಕಟ್ಟುಗಳ ಅಳವಡಿಕೆ ಹಾಗೂ ಗಂಡಭೇರುಂಡ ಚಿತ್ರವಿರುವ ಗಡಿಯಾರಗಳು ಆಕರ್ಷಣೀಯವಾಗಿವೆ. ಇದಕ್ಕಾಗಿ ಎಲ್ಲಾ ಸದಸ್ಯರ ಪರವಾಗಿ ಸಭಾಧ್ಯಕ್ಷರನ್ನು ಅಭಿನಂದಿಸುವುದಾಗಿ ಹೇಳಿದರು.

ವಿಧಾನಸೌಧ ನವೀಕರಣಗೊಳಿಸಿ ಹೊಸರೂಪ ನೀಡಿರುವುದು, ಸಂವಿಧಾನ ಪ್ರಸ್ತಾವನೆಯನ್ನು ಅಳವಡಿಸಿರುವುದು ಖುಷಿ ತಂದಿದೆ; ತಮ್ಮ ಕಾಲದಲ್ಲಿ ಇದು ಆಗಿರುವುದು ಸಂತೋಷದ ವಿಷಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.

ಎಐ ಕ್ಯಾಮೆರಾ ಮೂಲಕ ನಿಗಾ: ವಿಧಾಸಭೆಯಲ್ಲಿ ಆರ್ಟಿಫಿಶಿಯಲ್ ಕ್ಯಾಮರಾ (ಎಐ ಕ್ಯಾಮರಾ) ಅಳವಡಿಸಲಾಗಿದ್ದು, ಎಷ್ಟು ಗಂಟೆಗೆ ಒಳಬರುತ್ತೀರಿ, ಎಷ್ಟು ಗಂಟೆಗೆ ಹೊರಗಡೆ ಹೋಗುತ್ತೀರಿ, ಎಷ್ಟು ಹೊತ್ತು ಸದನದ ಒಳಗಡೆ ಕುಳಿತುಕೊಳ್ಳುತ್ತೀರಿ ಎಂಬುದರ ಸಂಪೂರ್ಣ ಮಾಹಿತಿ ಎಐ ಕ್ಯಾಮರಾಗಳಿಂದ ಸಿಗಲಿದೆ ಎಂದು ಸ್ಪೀಕರ್ ಹೇಳಿದರು.

ಛತ್ತೀಸಘಡ್ ಮಾಜಿ ಸಿಎಂ, ಕೇಂದ್ರ ಮಾಜಿ ಸಚಿವರ ವೀಕ್ಷಣೆ: ಕರ್ನಾಟಕ ವಿಧಾನಸಭೆಯ ಅಧಿವೇಶನವನ್ನು ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತು ಛತ್ತೀಸಘಡ್ ಮಾಜಿ ಮುಖ್ಯಮಂತ್ರಿ ಭೂಪೇಶ್ ಭಗೇಲ್ ಹಾಗೂ ಕೇಂದ್ರ ಮಾಜಿ ಸಚಿವರಾದ ಪ್ರದೀಪ್ ಜೈನ್ ಅವರು ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತು ವೀಕ್ಷಿಸಿದರು.

ಸಭಾಧ್ಯಕ್ಷರಾದ ಯು.ಟಿ.ಖಾದರ್ ಅವರು, ಛತ್ತೀಸಘಡ್ ಮಾಜಿ ಮುಖ್ಯಮಂತ್ರಿ ಭೂಪೇಶ್ ಭಗೇಲ್ ಹಾಗೂ ಕೇಂದ್ರ ಮಾಜಿ ಸಚಿವರಾದ ಪ್ರದೀಪ್ ಜೈನ್ ಅವರನ್ನು ಇದೇ ಸಂದರ್ಭದಲ್ಲಿ ಸ್ವಾಗತಿಸಿದರು. ಒಂದು ಗಂಟೆಗೂ ಹೆಚ್ಚು ಕಾಲ ಮಾಜಿ ಸಿಎಂ ಮತ್ತು ಕೇಂದ್ರದ ಮಾಜಿ ಸಚಿವರು ಕಲಾಪ ವೀಕ್ಷಿಸಿ ತೆರಳಿದರು.

ರಾಹುಲ್ ದ್ರಾವಿಡ್ ಅವರಿಗೆ ಅಭಿನಂದಿಸಿ: ಟಿ-20 ವಿಶ್ವಕಪ್ ಸರಣಿಯನ್ನು ಗೆದ್ದ ಭಾರತ ತಂಡಕ್ಕೆ ಮತ್ತು ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿರುವ ಕನ್ನಡಿಗ ರಾಹುಲ್ ದ್ರಾವಿಡ್ ಅವರಿಗೆ ಸದನ ಅಭಿನಂದನೆ ಸಲ್ಲಿಸಬೇಕು ಎಂದು ಬಿಜೆಪಿ ಶಾಸಕ ಸುರೇಶ್ ಕುಮಾರ್ ಆಗ್ರಹಿಸಿದರು.

ಸಂತಾಪ ಸೂಚನೆಯ ನಂತರ ನಡೆದ ಪ್ರಕ್ರಿಯೆಗಳ ಭಾಗದ ನಡುವೆ ಮಧ್ಯಪ್ರವೇಶಿಸಿದ ಸುರೇಶ್ ಕುಮಾರ್ ಅವರು, ಟಿ-20 ಸರಣಿಯಲ್ಲಿ ಭಾರತ ತಂಡ ವಿಶ್ವಕಪ್ ಗೆದ್ದಿದೆ. ಇದು ದೇಶಕ್ಕೆ ಹೆಮ್ಮೆಯ ವಿಚಾರ. ಗೆಲುವಿನಲ್ಲಿ ನಮ್ಮ ಕನ್ನಡಿಗರಾದ ರಾಹುಲ್ ದ್ರಾವಿಡ್ ಅವರ ಪಾತ್ರ ಮಹತ್ವದ್ದಾಗಿದೆ. ಅವರಿಗೆ ಅಭಿನಂದನೆ ಸಲ್ಲಿಸುವ ನಿರ್ಣಯವನ್ನು ಈ ಸದನ ಅಂಗೀಕರಿಸಬೇಕು ಎಂದು ಸಲಹೆ ನೀಡಿದರು.

ಇದಕ್ಕೆ ಸ್ಪಂದಿಸಿದ ಸ್ಪೀಕರ್, ವಿಶ್ವಕಪ್ ಗೆಲುವಿಗೆ ಅಭಿನಂದನೆ ಸಲ್ಲಿಸುವ ನಿರ್ಧಾರವಾಗಿದೆ. ಸಂತಾಪ ಸೂಚನೆ ಬಳಿಕ ಈ ಪ್ರಕ್ರಿಯೆಯನ್ನು ಕೈಗೆತ್ತಿಕೊಳ್ಳುವ ಉದ್ದೇಶವಿತ್ತು ಎಂದು ಹೇಳಿದರು.

ಸ್ಪೀಕರ್ ಪೀಠದ ಇಕ್ಕೆಲಗಳಲ್ಲಿ ಕೇಸರಿ, ಬಿಳಿ, ಹಸಿರಿನ ಹೂವುಗಳಿಂದ ರಾಷ್ಟ್ರಧ್ವಜದ ಮಾದರಿಯ ಅಲಂಕಾರ ಮಾಡಿರುವುದು ವಿಶೇಷವಾಗಿದೆ. ಆದರೆ, ಅದರ ಮಧ್ಯೆ ಅಶೋಕ ಚಕ್ರ ಹಾಕಿ, ಇಲ್ಲದಿದ್ದರೆ ಅದು ಕಾಂಗ್ರೆಸ್ ಬಾವುಟವಾಗುತ್ತದೆ ಎಂದು ಬಿಜೆಪಿ ಶಾಸಕ ಮುನಿರಾಜು ಅವರು ಸಲಹೆ ನೀಡಿದರು. ಇದಕ್ಕೆ ಸ್ಪೀಕರ್ ಸಕಾರಾತ್ಮಕವಾಗಿ ಸ್ಪಂದಿಸಿದರು.

ಇದನ್ನೂ ಓದಿ: ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರಾಗಿ ಶಾಸಕ ಸುರೇಶ್ ಬಾಬು ನೇಮಕ - LEADER OF JDS LEGISLATURE PARTY

ETV Bharat Logo

Copyright © 2024 Ushodaya Enterprises Pvt. Ltd., All Rights Reserved.